Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ದಲಿತ ಸೋದರಿಯರ ಸಾವು ಪ್ರಕರಣ: ಆರು ಮಂದಿ ಬಂಧನ

ಲಖೀಂಪುರ ಖೇರಿ: ಉತ್ತರ ಪ್ರದೇಶದ ಲಖಿಂಪುರ್ ಖೇರಿಯ ನಿಘಾಸನ್‌ನಲ್ಲಿ ಇಬ್ಬರು ದಲಿತ ಅಪ್ರಾಪ್ತ ಸಹೋದರಿಯರ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಆರು ಜನರನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯರು ನಿನ್ನೆ ತಮ್ಮ ಮನೆಯಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಕಬ್ಬಿನ ಗದ್ದೆಯಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ಜುನೈದ್, ಸೊಹೈಲ್, ಹಫೀಜುರ್ ರೆಹಮಾನ್, ಕರೀಮುದ್ದೀನ್, ಆರಿಫ್ ಮತ್ತು ಚೋಟುವನ್ನು ಬಂಧಿಸಿದ್ದೇವೆ ಎಂದು ಲಖಿಂಪುರ ಖೇರಿ ಪೊಲೀಸ್ ವರಿಷ್ಠಾಧಿಕಾರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಜುನೈದ್ ಮತ್ತು ಸೊಹೈಲ್ ಇಬ್ಬರು ಸಹೋದರಿಯರೊಂದಿಗೆ ಸಂಬಂಧ ಹೊಂದಿದ್ದರು ಎಂದು ಎಸ್ಪಿ ಹೇಳುತ್ತಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಜುನೈದ್ ಮತ್ತು ಸೊಹೈಲ್ ಸಹೋದರಿಯರ ಮನವೊಲಿಸಿ ಮನೆಯಿಂದ ಹೊರಗೆ ಕರೆದುಕೊಂಡು ಬಂದಿದ್ದಾರೆ. ಜುನೈದ್ ಮತ್ತು ಸೊಹೈಲ್ ಅವರು ಬಾಲಕಿಯರ ಮೇಲೆ ಅತ್ಯಾಚಾರದ ನಂತರ ಕತ್ತು ಹಿಸುಕಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಎಸ್ಪಿ ಹೇಳಿದರು.

ಲಖಿಂಪುರ ಖೇರಿಯ 15 ಮತ್ತು 17 ವರ್ಷದ ದಲಿತ ಹೆಣ್ಣುಮಕ್ಕಳನ್ನು ಇಬ್ಬರು ಆರೋಪಿಗಳು ಮದುವೆ ಮಾಡಿಕೊಳ್ಳುವುದಾಗಿ ಪುಸಲಾಯಿಸಿ ಕಬ್ಬಿನ ಗದ್ದೆ ಬಳಿ ಕರೆದೊಯ್ದಿದ್ದರು. ಅಲ್ಲಿ ಇತರೆ ನಾಲ್ವರ ಜತೆಗೂಡಿ ಅತ್ಯಾಚಾರ ಎಸಗಿ, ಅವರ ಕತ್ತುಹಿಸುಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮ್ಮ ಮಕ್ಕಳನ್ನು ಅತ್ಯಾಚಾರವೆಸಗಿ ಹತ್ಯೆ ಮಾಡಲಾಗಿದೆ ಎಂದು ಬಾಲಕಿಯರ ತಾಯಿ ನಿನ್ನೆ ಪೊಲೀಸರಿಗೆ ದೂರು ನೀಡಿದ್ದರು.

No Comments

Leave A Comment