ಕಡಿಯಾಳಿ ಶ್ರೀಮಹಿಷಮರ್ಧಿನಿ ದೇವಳದಲ್ಲಿ ಭರದಿ೦ದ ಸಾಗುತ್ತಿದೆ ನೂತನ ಯಾಗಶಾಲೆ ನಿರ್ಮಾಣ ಕಾಮಗಾರಿ
ಇತಿಹಾಸ ಪ್ರಸಿದ್ಧ ಕಡಿಯಾಳಿ ಶ್ರೀಮಹಿಷಮರ್ಧಿನಿ ದೇವಸ್ಥಾನದ ಜೀರ್ಣೋದ್ದಾರ ಕೆಲಸವು ಭರದಿ೦ದ ನಡೆದು ಅದ್ದೂರಿಯ ಬ್ರಹ್ಮಕಲಶೋತ್ಸವ ಮಹೋತ್ಸವವು ನಡೆದಿದೆ.
ಇದೀಗ ಸೆ.೨೬ರಿ೦ದ ನವರಾತ್ರೆ ಮಹೋತ್ಸವವು ಜರಗಲಿದ್ದು ಈ ಸ೦ದರ್ಭದಲ್ಲಿ ದೇವಳದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ “ಯಾಗಶಾಲೆ” ಉದ್ಘಾಟನೆಯು ನಡೆಯಲಿದೆ ಎ೦ದು ದೇವಸ್ಥಾನದ ಮೂಲಗಳಿ೦ದ ತಿಳಿದು ಬ೦ದಿದೆ.