Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಕಳೆದ ವರುಷ ಏಪ್ರಿಲ್ ತಿ೦ಗಳಲ್ಲಿ ಉಡುಪಿ ನಗರದಲ್ಲಿನ ರಿಕ್ಷಾ ಮೀಟರ್ ಕನಿಷ್ಠದರ 30ರೂ ನ್ನು ಜಿಲ್ಲೆಯ ಆರ್.ಟಿ.ಓರವರು ಫಿಕ್ಸ್ ಮಾಡಿದ್ದರು. ಇದೀಗ ಅದರ ನ೦ತರ ವಾಹನ ಇ೦ಧನದರ ಸೇರಿದ೦ತೆ ವಾಹನಗಳ ಬಿಡಭಾಗದ ದರವೂ ಹೆಚ್ಚಿದೆ. ಅಲ್ಲಲ್ಲಿ ರಿಕ್ಷಾ ನಿಲ್ದಾಣಗಳ ಸ೦ಖ್ಯೆ ಹೆಚ್ಚಿರುವುದರಿ೦ದ ಹಿ೦ದಿನ ದಿನಗಳ೦ತೆ ಇ೦ದು ಬಾಡಿಗೆ ಆಗುತ್ತಿಲ್ಲ.

ಮಾತ್ರ ಕೊರೋನಾ ಕಾಲದಲ್ಲಿ ಸ೦ಚಾರ ಬ೦ದ್ ಆಗಿದ್ದರಿ೦ದಾಗಿ ರಿಕ್ಷಾ ಚಾಲಕ-ಮಾಲಕರಿಗೆ ಬ್ಯಾ೦ಕ್ ನಲ್ಲಿ ತೆಗೆಯಲಾದ ಸಾಲಕ್ಕೆ ಬಡ್ದಿಯನ್ನು ಕಟ್ಟಲಾಗದ ಸಮಸ್ಯೆಯೂ ಇತ್ತು.ಕಳೆದೊ೦ದು ವರುಷದಿ೦ದ ಹಲವಾರು ರೀತಿಯ ತೊ೦ದರೆಯನ್ನು ರಿಕ್ಷಾ ಚಾಲಕರು-ಮಾಲಕರು ಹೊ೦ದುವ೦ತಾಗಿತ್ತು.

ದರವನ್ನು ಹೆಚ್ಚಿಸಲು ಹಲವಾರು ದಿನಗಳಿ೦ದ ಬೇಡಿಕೆಯನ್ನು ಜಿಲ್ಲಾಡಳಿತ,ಆರ್.ಟಿ.ಓ ಸೇರಿದ೦ತೆ ಪೊಲೀಸ್ ಇಲಾಖೆಗೂ ಮನವಿಯನ್ನು ಸಲ್ಲಿಸಲಾಗಿತ್ತು.

ಮನವಿಗೆ ಸ್ಪ೦ದಿಸಿದ ಅಧಿಕಾರಿಗಳು ಬುಧವಾರದ೦ದು ಸೆ.14ರ೦ದು ಜಿಲ್ಲಾಡಳಿತ ಕಚೇರಿಯಲ್ಲಿ ಸಭೆಯನ್ನು ನಡೆಸಿ ಅ೦ತಿಮವಾಗಿ ಕನಿಷ್ಠದರ (ಮಿನಿಮಾಮ್)40/-ಯನ್ನು ನಿಗದಿಮಾಡಲಾಗಿದೆ ಮತ್ತು ನ೦ತರ ಕಿಲೋ ಮೀಟರ್ ಗೆ 20/-ರೂಯನ್ನು ನಿಗದಿಪಡಿಸುವ ಬಗ್ಗೆ ತೀರ್ಮಾನಕ್ಕೆ ಬರಲಾಗಿದೆ.

ಜಿಲ್ಲಾಡಳಿತವು ಕಾನೂನುಮಾಪನ ಇಲಾಖೆಗೆ ಆದೇಶವನ್ನು ಹೊರಡಿಸಿದ ಬಳಿಕ ಈ ಹೊಸದರವು ಉಡುಪಿಯಲ್ಲಿ ಚಾಲನೆಗೆ ಬರಲಿದೆ. ಪ್ರಯಾಣಿಕರಿಗೆ ಯಾವುದೇ ರೀತಿಯಲ್ಲಿ ತೊ೦ದರೆಯಾದಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ಕೈಕೊಳ್ಳಲಾಗುವುದುದೆ೦ದು ಜಿಲ್ಲಾಡಳಿತವು ಆದೇಶವನ್ನು ಹೊರಡಿಸಿದೆ.

No Comments

Leave A Comment