Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಇಂಜಿನಿಯರ್ ದಿನಾಚರಣೆ: ಪಾಡಿಗಾರು ಲಕ್ಷ್ಮೀ ನಾರಾಯಣ ಉಪಾದ್ಯಾರಿಗೆ ಲಯನ್ಸ್ ಕ್ಲಬ್ ವತಿಯಿ೦ದ ಸನ್ಮಾನ

ಉಡುಪಿ: ಲಯನ್ಸ್ ಕ್ಲಬ್ ಬ್ರಹ್ಮಗಿರಿ ಉಡುಪಿ ಇದರ ಆಶ್ರಯದಲ್ಲಿ ಗುರುವಾರದ೦ದು ಇಂಜಿನಿಯರ್ ದಿನಾಚರಣೆ ಪ್ರಯುಕ್ತ ಉಡುಪಿಯ ಗು೦ಡಿಬೈಲಿನ ಪಾಡಿಗಾರು ಲಕ್ಷ್ಮೀ ನಾರಾಯಣ ಉಪಾದ್ಯಾರವರನ್ನು (ಇಂದು) ಕಿದಿಯೂರು ಹೋಟೆಲ್ ನಲ್ಲಿ ಗೌರವಿಸಲಾಯಿತು.
ಸುಮಾರು 39 ವರ್ಷಕ್ಕೂ ಹೆಚ್ಚಿನ ಕಾಲ ಸಿವಿಲ್ ಇಂಜಿನಿಯರ್ ವೃತ್ತಿಯಲ್ಲಿ ಸುಮಾರು 500 ಕ್ಕೂ ಹೆಚ್ಚಿನ ಮನೆ , ಪ್ರಸಿದ್ಧ ಕಟ್ಟಡಗಳನ್ನು ನಿರ್ಮಿಸಿದ ಇವರ ಸೇವೆ ಪರಿಗಣಿಸಿ ಶಾಲು ಹೊದಿಸಿ , ಪ್ರಶಸ್ತಿ ನೀಡಿ ಗೌರವಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಬ್ರಹ್ಮಗಿರಿ ಅಧ್ಯಕ್ಷ ಉಮೇಶ್ ನಾಯಕ್, ಮುಖ್ಯ ಅತಿಥಿ ಕಿದಿಯೂರು ಹೋಟೆಲ್ ಮಾಲಕರಾದ ಭುವನೇಂದ್ರ ಕಿದಿಯೂರು , ಯುವರಾಜ್ ಮಸ್ಕತ್ , ಲಯನ್ಸ್ ಜಿಲ್ಲಾ ಸಮನ್ವಯ ಅಧಿಕಾರಿ ವಾದಿರಾಜ್ ರಾವ್, ಕಾರ್ಯದರ್ಶಿ ಗೀತಾ ವಿ ರಾವ್ ,ದೇವದಾಸ ಕಾಮತ್, ವಿಲಾಸ ಕುಮಾರ್ ಉಪಸ್ಥಿತರಿದ್ದರು.

No Comments

Leave A Comment