“ಮಗಳು ಜಾನಕಿ” ಖ್ಯಾತಿಯ ಕಿರುತೆರೆ ಕಲಾವಿದ ಮಂಡ್ಯ ರವಿ ನಿಧನ
ಬೆಂಗಳೂರು: ಕಿರುತೆರೆ ಕಲಾವಿದ ಮಂಡ್ಯ ರವಿ ಸೆ.14 ರಂದು ನಿಧನರಾದರು.
ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಕಿರುತೆರೆ ಕಲಾವಿದ ಮಂಡ್ಯ ರವಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕಿರುತೆರೆ ನಿರ್ದೆಶಕ ಟಿಎನ್ ಸೀತಾರಾಮ್ ಅವರ ಮುಕ್ತ ಮುಕ್ತ, ಮಗಳು ಜಾನಕಿ ಮುಂತಾದ ಧಾರಾವಾಹಿಗಳಲ್ಲಿ ತಮ್ಮ ಮನೋಜ್ಞ ನಟನೆಯ ಮೂಲಕ ಮಂಡ್ಯ ರವಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರು.
ಇತ್ತೀಚಿನ ದಿನಗಳಲ್ಲಿ ಕಲಾವಿದರು ಹಠಾತ್ ನಿಧನರಾಗುತ್ತಿರುವುದು ಬಣ್ಣದ ಲೋಕಕ್ಕೆ ಒಂದಾದಮೇಲೆ ಒಂದರಂತೆ ಆಘಾತ ಎದುರಾಗುತ್ತಲೇ ಇದೆ. ಮಂಡ್ಯ ರವಿ ನಿಧನದಿಂದ ಬಣ್ಣದ ಲೋಕಕ್ಕೆ ಸಾಕಷ್ಟು ನಷ್ಟ ಉಂಟಾಗಿದ್ದು, ಕಲಾವಿದನ ಅಗಲುವಿಕೆಗೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.