Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ಅಹ್ಮದಾಬಾದ್ ನಲ್ಲಿ ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಕುಸಿತ: ಏಳು ಕಾರ್ಮಿಕರು ಸಾವು, ಓರ್ವನಿಗೆ ಗಾಯ

ಅಹ್ಮದಾಬಾದ್: ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಕುಸಿದು ಏಳು ಮಂದಿ ಮೃತಪಟ್ಟಿರುವ ಘಟನೆ ಬುಧವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿದೆ. ಲಿಫ್ಟ್ ಕುಸಿದಾಗ ಒಟ್ಟು ಎಂಟು ಮಂದಿ ಲಿಫ್ಟ್‌ನಲ್ಲಿದ್ದರು.

ಗಾಯಗೊಂಡ ಒಬ್ಬನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏಳು ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಅಹ್ಮದಾಬಾದ್ ನ ಮುಖ್ಯ ಅಗ್ನಿಶಾಮಕ ಅಧಿಕಾರಿ ಜಯೇಶ್ ಖಾಡಿಯಾ ತಿಳಿಸಿದ್ದಾರೆ.

ವರದಿಗಳ ಪ್ರಕಾರ, ಏಳನೇ ಮಹಡಿಯಿಂದ ಲಿಫ್ಟ್ ಕುಸಿದಿದೆ. ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಆಸ್ಪೈರ್-2 ಎಂದು ಹೆಸರಿಡಲಾಗಿತ್ತು. ಇದು ಗುಜರಾತ್ ವಿಶ್ವವಿದ್ಯಾಲಯದ ಬಳಿ ಇದೆ.

ಮೃತಪಟ್ಟವರನ್ನು ಸಂಜಯಭಾಯಿ ಬಾಬುಭಾಯ್ ನಾಯಕ್, ಜಗದೀಶ್ ಭಾಯಿ ರಮೇಶಭಾಯ್ ನಾಯಕ್, ಅಶ್ವಿನ್ಭಾಯಿ ಸೋಮ್ಭಾಯ್ ನಾಯಕ್, ಮುಖೇಶ್ ಭಾರತಭಾಯಿ ನಾಯಕ್, ಮುಖೇಶ್ಭಾಯಿ ಭಾರತಭಾಯ್ ನಾಯಕ್, ರಾಜಮಲ್ ಸುರೇಶಭಾಯ್ ಖಾರಾಡಿ ಮತ್ತು ಪಂಕಜಭಾಯಿ ಶಂಕರಭಾಯಿ ಖಾರಾಡಿ ಎಂದು ಗುರುತಿಸಲಾಗಿದೆ.

No Comments

Leave A Comment