Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಐದು ವಾಹನಗಳ ನಡುವೆ ಸರಣಿ ಅಪಘಾತ-ಹಲವರಿಗೆ ಗಾಯ

ಉಳ್ಳಾಲ:ರವಿವಾರ ತಡರಾತ್ರಿ ರಾ.ಹೆ 66ರ ತೊಕ್ಕೊಟ್ಟು ಕಲ್ಲಾಪುವಿನಲ್ಲಿ  ಐದು ವಾಹನಗಳ ನಡುವೆ ಸರಣಿ ಅಪಘಾತ ನಡೆದು ಹಲವರು ಗಾಯಗೊಂಡಿದ್ದಾರೆ.

ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಇನ್ನೋವಾ ಕಾರು ವಾಹನವೊಂದನ್ನು ಓವರ್‌ಟೇಕ್‌ ಮಾಡಲು ಏಕಾಏಕಿ ಎಡಭಾಗಕ್ಕೆ ತಿರುಗಿಸಿದ ಪರಿಣಾಮ ಹಿಂಬದಿಯಲ್ಲಿದ್ದ ಐ20 ಕಾರು  ಒಮ್ಮೆಲೇ ಬ್ರೇಕ್‌ ಹಾಕಿದ್ದರಿಂದ ಕಾರು ಒಂದು ಸುತ್ತು ತಿರುಗಿ ಅದೇ ರಸ್ತೆಯಲ್ಲಿ ಬರುತ್ತಿದ್ದ ಸ್ಕೂಟರ್‌ಗೆ ಢಿಕ್ಕಿ ಹೊಡೆದು ಮಹಿಳೆಯರು, ಮಕ್ಕಳು ಸಹಿತ ಕುಟುಂಬವಿದ್ದ ಐ10 ಕಾರಿಗೆ ಢಿಕ್ಕಿ ಹೊಡೆದಿದೆ. ಆ ನಂತರ ರಸ್ತೆ ಬದಿಯಲ್ಲಿ ನಿಂತಿದ್ದ ಸ್ವಿಫ್ಟ್ ಕಾರಿಗೂ ಢಿಕ್ಕಿ ಹೊಡೆದಿದೆ.

ಈ ಸರಣಿ ಅಪಘಾತದಲ್ಲಿ ಕಾಸರಗೋಡು ನಿವಾಸಿ ತರುಣ್‌ ಸ್ಕೂಟರ್‌ ಸವಾರ  ಗಾಯಗೊಂಡಿದ್ದಾರೆ.ಅಲೋಶಿಯಸ್‌ ಕಾಲೇಜು ವಿದ್ಯಾರ್ಥಿ ಕೂಡ  ಅಪಘಾತ ನಡೆಸಿದ ಐ20 ಕಾರಿನಲ್ಲಿ ಗಾಯಗೊಂಡಿದ್ದಾರೆ.ಇನ್ನೊಂದು ಕಾರಿನಲ್ಲಿದ್ದ ಮಹಿಳೆಯರು ಮತ್ತು ಮಕ್ಕಳಿಗೂ ಗಾಯಗಳಾಗಿವೆ.  ಸರಣಿ ಅಪಘಾತಕ್ಕೆ ಕಾರಣವಾದ ಇನ್ನೋವಾ ಕಾರು ಪರಾರಿಯಾಗಿದೆ.

ಮಂಗಳೂರು ದಕ್ಷಿಣ ಸಂಚಾರ ಠಾಣಾ ಪೊಲೀಸರು ಘಟನ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಈ ಸರಣಿ ಅಪಘಾತಕ್ಕೆ ಇನ್ನೋವಾ ಮತ್ತು ವಿದ್ಯಾರ್ಥಿಗಳಿದ್ದ ಐ20 ಕಾರು ಅತೀ ವೇಗದ ಚಾಲನೆಯೇ  ಕಾರಣ ಎಂದು ಹೇಳಲಾಗಿದೆ.

No Comments

Leave A Comment