Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಪಿತೃಪಕ್ಷದ ಮಹತ್ವ: ಪೂರ್ವಜರಿಗೆ ಪಿಂಡ ಪ್ರದಾನ ಯಾಕಾಗಿ?

ಸನಾತನ ಹಿಂದೂ ಧರ್ಮದ ಪ್ರತಿಯೊಂದು ದಿನಾಂಕ ಮತ್ತು ಆಚರಣೆಗಳು ಹೆಚ್ಚಿನ ಪ್ರಾಮುಖ್ಯತೆ ಹೊಂದಿವೆ. ಈ ವರ್ಷ ಪಿತೃ ಪಕ್ಷ ಯಾವಾಗ ಪ್ರಾರಂಭವಾಗುತ್ತದೆ? ಪೂಜಾ ವಿಧಿ-ವಿಧಾನ ಮುಂತಾದ ಮಾಹಿತಿ ಇಲ್ಲಿದೆ ನೋಡಿ.

ಪಿತೃ ಪಕ್ಷದಲ್ಲಿ ಪೂರ್ವಜರ ಆತ್ಮ ಶಾಂತಿಗಾಗಿ, ಧಾರ್ಮಿಕ ನಂಬಿಕೆಗಳ ಪ್ರಕಾರ ದಾನ ಮತ್ತು ತರ್ಪಣವು ಬಹಳ ಮುಖ್ಯವೆಂದು ಹೇಳಲಾಗುತ್ತದೆ. ಈ ವಿಶೇಷ ಕಾರ್ಯಕ್ಕಾಗಿ ಪ್ರತಿ ವರ್ಷ ಶ್ರಾದ್ಧ ಪಕ್ಷದ ಸಮಯದಲ್ಲಿ ಕೆಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಪಿತೃ ಪಕ್ಷದ ಈ 15 ದಿನಗಳಲ್ಲಿ ಜನರು ತಮ್ಮ ಪೂರ್ವಜರ ಆಶೀರ್ವಾದ ಪಡೆಯಲು ಶ್ರಾದ್ಧ ಆಚರಣೆಗಳನ್ನು ಮಾಡುತ್ತಾರೆ. ಪ್ರತಿವರ್ಷ ಪಿತೃಪಕ್ಷವು ಭಾದ್ರಪದ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಿಂದ ಪ್ರಾರಂಭವಾಗಿ ಅಮಾವಾಸ್ಯೆಯವರೆಗೆ ಇರುತ್ತದೆ. ಈ ವರ್ಷ ಪಿತೃ ಪಕ್ಷವು ಸೆಪ್ಟೆಂಬರ್ 10 ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 25ರವರೆಗೆ ಮುಂದುವರಿಯುತ್ತದೆ.

ಪಿತೃ ಪಕ್ಷದ ಸಮಯದಲ್ಲಿ ಶುಭ ಕಾರ್ಯಗಳಿಗೆ ಸಂಪೂರ್ಣ ನಿಷೇಧವಿರುತ್ತದೆ. ಈ ಸಮಯದಲ್ಲಿ ಗೃಹ ಪ್ರವೇಶ, ಕ್ಷೌರ ಮತ್ತು ಹೊಸ ಮನೆ ಅಥವಾ ವಾಹನ ಖರೀದಿ ಮಾಡುವುದಿಲ್ಲ. ಅದೇ ರೀತಿ ಪಿತೃ ಪಕ್ಷವು ಜಾತಕದಲ್ಲಿ ಪಿತೃ ದೋಷವನ್ನು ತೆಗೆದುಹಾಕಲು ಅತ್ಯುತ್ತಮ ಸಮಯವೆಂದು ಪರಿಗಣಿಸಲಾಗಿದೆ. ಈ ದಿನಗಳಲ್ಲಿ ಪೂರ್ವಜರನ್ನು ಮೆಚ್ಚಿಸಲು ಮತ್ತು ಅವರ ಆಶೀರ್ವಾದ ಪಡೆಯಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.

ಪಿಂಡ ದಾನ ಅಗತ್ಯ

ಪಿತೃಪಕ್ಷದಲ್ಲಿ ಪಿಂಡ ದಾನ ಅಗತ್ಯ ಮತ್ತು ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲೆಂದು ಶ್ರಾದ್ಧವನ್ನು ಮಾಡಲಾಗುತ್ತದೆ. ಕೆಲವು ಸ್ಥಳಗಳು ಪಿತೃ ಪಕ್ಷದಲ್ಲಿ ಪಿಂಡ ದಾನ ಮಾಡಲು ಬಹಳ ಪ್ರಸಿದ್ಧವಾಗಿವೆ. ಈ ಪೈಕಿ ಬಿಹಾರದ ಗಯಾದಲ್ಲಿ ಮಾಡುವ ಪಿಂಡ ದಾನವು ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ. ಪಿತೃಪಕ್ಷದಂದು ಬ್ರಾಹ್ಮಣರಿಗೆ ಅನ್ನ ನೀಡಬೇಕೆಂಬ ನಿಯಮವಿದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ತಮ್ಮ ಪೂರ್ವಜರ ಮರಣದ ದಿನಾಂಕದ ಬಗ್ಗೆ ತಿಳಿದಿಲ್ಲದವರು, ಅಮಾವಾಸ್ಯೆಯಂದು ಶ್ರಾದ್ಧ ಮಾಡಬಹುದು. ಈ ವರ್ಷದ ಪಿತೃಪಕ್ಷದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಈ ದಿನಾಂಕಗಳಲ್ಲಿ ಶ್ರಾದ್ಧ ಮಾಡಲಾಗುತ್ತದೆ.

10 ಸೆಪ್ಟೆಂಬರ್ 2022, ಶನಿವಾರ ‌- ಪೂರ್ಣಿಮಾ ಶ್ರಾದ್ಧ ಭಾದ್ರಪದ, ಶುಕ್ಲ ಪೂರ್ಣಿಮಾ

11 ಸೆಪ್ಟೆಂಬರ್ 2022, ರವಿವಾರ – ಪ್ರತಿಪದೆ/ಪಾಡ್ಯಮಿ ಶ್ರಾದ್ಧ

12 ಸೆಪ್ಟೆಂಬರ್ 2022, ಸೋಮವಾರ – ದ್ವಿತೀಯ/ಬಿದಿಗೆ ಶ್ರಾದ್ಧ

13 ಸೆಪ್ಟೆಂಬರ್ 2022, ಮಂಗಳವಾರ – ತೃತೀಯಾ/ತದಿಗೆ ಶ್ರಾದ್ಧ

14 ಸೆಪ್ಟೆಂಬರ್ 2022, ಬುಧವಾರ – ಚತುರ್ಥಿ ಶ್ರಾದ್ಧ, ಮಹಾಭರಣಿ

15 ಸೆಪ್ಟೆಂಬರ್ 2022, ಗುರುವಾರ – ಪಂಚಮಿ ಶ್ರಾದ್ಧ

16 ಸೆಪ್ಟೆಂಬರ್ 2022, ಶುಕ್ರವಾರ – ಷಷ್ಠೀ ಶ್ರಾದ್ಧ

17 ಸೆಪ್ಟೆಂಬರ್ 2022, ಶನಿವಾರ – ಸಪ್ತಮಿ ಶ್ರಾದ್ಧ

18 ಸೆಪ್ಟೆಂಬರ್ 2022, ರವಿವಾರ – ಅಷ್ಟಮೀ ಶ್ರಾದ್ಧ, ವ್ಯತೀಪಾತ ಮಹಾಲಯ, ಮಧ್ಯಾಷ್ಟಮೀ

19 ಸೆಪ್ಟೆಂಬರ್ 2022, ಸೋಮವಾರ – ನವಮಿ ಶ್ರಾದ್ಧ, ಅವಿಧವಾ ನವಮೀ

20 ಸೆಪ್ಟೆಂಬರ್ 2022, ಮಂಗಳವಾರ – ದಶಮೀ ಶ್ರಾದ್ಧ

21 ಸೆಪ್ಟೆಂಬರ್ 2022, ಬುಧವಾರ – ಏಕಾದಶೀ ಶ್ರಾದ್ಧ

22 ಸೆಪ್ಟೆಂಬರ್ 2022, ಗುರುವಾರ – ದ್ವಾದಶಿ ಶ್ರಾದ್ಧ, ಯತಿ ಮಹಾಲಯ

23 ಸೆಪ್ಟೆಂಬರ್ 2022, ಶುಕ್ರವಾರ – ತ್ರಯೋದಶಿ ಶ್ರಾದ್ಧ

24 ಸೆಪ್ಟೆಂಬರ್ 2022, ಶನಿವಾರ – ಚತುರ್ದಶಿ ಶ್ರಾದ್ಧ, ಘಾತ ಚತುರ್ದಶೀ

25 ಸೆಪ್ಟೆಂಬರ್ 2022, ರವಿವಾರ – ಅಮಾವಾಸ್ಯೆ ಶ್ರಾದ್ಧ, ಸರ್ವಪಿತೃ ಮಹಾಲಯ ಅಮಾವಾಸ್ಯೆ

ಪಿತೃ ಪಕ್ಷದಲ್ಲಿ ಪೂಜೆ ಹೇಗೆ ಮಾಡಬೇಕು ?

ಪಿತೃ ಪಕ್ಷದ ದಿನದಂದು ಯಾವುದೇ ಶುಭ ಕಾರ್ಯವನ್ನು ಮಾಡಬಾರದು. ಪೂರ್ವಜರ ಶ್ರಾದ್ಧವನ್ನು ಅವರು ಮರಣ ಹೊಂದಿದ ಪಿತೃ ಪಕ್ಷದ ಅದೇ ತಿಥಿಯಂದು ಮಾಡಬೇಕು. ಈ ದಿನ ಸ್ನಾನ ಮಾಡಿದ ನಂತರ ಪೂಜಾ ಸ್ಥಳದಲ್ಲಿ ಕುಳಿತು ನಿಮ್ಮ ಪೂರ್ವಜರನ್ನು ಸ್ಮರಿಸಬೇಕು. ಪೂರ್ವಜರಿಗೆ ಸಾತ್ವಿಕ ಆಹಾರವನ್ನು ಅರ್ಪಿಸಿ. ಹಸುಗಳು, ನಾಯಿಗಳು, ಕಾಗೆಗಳು ಅಥವಾ ಇರುವೆಗಳಿಗೆ ಪಿಂಡ ದಾನವನ್ನು ಅರ್ಪಿಸಬೇಕು.

ಈ ಕೆಲಸ ಮಾಡಬಾರದು

ಈ ದಿನಗಳಲ್ಲಿ ಹೊಸ ಬಟ್ಟೆಗಳನ್ನು ಖರೀದಿಸುವುದು ಮತ್ತು ಧರಿಸುವುದನ್ನು ತಪ್ಪಿಸಬೇಕು. ಮತ್ತೊಂದೆಡೆ ಪಿತೃ ಪಕ್ಷದ ಸಮಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಅಥವಾ ಮಾಂಸಾಹಾರಿ ಆಹಾರ ಸೇವಿಸಬಾರದು. ಹೊಸ ಗೃಹ ಪ್ರವೇಶದಂತಹ ಶುಭ ಕಾರ್ಯಕ್ರಮಗಳನ್ನು ಈ ದಿನಗಳಲ್ಲಿ ಮಾಡಬಾರದು.

No Comments

Leave A Comment