Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

‘ರಾಹುಲ್ ಧರಿಸಿದ ಟಿ ಶರ್ಟ್ ಬೆಲೆ 41 ಸಾವಿರ ರೂ’ – ‘ಭಾರತ್ ದೇಖೋ’ ಎಂದ ಬಿಜೆಪಿ

ನವದೆಹಲಿ, ಸೆ 09. ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಧರಿಸಿರುವ ಟೀ-ಶರ್ಟ್ ಬೆಲೆ ಬಗ್ಗೆ ಬಿಜೆಪಿ ಅವರ ಕಾಲೆಳೆದಿದೆ. ಭಾರತ್ ದೇಖೋ ಎಂಬ ಶೀರ್ಷಿಕೆಯೊಂದಿಗೆ ಟಿ ಶರ್ಟ್‌ನ ಬೆಲೆಯನ್ನು ರಾಹುಲ್ ಫೋಟೋ ಪಕ್ಕದಲ್ಲಿ ಹಾಕಿ ಬಿಜೆಪಿ ಟೀಕೆ ವ್ಯಕ್ತಪಡಿಸಿದೆ.

ರಾಹುಲ್ ಗಾಂಧಿಯವರು ಧರಿಸಿರುವ ಬರ್ಬೆರಿ ಟಿ-ಶರ್ಟ್‌ನ ಬೆಲೆ 41,257 ರೂ.ಗಳಾಗಿದೆ ಎಂದಿರುವ ಬಿಜೆಪಿ, ಭಾರತ್ ದೇಖೋ ಎಂದು ಶೀರ್ಷಿಕೆ ನೀಡಿ ಟ್ವೀಟ್ ಮಾಡಿದೆ. ಬಿಳಿ ಬಣ್ಣದ ಬರ್ಬೆರಿ ಟಿ-ಶರ್ಟ್‌ನ್ನು ರಾಹುಲ್ ಗಾಂಧಿ ಧರಿಸಿದ್ದರು.

ಇನ್ನು ಬಿಜೆಪಿ ಪೋಸ್ಟ್‌ಗೆ ಪ್ರತಿಯಾಗಿ ಪ್ರಧಾನಿ ನರೇಂದ್ರ ಮೋದಿಯವರ ಸೂಟ್‌ ಬೆಲೆಯನ್ನು ಟ್ವೀಟ್ ಮಾಡಿ ಕಾಂಗ್ರೆಸ್ ಬಿಜೆಪಿಗೆ ತಿರುಗೇಟು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸೂಟ್ ಬೆಲೆ 10 ಲಕ್ಷ ರೂಪಾಯಿ ಎಂದು ಕಾಂಗ್ರೆಸ್ ಹೇಳಿದೆ.

ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿರುವ ಜನಸಾಗರ ನೋಡಿ ನಿಮಗೆ ಭಯವಾಗುತ್ತಿದೆಯೇ?ನಿರುದ್ಯೋಗ, ಹಣದುಬ್ಬರದ ಬಗ್ಗೆ ಮಾತನಾಡಿ. ಅಲ್ಲದೆ ನಾವು ಪ್ರಧಾನಿಯವರ 10 ಲಕ್ಷ ರೂ. ಬೆಲೆಯ ಸೂಟ್ ಮತ್ತು 1.5 ಲಕ್ಷ ರೂ. ಬೆಲೆಯ ಲೋಟಗಳ ಬಗ್ಗೆಯೂ ಮಾತನಾಡಬೇಕಾಗುತ್ತದೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

No Comments

Leave A Comment