Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಇ೦ದು ಭಾದ್ರಪದ ಶುಕ್ಲ ಪಕ್ಷ ಚತುರ್ದಶಿ: ಎಲ್ಲೆಡೆಯಲ್ಲಿ “ಅನಂತ ವ್ರತ”ದ ಸ೦ಭ್ರಮ….

ಭಾದ್ರಪದ ಶುಕ್ಲ ಪಕ್ಷ ಚತುರ್ದಶಿಯನ್ನು ‘ಅನಂತ ಚತುರ್ದಶಿ’ ಎಂದು ಕರೆಯುತ್ತಾರೆ. ಈ ದಿನದಂದು ಅನೇಕರು ಅನಂತ ವ್ರತವನ್ನು ಆಚರಿಸುತ್ತಾರೆ. ಈ ವ್ರತದ ಬಗ್ಗೆ ಪ್ರಚಲಿತವಿರುವ ಮಾಹಿತಿಯನ್ನು ತಿಳಿದುಕೊಳ್ಳೋಣ.

ಈ ದಿನದಂದು ಶ್ರೀ ವಿಷ್ಣುವು ಅನಂತ ಪದ್ಮನಾಭನಾಗಿ,
ಶೇಷಶಯನ,ನಾಗಿ ಯೋಗನಿದ್ರಾ ಸ್ವರೂಪದಿಂದ ದೇವತೆಗಳಾದಿಯಾಗಿ ಸರ್ವರಿಗೂ ದರ್ಶನವನ್ನು ನೀಡುತ್ತಾನೆ ಎನ್ನುವುದು ಶಾಸ್ತ್ರಸಾರ

ಶ್ರೀ ಅನಂತ ಪದ್ಮನಾಭ ದೇವರು ಭಕ್ತರ ಎಲ್ಲ ಪ್ರಾರ್ಥನೆ, ಬೇಡಿಕೆಗಳನ್ನು ಈಡೇರಿಸುತ್ತಾರೆ ಮತ್ತು ಸುಖ, ಆರೋಗ್ಯ, ಸಂಪತ್ತನ್ನು ಅನುಗ್ರಹಿಸುತ್ತಾರೆ ಎಂದು ನಂಬಿಕೆಯಿದೆ.

ಅನಂತ ವ್ರತದ ಬಗ್ಗೆ ಒಂದು ಕಥೆಯನ್ನು ನೋಡೋಣ

ಕೌಂಡಿಲ್ಯ ಮುನಿಯು ವಿವಾಹದ ನಂತರ ಸಪತ್ನೀಕನಾಗಿ ಮನೆಯಿಂದ ಹೊರಟನು. ದಾರಿಯಲ್ಲಿ ನದಿಯ ತೀರದಲ್ಲಿ ಅವರು ನಿತ್ಯ ಕರ್ಮಗಳಿಗೆ ನಿಂತಾಗ, ಅವರ ಪತ್ನಿಯು ಕೆಲವು ಮಹಿಳೆಯರನ್ನು ಒಂದು ವ್ರತವನ್ನು ಆಚರಿಸುತ್ತಿರುವುದನ್ನು ನೋಡಿದರು. ಆ ಮಹಿಳೆಯರನ್ನು ಕೇಳಿದಾಗ ‘ನಾವು ಅನಂತ ವ್ರತವನ್ನು ಆಚರಿಸುತ್ತಿದ್ದೇವೆ’ ಎಂದೂ, ಆ ವ್ರತದಿಂದ ಆಗುವ ಲಾಭಗಳೇನು ಎಂದೂ ತಿಳಿಸಿದರು.

ಇದರಿಂದ ಪ್ರಭಾವಿತರಾದ ಕೌಂಡಿಲ್ಯ ಮುನಿಯ ಪತ್ನಿಯೂ ಕೂಡ ಶೇಷಶಯನನಾದ ಶ್ರೀ ವಿಷ್ಣುವನ್ನು ಪ್ರಸನ್ನಗೊಳಿಸಲು ಅನಂತ ವ್ರತವನ್ನು ಆಚರಿಸತೊಡಗಿದಳು. ಇದರಿಂದಾಗಿ ಕೌಂಡಿಲ್ಯ ಮುನಿಯ ಧನ ಸಂಪತ್ತು ವೃದ್ಧಿಯಾಯಿತು. ಅನೇಕ ವರ್ಷಗಳ ನಂತರ ಒಂದು ದಿನ ಕೌಂಡಿಲ್ಯ ಮುನಿಯು ತನ್ನ ಪತ್ನಿಯ ಕೈಯಲ್ಲಿರುವ ಅನಂತ ವ್ರತದ ದಾರವನ್ನು ನೋಡಿ ಅದೇನೆಂದು ವಿಚಾರಿಸಿದನು. ಪತ್ನಿಯು ‘ಇದು ಅನಂತ ವ್ರತದ ದಾರ, ಈ ವ್ರತದಿಂದ ನಮಗೆ ದೇವರು ಸುಖ ಸಂಪತ್ತನ್ನು ಕರುಣಿಸಿದ್ದಾನೆ’ ಎಂದು ಹೇಳಿದಳು. ಇದನ್ನು ಕೇಳಿ ಕೌಂಡಿಲ್ಯ ಮುನಿಯು ಕೋಪಗೊಂಡು ‘ಈ ಸುಖ ಸಂಪತ್ತು ನನ್ನ ಪಾಂಡಿತ್ಯದಿಂದ ನಾನು ಸಂಪಾದಿಸಿದ್ದೇನೆ’ ಎಂದು ಹೇಳಿ, ಪತ್ನಿಯ ಕೈಯಲ್ಲಿರುವ ದಾರವನ್ನು ಕಿತ್ತೆಸೆದನು.

ಕ್ರಮೇಣ ಅವರಲ್ಲಿರುವ ಸಂಪತ್ತು ಕ್ಷೀಣಿಸತೊಡಗಿತು. ಮುಂದೊಂದು ದಿನ ಎಲ್ಲವನ್ನೂ ಕಳೆದುಕೊಂಡ ಕೌಂಡಿಲ್ಯ ಮುನಿಗೆ ತನ್ನ ತಪ್ಪಿನ ಅರಿವಾಯಿತು. ಅಖಂಡ ತಪಸ್ಸನ್ನು ಆಚರಿಸಿ ಶ್ರೀ ವಿಷ್ಣುವನ್ನು ಪ್ರಸನ್ನಗೊಳಿಸಿದನು. ಶ್ರೀ ವಿಷ್ಣು ಕೌಂಡಿಲ್ಯ ಮುನಿಗೆ ದರ್ಶನವನ್ನಿತ್ತು, ೧೪ ವರ್ಷಗಳ ಕಾಲ ಅನಂತ ವ್ರತವನ್ನು ಆಚರಿಸಿದರೆ, ಹೋದ ಸುಖ ಸಂಪತ್ತು ಪುನಃ ಗಳಿಸುವುದಾಗಿ ವರವನ್ನು ನೀಡಿದರು.

ಅನಂತ ವ್ರತದ ಬಗ್ಗೆ ಇನ್ನೊಂದು ಕಥೆಯನ್ನು ನೋಡೋಣ : ಪಾಂಡವರು ಕೌರವರ ಕೈಯಲ್ಲಿ ರಾಜ್ಯವನ್ನು ಸೋತು ೧೪ ವರ್ಷಗಳ ಕಾಲ ವನವಾಸವನ್ನು ಅನುಭವಿಸಬೇಕಾಯಿತು. ಈ ಸಮಯದಲ್ಲಿ ಶ್ರೀ ಕೃಷ್ಣನು ಪಾಂಡವರಿಂದ ಅನಂತ ವ್ರತವನ್ನು ಆಚರಿಸಿದನು, ಇದರ ಫಲವಾಗಿ ಅವರಿಗೆ ರಾಜ್ಯ ಭಾಗ್ಯ ಮರಳಿ ದೊರೆಯಿತು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.

ಅನೇಕರು ಅನಂತ ವ್ರತವನ್ನು ೧೪ ವರ್ಷಗಳ ಕಾಲ ಆಚರಿಸುತ್ತಾರೆ. ಕೆಲವರು ಪರಂಪರಾಗತವಾಗಿ ಅನಂತ ವ್ರತವನ್ನು ಆಚರಿಸುತ್ತಾರೆ. ಇನ್ನು ಕೆಲವರು ಶಕ್ತಿಗನುಸಾರ ಆಚರಿಸುತ್ತಾರೆ.
ಚತುರ್ದಶ ಲೋಕಗಳಿಗೂ ಸ್ವಾಮಿಯಾದ ಶ್ರೀವಿಷ್ಣು ಪರಮಾತ್ಮನಿಗೆ ಈ ದಿನ 14 ನಮಸ್ಕಾರಗಳನ್ನು ಮಾಡಿದರೆ ಅನಂತ ಚತುರ್ದಶಿ ವ್ರತ ಮಾಡಿದ ಫಲವು ಸಿದ್ಧಿಯಾಗುವುದು

।। ಚತುರ್ದಶ ನಮಸ್ಕಾರ ।।

೧. ಓಂ ಬ್ರಹ್ಮಣೇ ನಮಃ ।
೨. ಓಂ ಭಾಸ್ಕರಾಯ ನಮಃ ।
೩. ಓಂ ಶೇಷಾಯ ನಮಃ ।
೪. ಓಂ ಪರಮಾತ್ಮನೇ ನಮಃ ।
೫. ಓಂ ವಿಶ್ವರೂಪಯ ನಮಃ ।
೬. ಓಂ ಪುರುಷೋತ್ತಮಯ ನಮಃ ।
೭. ಓಂ ಸೃಷ್ಟಿಸ್ಥಿತ್ಯಂತಕಾಯ ನಮಃ ।
೮. ಓಂ ವಿಷ್ಣವೇ ನಮಃ ।
೯. ಓಂ ಕೇಶವಯ ನಮಃ ।
೧೦. ಓಂ ನಾರಸಿಂಹಾಯ ನಮಃ ।
೧೧. ಓಂ ಸರ್ವ ವ್ಯಾಪ್ತಿನೇ ನಮಃ ।
೧೨. ಓಂ ಈಶ್ವರಾಯ ನಮಃ ।
೧೩. ಓಂ ಆದಿದೇವಾಯ ನಮಃ ।
೧೪. ಓಂ ಶ್ರೀಮದ್ ಅನಂತಾಯ ನಮಃ ।

ಶ್ರೀಮದ ಅನಂತ ವ್ರತದ ಚತುರ್ದಶ ನಮಸ್ಕಾರಗಳು*

೧ ನಮೋ ವಿಶ್ವ ಸೃಜೇ ತುಭ್ಯಂ ಸತ್ಯಾಯ ಪರಮಾತ್ಮನೇ| ದೇವಾಯ ದೇವಪತೆಯೇ ಯಜ್ಞಾನಾಂ ಪತಯೇ ನಮಃ ||
ಓಂ ಬ್ರಹ್ಮಣೇ ನಮಃ

೨ ಸರ್ವಾತ್ಮಾ ಸರ್ವಕರ್ತಾ ಚ ಸೃಷ್ಟಿ ಜೀವನ ಪಾಲಕಃ|
ಹಿತಃ ಸ್ವರ್ಗಾಪವರ್ಗಸ್ಯ ಭಾಸ್ಕರೇಶ ನಮೋಸ್ತುತೆ||
ಓಂ ಭಾಸ್ಕರಾಯ ನಮಃ

೩ ಅನಂತಾಯ ನಮಸ್ತೇಸ್ತು ಸಹಸ್ರ ಶಿರಸೇ ನಮಃ| ನಮೋಸ್ತು ಪದ್ಮನಾಭಾಯ ನಾಗಾಧಿಪತಯೇ ನಮಃ||
ಓಂ ಶೇಷಾಯ ನಮಃ

೪ ಯಥಾ ತ್ವಂ ಸರ್ವ ದೇವಾನಾಂ ಇಂದ್ರಾದೀ ನಾಂ ಚ
ರಕ್ಷಕಃ|
ತಥಾ ತ್ವಂ ಪಾಲಯಾನಂತ ತದಂಘ್ರಿ ಶರಣಾಗತಂ||
ಓಂ ಪರಮಾತ್ಮನೇ ನಮಃ

೫ ಜ್ಞಾನಾನಂದಾಯ ತೃಪ್ತಾಯ ಭಕ್ತಾಭೀಷ್ಠ ಪ್ರದಾಯ ಚ| ಆತ್ಮಾ ರಾಮಾಯ ವಿಶ್ವಾಯ ಅನಂತಾಯ ನಮೋ ನಮಃ ||
ಓಂ ವಿಶ್ವರೂಪಾಯ ನಮಃ

೬ ನಮಸ್ತೇ ದೇವ ದೇವೇಶ ನಮಸ್ತೇ ಧರಣೀಧರ|
ನಮಸ್ತೇ ಸರ್ವ ನಾಗೇಂದ್ರ ಪುರಾಣ ಪುರುಷೋತ್ತಮ||
ಓಂ ಪುರುಷೋತ್ತಮಾಯ ನಮಃ

೭ ನಮಃ ಸರ್ವ ಹಿತಾನಂತ ಜಗದಾನಂದ ಕಾರಿಣೇ|
ಸೃಷ್ಟಿ ಸ್ಥಿತ್ಯಂತ ಕಾರಾಯ ಅನಂತಾಯ ನಮೋ ನಮಃ||
ಓಂಸೃಷ್ಟಿ ಸ್ಥಿತ್ಯಂತಕಾಯ ನಮಃ

೮ ಯಃ ಸರ್ವ ಗುಣ ಸಂಪೂರ್ಣಃ ಸರ್ವದೋಷ ವಿವರ್ಜಿತಃ|
ಪ್ರೀಯತಾಂ ಪ್ರೀತ ಏವಾಲಂ ವಿಷ್ಣುರ್ಮೇ ಪರಮಃ ಸುಹೃತ್||
ಓಂ ವಿಷ್ಣವೇ ನಮಃ

೯ ತ್ರಾಹಿಮಾಂ ಕಮಲಾಕಾಂತ ತ್ರಾಹಿಮಾಂ ಕರುಣಾನಿಧೇ|
ದಿನಬಂಧೋऽತಿ ದಿನೇಶ ಕರುಣಾಸಾಗರ ಪ್ರಭೋ||
ಓಂ ಕೇಶವಾಯ ನಮಃ

೧೦ ಕರಾವಲಂಬನಂ ದೇಹಿ ಶೇಷ ಶಾಯಿನ್ ಜಗತ್ಪತೇ|
ಶ್ರೀನೃಸಿಂಹ ರಮಾಕಾಂತ ಭಕ್ತಾನಾಂ ಭಯನಾಶನಃ||
ಓಂ ನಾರಸಿಂಹಯ ನಮಃ

೧೧ ನಮಸ್ತೆ ವಿಶ್ವರೂಪಾಯ ನಮಸ್ತ್ರೈಲೋಕ್ಯ ನಾಯಕ |ನಮಸ್ತೇ ಭಕ್ತ ವಂದ್ಯಾಯ ನಮಸ್ತೇ ಭಕ್ತ ವತ್ಸಲ ||
ಓಂ ಸರ್ವವ್ಯಾಪಿನೇ ನಮಃ

೧೨ ಮಹೇಶ್ವರ ಮಹೇಶಾನಂ ನಮಸ್ತೇ ತ್ರಿಪುರಾಂತಕ |
ಜೀಮೂತ ಕೇಶಾಯ ನಮೋ ನಮಸ್ತೇ ವೃಷಭಧ್ವಜ ||
ಓಂ ಈಶ್ವರಾಯ ನಮಃ

೧೩ ತೀರ್ಥ ಕೋಟಿ ಸಹಸ್ರಾ ವ್ರತ ಕೋಟಿ
ಶತಾನಿಚ|
ನಾರಾಯಣ ಪ್ರಣಾಮಸ್ಯ ಕಲಾನಾರ್ಹಂತಿ ಷೋಡಶೀಮ್||
ಓಂ ಆದಿ ದೇವಾಯ ನಮಃ

೧೪ ಅನಂತ ಗುಣ ರೂಪಾಯ ವಿಶ್ವ ರೂಪ ಧರಾಯಚ|
ನಮೋ ಮಾಹಾತ್ಮ್ಯ ದೇವಾಯ ಅನಂತಾಯ ನಮೋ ನಮಃ||
ಓಂ ಶ್ರೀಮದ್ ಅನಾಂತಾಯ ನಮಃ

ಚತುರ್ದಶ ನಮಸ್ಕಾರಾನ್ ಸಮರ್ಪಾಯಾಮಿ.

No Comments

Leave A Comment