Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಬ್ರಿಟನ್ ನಲ್ಲಿ ಹಿಂದೂಗಳ ಮೇಲೆ ಪಾಕ್ ಗ್ಯಾಂಗ್ ದಾಳಿ!

ಲಂಡನ್: ಬ್ರಿಟನ್ ನಲ್ಲಿ ಪಾಕಿಸ್ತಾನದ ಸಂಘಟಿತ ಗ್ಯಾಂಗ್ ಗಳು ಹಿಂದೂಗಳ ಮೇಲೆ ದಾಳಿ ನಡೆಸಿವೆ. ಲೀಸೆಸ್ಟರ್ ಸಿಟಿಯಲ್ಲಿ ಈ ಘಟನೆ ನಡೆದಿದ್ದು, ಆ.28 ರಂದು ಏಷ್ಯಾ ಕಪ್-2022 ಟೂರ್ನಿಯಲ್ಲಿ ಪಾಕ್ ವಿರುದ್ಧ ಭಾರತ ಗೆಲುವು ಸಾಧಿಸಿದ ನಂತರ ಈ ಘಟನೆ ಸಂಭವಿಸಿದೆ.

ಕಳೆದ ವಾರಾಂತ್ಯದಲ್ಲಿ ನಡೆದ ಈ ಘಟನೆಯ ರೀತಿಯದ್ದೇ ಮತ್ತೊಂದಿಷ್ಟು ಘಟನೆಗಳು ಅಲ್ಲಲ್ಲಿ ಸಂಭವಿಸಿರುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವರೈಲ್ ಆಗತೊಡಗಿವೆ.

ಹಿಂದೂಗಳಿಗೆ ಸೇರಿದ ಆಸ್ತಿಪಾಸ್ತಿಯ ಮೇಲೆ ಪಾಕಿಸ್ತಾನದ ಸಂಘಟಿತ ಗ್ಯಾಂಗ್ ಗಳು ದಾಳಿ ನಡೆಸಿದ್ದು, ಭಯೋತ್ಪಾದನೆಯಲ್ಲಿ ತೊಡಗಿದ್ದಾರೆ, ಇದಷ್ಟೇ ಅಲ್ಲದೇ ಹಿಂದೂಗಳಿಗೆ ಇರಿಯುವ ಪ್ರಯತ್ನವನ್ನೂ ಮಾಡಿದ್ದಾರೆ ಎಂದು ಮಾನವ ಹಕ್ಕು ಕಾರ್ಯಕರ್ತರಾದ ರಶಾಮಿ ಸಮಂತ್ ಟ್ವೀಟ್ ಮಾಡಿದ್ದಾರೆ. ಪರಿಸ್ಥಿತಿ ನಿಭಾಯಿಸುವುದಕ್ಕಾಗಿ ತುರ್ತು ಸಭೆಯೂ ನಡೆದಿದೆ.

No Comments

Leave A Comment