ಕಾಶ್ಮೀರ: ‘ಎನ್‌ಕೌಂಟರ್’ನಲ್ಲಿ ಇಬ್ಬರು ಅಲ್-ಖೈದಾ ಉಗ್ರರ ಹತ್ಯೆ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ಬುಧವಾರ ನಡೆದ “ಆಕಸ್ಮಿಕ ಎನ್‌ಕೌಂಟರ್” ನಲ್ಲಿ ಅಲ್-ಖೈದಾ ಅಂಗಸಂಸ್ಥೆ ಅನ್ಸರ್ ಘಜ್ವತುಲ್ ಹಿಂದ್‌ನ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತರಾದ ಉಗ್ರರನ್ನು ಫಯಾಜ್ ಕುಮಾರ್ ಮತ್ತು ಓವೈಸ್ ಖಾನ್ ಎಂದು ಗುರುತಿಸಲಾಗಿದ್ದು, ಹಲವಾರು ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
“ಅನಂತ್‌ನಾಗ್‌ನ ಬಿಜ್‌ಬೆಹರಾ ಪ್ರದೇಶದ ತಾಜಿವಾರದಲ್ಲಿ ಅನಂತನಾಗ್ ಪೊಲೀಸರು ಆಕಸ್ಮಿಕವಾಗಿ ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ” ಎಂದು ಪೊಲೀಸ್ ವಕ್ತಾರರು ಟ್ವೀಟ್ ಮಾಡಿದ್ದಾರೆ.
ಕಾಶ್ಮೀರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ವಿಜಯ್ ಕುಮಾರ್, ಹರಾದ ಭಯೋತ್ಪಾದಕರು ಅನ್ಸಾರ್ ಘಜ್ವತುಲ್ ಹಿಂದ್(AGuH) ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಹೇಳಿದ್ದಾರೆ.