Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಭಾರತ್ ಬಯೋಟೆಕ್ ಮೂಗಿನ ಕೋವಿಡ್​ ಲಸಿಕೆಗೆ DCGI ಅನುಮೋದನೆ

ನವದೆಹಲಿ: ಭಾರತ್ ಬಯೋಟೆಕ್  ಸಂಸ್ಥೆಯ ನಾಸಲ್ ಕೋವಿಡ್ ಲಸಿಕೆಗೆ ಭಾರತೀಯ ಔಷಧ ನಿಯಂತ್ರಕ ಪ್ರಾಧಿಕಾರ ಡಿಸಿಜಿಐ ಮಂಗಳವಾರ ಅನುಮೋದನೆ ನೀಡಿದೆ.

ದೇಶದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಸೋಂಕಿನ ವಿರುದ್ಧ ಪ್ರಾಥಮಿಕ ಪ್ರತಿರಕ್ಷಣೆ ನೀಡುವ ಉದ್ದೇಶದಿಂದ ಭಾರತೀಯ ಔಷಧಿ ನಿಯಂತ್ರಣ ಪ್ರಾಧಿಕಾರ(ಡಿಜಿಸಿಐ)ದಿಂದ ಅನುಮೋದನೆಯನ್ನು ಪಡೆದಿದೆ. ಕೋವಿಡ್-19 ವಿರುದ್ಧ ರಕ್ಷಣೆ ನೀಡುವುದಕ್ಕಾಗಿ ಮೂಗಿನ ಮೂಲಕ ನೀಡಬಹುದಾದ ಮೊದಲ ಲಸಿಕೆ ಇದಾಗಿದೆ.

ಇಂಟ್ರಾನಾಸಲ್ ಕೋವಿಡ್ -19 ಲಸಿಕೆಗಾಗಿ ಭಾರತ್ ಬಯೋಟೆಕ್ ಮಂಗಳವಾರ ಡಿಸಿಜಿಐನಿಂದ ತುರ್ತು ಬಳಕೆಯ ಅಧಿಕಾರವನ್ನು ಪಡೆದುಕೊಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.  ಇದು ಕೋವಿಡ್ -19 ಗಾಗಿ ಭಾರತದ ಮೊದಲ ಮೂಗಿನ ಮೂಲಕ ಹಾಕುವ ಲಸಿಕೆಯಾಗಿದೆ. COVID-19 ವಿರುದ್ಧದ ಭಾರತದ ಹೋರಾಟಕ್ಕೆ ದೊಡ್ಡ ಭರವಸೆ ಸಿಕ್ಕಿದಂತಾಗಿದೆ. ಭಾರತ್ ಬಯೋಟೆಕ್‌ನ ChAd36-SARS-CoV-S COVID-19 (ಚಿಂಪಾಂಜಿ ಅಡೆನೊವೈರಸ್ ವೆಕ್ಟರ್ಡ್) ಮರುಸಂಯೋಜಿತ ಮೂಗಿನ ಲಸಿಕೆಯನ್ನು ಅನುಮೋದಿಸಲಾಗಿದೆ ಎಂದು ಮಾಂಡವಿಯ ಟ್ವೀಟ್ ಮಾಡಿದ್ದಾರೆ.

ಇಂಟ್ರಾನೆಸಲ್ ಲಸಿಕೆ ಬಿಬಿವಿ154 (BBV154) ಇದಾಗಿದ್ದು, ಇದರ ತಂತ್ರಜ್ಞಾನವನ್ನು ಭಾರತ್ ಬಯೋಟೆಕ್ ಸೆಂಟ್ ಲೂಯಿಸ್ ನಲ್ಲಿರುವ ವಾಷಿಂಗ್ಟನ್ ಯುನಿವರ್ಸಿಟಿಯಿಂದ (Washington University)ಪಡೆದುಕೊಂಡಿತ್ತು. ಇದು ಈ ರೀತಿಯ ಮೊದಲ ವ್ಯಾಕ್ಸಿನ್ ಆಗಿದ್ದು, ಭಾರತದಲ್ಲಿ ಮನುಷ್ಯರ ಮೇಲೆ ಪ್ರಯೋಗ ನಡೆಸಲಾಗಿತ್ತು.

“ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ COVID-19 ವಿರುದ್ಧದ ಹೋರಾಟದಲ್ಲಿ ಭಾರತವು ತನ್ನ ವಿಜ್ಞಾನ, ಆರ್ & ಡಿ ಮತ್ತು ಮಾನವ ಸಂಪನ್ಮೂಲಗಳನ್ನು ಬಳಸಿಕೊಂಡಿದೆ. ವಿಜ್ಞಾನ-ಚಾಲಿತ ವಿಧಾನ ಮತ್ತು ಸಬ್ಕಾ ಪ್ರಯಾಸ್‌ನೊಂದಿಗೆ, ನಾವು COVID-19 ಅನ್ನು ಸೋಲಿಸುತ್ತೇವೆ. ಇದು ಸಾಂಕ್ರಾಮಿಕ ರೋಗದ ವಿರುದ್ಧ ಭಾರತದ ಸಾಮೂಹಿಕ ಹೋರಾಟವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.

No Comments

Leave A Comment