‘ಕೇಸ್ ಆಫ್ ಕೊಂಡನಾ’ ಚಿತ್ರಕ್ಕಾಗಿ ಮತ್ತೆ ಒಂದಾದ ದೇವಿಪ್ರಸಾದ್ ಶೆಟ್ಟಿ ಮತ್ತು ವಿಜಯ್ ರಾಘವೇಂದ್ರ!
ವಿಜಯ್ ರಾಘವೇಂದ್ರ ನಟನೆಯ 50ಸಿನಿಮಾ ಸೀತಾರಾಮ್ ಬೆನೊಯ್ ಚಿತ್ರದ ಮೂಲಕ ಚೊಚ್ಚಲ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದ ದೇವಿ ಪ್ರಸಾದ್ ಶೆಟ್ಟಿ ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದಾರೆ.
ಕ್ರೈಮ್ ಸಿನಿಮಾಗಳ ಬಗ್ಗೆ ಹೆಚ್ಚು ಒಲವು ಹೊಂದಿರುವ ಬರಹಗಾರ ಮತ್ತು ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ಕೇಸ್ ಆಫ್ ಕೊಂಡನಾ ಎಂಬ ಮತ್ತೊಂದು ತನಿಖಾ ಥ್ರಿಲ್ಲರ್‌ನೊಂದಿಗೆ ಮರಳಿದ್ದಾರೆ. ಚಿತ್ರವು 09/2018 ಎಂಬ ಟ್ಯಾಗ್ ಲೈನ್ ಇದೆ. ಕೇಸ್ ಆಫ್ ಕೊಂಡನಾ ಸಿನಿಮಾದಲ್ಲಿ ವಿಜಯ ರಾಘವೇಂದ್ರ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ, ಭಾವನಾ ಮೆನನ್ ಕೂಡ ತೆರೆ ಹಂಚಿಕೊಂಡಿದ್ದಾರೆ.
ಭಾವನಾ ಮೆನನ್ ಕೂಡ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ದಿಯಾ ಸಿನಿಮಾ ಖ್ಯಾತಿಯ ಖುಷಿ ರವಿ ವೈದ್ಯೆಯ ಪಾತ್ರಗಲ್ಲಿ ನಟಿಸುತ್ತಿದ್ದಾರೆ, ಉಳಿದ ಕಲಾವಿದರನ್ನು ಅಂತಿಮ ಗೊಳಿಸುವ ಪ್ರಕ್ರಿಯೆಯಲ್ಲಿ ಚಿತ್ರ ತಂಡ ಬ್ಯುಸಿಯಾಗಿದೆ.
ವಿಜಯ್ ರಾಘವೇಂದ್ರ ಒಬ್ಬ ಅತ್ಯದ್ಭುತ ನಟ, ಅವರು ನನ್ನ ಮೊದಲ ಚಿತ್ರಕ್ಕೆ ತುಂಬಾ ಬೆಂಬಲ ನೀಡಿದರು, ನನ್ನ ಅವರ ಎರಡನೇ ಕಾಂಬಿನೇಷನ್ ಸಿನಿಮಾ ಇದಾಗಿದೆ, ಈ ಸಿನಿಮಾದಲ್ಲಿ ಹಲವು ತಿರುವುಗಳ ಜೊತೆಗೆ ಸಾಕಷ್ಟು ಥ್ರಿಲ್ಲರ್ ಇದೆ ಎಂದು ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ವಿವರಿಸಿದ್ದಾರೆ.
ಸಾತ್ವಿಕ್ ಹೆಬ್ಬಾರ್ ಮತ್ತು ಅರವಿಂದ್ ಶೆಟ್ಟಿ ಜೊತೆಗೆ ದೇವಿಪ್ರಸಾದ್ ಸಹಯೋಗದಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಕೇಸ್ ಆಫ್ ಕೊಂಡಾಣದ ಸಂಯೋಜಕರಾಗಿ ಪೂರ್ಣಚಂದ್ರ ತೇಜಸ್ವಿ, ಛಾಯಾಗ್ರಹಣ, ವಿಶ್ವಜಿತ್ ರಾವ್ ಛಾಯಾಗ್ರಹಣ ಮತ್ತು ಭವಾನಿ ಶಂಕರ್ ಕಲಾ ನಿರ್ದೇಶನವಿದೆ. ಜಯಂತ್ ಕಾಯ್ಕಿಣಿ ಸಾಹಿತ್ಯವಿರುವ ಈ ಚಿತ್ರಕ್ಕೆ ಜೋಗಿ ಸಂಭಾಷಣೆ ಬರೆಯುತ್ತಿದ್ದಾರೆ.
ಚಿತ್ರದ ಅಧಿಕೃತ ಲಾಂಚ್ ಸೆಪ್ಟೆಂಬರ್ 8 ರಂದು ನಡೆಯಲಿದೆ, ಸೆಪ್ಟೆಂಬರ್ 28 ರಿಂದ ಶೂಟಿಂಗ್ ಆರಂಭವಾಗಲಿದೆ. ಸಂಪೂರ್ಣ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ನಡೆಸಲು ಯೋಜಿಸಲಾಗಿದೆ.