Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಪಿಟ್ಟಿ ನಾಗೇಶ್ ಕೊಲೆ ಪ್ರಕರಣ : ಖುಲಾಸೆಗೊಂಡ ಐದು ಮಂದಿ ಆರೋಪಿಗಳು

ಉಡುಪಿ: ರೌಡಿ ಶೀಟರ್ ಪಿಟ್ಟಿ ನಾಗೇಶ್ ಕೊಲೆ ಪ್ರಕರಣದ ಸಾಕ್ಷ್ಯಾಧಾರಗಳ ಕೊರತೆಯಿಂದ ಐವರು ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

ಈ ಕೊಲೆ ಪ್ರಕರಣದಲ್ಲಿ ಆರೋಪಿಯಗಿದ್ದ ವಿಶ್ವಯಾನೆ ವಿಶ್ವನಾಥ ಕೊರಂಗ್ರಪಾಡಿ , ಸಂತೋಷ್ ಬೈಲೂರು, ಮುನ್ನ ಯಾನೆ ರಿಚಾಡ್  ಮಸ್ಕರೇನಸ್‍ ಗರಡಿಮಜಲು, ಗುರುಪ್ರಸಾದ್ ಶೆಟ್ಟಿ ಅಲೆವೂರು, ಝಾಕೀರ್ ಹುಸೇನ್‍ ಕುಕ್ಕಿಕಟ್ಟೆ ಖುಲಾಸೆಗೊಂಡ ಆರೋಪಿಗಳು ಎಂದು ತಿಳಿದು ಬಂದಿದೆ.

ಸೆಪ್ಟೆಂಬರ್ 11,2014ರಂದು ಪಿಟ್ಟಿ ನಾಗೇಶ್‍ರೌಡಿ ಶೀಟರ್ ನನ್ನುಉದ್ಯಾವರ ಹಲೀಮ್ ಸಬ್ಜು ಹಾಲ್ ನ ಬಳಿ 5 ಜನ ಅಡ್ಡಗಟ್ಟಿ ಕೊಲೆಗೈದಿದ್ದಾರೆ.  ಹಳೆಯ ದ್ವೇಷಗಳ ಹಿನ್ನೆಲೆಯಿಂದ ಈ ಕೊಲೆ ನಡೆದಿದೆಎಂದು ಪೊಲೀಸರು ತಿಳಿಸಿದ್ದಾರೆ. ನ್ಯಾಯಾಲಯಕ್ಕೆ ಸುಮಾರು 71 ಸಾಕ್ಷಿ ಗಳನ್ನು ಹಾಜರಿಸಿದ್ದು,18 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಲಾಗಿತ್ತು.

ಈ ಪ್ರಕರಣದ ವಿಚಾರಣೆ ವೇಳೆ ಆರೋಪಿಗಳ ಪರ ಹಿರಿಯ ನ್ಯಾಯಾವಾದಿ ಶಾಂತಾರಾಮ್ ಶೆಟ್ಟಿ ವಾದಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದ ಪೂರಕ ಸಾಕ್ಷಿ ಆಧಾರದ ಕೊರತೆಯಿಂದ ಆರೋಪಿಗಳ ಆರೋಪ ಸಾಬೀತು ಆಗದ ಹಿನ್ನಲೆಯಲ್ಲಿ ನ್ಯಾಯಲಯ ಪ್ರಕರಣದಲ್ಲಿದ್ದ ಆರೋಪಿಗಳನ್ನು ಖುಲಾಸೆಗೊಳಿಸಿದೆ ಎಂದು ತಿಳಿದು ಬಂದಿದೆ.

No Comments

Leave A Comment