Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಪೋಕ್ಸೋ ಪ್ರಕರಣ: ಮುರುಘಾ ಶ್ರೀಗೆ ಮತ್ತೆ ಸೆಪ್ಟೆಂಬರ್ 14ರವರೆಗೆ ನ್ಯಾಯಾಂಗ ಬಂಧನ

ಚಿತ್ರದುರ್ಗ: ಮಠದ ಆಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಪೋಕ್ಸೋ ಕಾಯ್ದೆಯಡಿ ಬಂಧನಕ್ಕೀಡಾಗಿರುವ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶ್ರೀಗಳನ್ನು ನ್ಯಾಯಾಲಯ ಸೆಪ್ಟೆಂಬರ್ 14ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮುರುಘಾ ಶ್ರೀ ಅವರನ್ನು ಕೋರ್ಟ್‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಭಾನುವಾರ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಇಂದು ಪೊಲೀಸರು ಶ್ರೀಗಳನ್ನು ಜೆಎಂಎಫ್‍ಸಿ ಕೋರ್ಟ್‌ಗೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್‌ ಸೆ. 14ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಡಿವೈಎಸ್ ಪಿ ಕಚೇರಿಯಲ್ಲಿ ವಿಚಾರಣೆ
ಇದಕ್ಕೂ ಮೊದಲು ತನಿಖಾಧಿಕಾರಿ ಡಿವೈಎಸ್ಪಿ ಅನಿಲ್ ಕುಮಾರ್ ನೇತೃತ್ವದಲ್ಲಿ ಶ್ರೀಗಳ ವಿಚಾರಣೆ ಮಾಡಿದರು. ಚಿತ್ರದುರ್ಗ ಜಿಲ್ಲಾ 2ನೇ ಅಪರ ಮತ್ತು ಸತ್ರ ನ್ಯಾಯಾಲಯದಲ್ಲಿ ಇಂದು ಪ್ರಕರಣ 3ನೇ ಆರೋಪಿ ಮುರುಘಾಮಠದ ಉತ್ತರಾಧಿಕಾರಿ (ಬಾಲಪರಾಧಿ) ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದು, ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಲಾಗುತ್ತದೆ.

ಸ್ಥಳ ಮಹಜರು
ಪೊಲೀಸರು ನಿನ್ನೆ ಮಠಕ್ಕೆ ಸ್ವಾಮೀಜಿಯನ್ನ ಕರೆದೊಯ್ದು ಸ್ಥಳ ಮಹಜರು ಮಾಡಿದರು. ಇಂದು ಶ್ರೀಗಳ ನಾಲ್ಕನೇ ದಿನದ ಕಸ್ಟಡಿ ಅಂತ್ಯ ಹಿನ್ನೆಲೆ 11 ಗಂಟೆಗೆ ಶ್ರೀಗಳ ಕಸ್ಟಡಿ ಮುಗಿಯಲಿದ್ದು, ಅಷ್ಟರಲ್ಲಿ  ಶ್ರೀಗಳನ್ನ ಮತ್ತೊಂದು ರೌಂಡ್ ವಿಚಾರಣೆ ಸಾಧ್ಯತೆ ಇದೆ. ಈಗಾಗಲೇ ಇಷ್ಟು ದಿನದ ತನಿಖಾ‌ ವರದಿಯನ್ನ ನ್ಯಾಯಾಲಯಕ್ಕೆ ಸಲ್ಲಿಸಲಿರುವ ಪೊಲೀಸರು, ಪ್ರಾಥಮಿಕ ತನಿಖಾ ವರದಿ ಸಮೇತ ಶ್ರೀಗಳನ್ನ ಕೋರ್ಟ್​ಗೆ ಹಾಜರುಪಡಿಸಲಿದ್ದಾರೆ. ಶ್ರೀಗಳಿಗೆ ನ್ಯಾಯಾಂಗ ಬಂಧನವಾದ್ರೆ ಜಾಮೀನು ಅರ್ಜಿ‌ ವಿಚಾರಣೆ ನಡೆಯಲಿದ್ದು, ಜಾಮೀನು ಅರ್ಜಿ‌ ವಿಚಾರಣೆ ವೇಳೆ ಪಿ.ಪಿ ಆಕ್ಷೇಪಣೆ ಸಾಧ್ಯತೆಯಿದೆ. ಇಂದು ಕೋರ್ಟ್​ನಲ್ಲಿ ಸ್ವಾಮೀಜಿಗಳ ಭವಿಷ್ಯ ನಿರ್ಧಾರವಾಗಲಿದೆ.

No Comments

Leave A Comment