Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

“ಪವಿತ್ರವಾದ ಗೀತಾ ಲೇಖನ ಯಜ್ಞದಲ್ಲಿ ದೀಕ್ಷಿತರಾಗಿ” ಮಂತ್ರಾಲಯ ಶ್ರೀಪಾದರು

ಉಡುಪಿಯ ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು ಸಂಕಲ್ಪಿಸಿರುವ ಕೋಟಿಗೀತಾಲೇಖನಯಜ್ಞ ಕಾರ್ಯಕ್ರಮವು ಅತ್ಯಂತ ಪವಿತ್ರವಾದದ್ದು. ವಿಶೇಷವಾಗಿ ಇವತ್ತಿನ ಅನೇಕ ಸಮಸ್ಯೆಗಳಿಗೆ ಉತ್ತರರೂಪವಾಗಿದೆ. ಎಲ್ಲರ ಆತ್ಮೋದ್ಧಾರಕ್ಕೆ ಕಾರಣವಾದ ಈ ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪ್ರತಿಯೊಬ್ಬರೂ ದೀಕ್ಷೆಯನ್ನು ಸ್ವೀಕರಿಸಬೇಕು ” ಎಂದು ಮಂತ್ರಾಲಯ ಶ್ರೀರಾಘವೇಂದ್ರ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥಶ್ರೀಪಾದರು ಕರೆ ನೀಡಿದರು.

ರಾಯಚೂರು ಪ್ರದೇಶದಲ್ಲಿ ನಡೆಯುವ ಅಭಿಯಾನಕ್ಕೆ ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ವೃಂದಾವನ ಸನ್ನಿಧಿಯಲ್ಲಿ ಚಾಲನೆ ನೀಡಿದ ಶ್ರೀಗಳು ಪುತ್ತಿಗೆ ಶ್ರೀಪಾದರನ್ನು ಜನ್ಮನಕ್ಷತ್ರದ ಪ್ರಯುಕ್ತ ಅಭಿನಂದಿಸಿ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಅಭಿಮಾನದ ಸಂಚಾಲಕರಾದ ಡಾ.ಬಿ.ಗೋಪಾಲಾಚಾರ್ಯರು ಉಪಸ್ಥಿತರಿದ್ದರು.

No Comments

Leave A Comment