Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಭಗವದ್ಗೀತೆ ಲೇಖನದಿಂದ ಸರ್ವಸಂಕಷ್ಟಗಳ ನಿವಾರಣೆ

ಉಡುಪಿ:ಭಾವಿ ಪರ್ಯಾಯ ಪೀಠಾಧಿಪತಿ ಶ್ರೀ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರ ತಮ್ಮ ಚತುರ್ಥ ಪರ್ಯಾಯದ ಬಹುಮುಖ್ಯ ಯೋಜನೆಯಾದ ಕೋಟಿ ಗೀತಾ ಲೇಖನದ ಯಜ್ಞ ದೀಕ್ಷೆಗೆ ಇಂದು ಉದ್ಯಾವರದ ಪ್ರಸಿದ್ಧ ವೀರ ವಿಠ್ಠಲ ದೇವಳದಲ್ಲಿ ಶುಭೋದಯ ಟ್ರಸ್ಟ್ ನ ಅಧ್ಯಕ್ಷರಾದ ರಂಗನಾಥ್ ಶೆಣೈ ಯವರು ಚಾಲನೆ ನೀಡಿದರು.

ವಾಗ್ಮಿ ದಿನೇಶ್ ಕಾಮತ್ ಗೀತೆಯ ಪ್ರತಿ ವಾಕ್ಯವೂ ನಮ್ಮ ಆತ್ಮೋದ್ದಾರ ಕ್ಕೆ ಪೂರಕ ಅಲ್ಲದೆ ನಮ್ಮ ಸಂಕಷ್ಟಗಳನ್ನು ನಿವಾರಿಸುವದಲ್ಲದೆ , ಎದುರಿಸುವ, ಸಹಿಸುವ ಶಕ್ತಿಯನ್ನು ನೀಡಲಿದೆ ಎಂದು ತಿಳಿಸಿದರು. ಪುತ್ತಿಗೆ ಶ್ರೀಗಳಿಂದ ನಿಯೋಜಿತ ಪ್ರದ್ಯುಮ್ನ ತಂಡದ ರಮೇಶ್ ಭಟ್ ಕೆ ಇವರು ಶ್ರೀಗಳವರ ಈ ಯೋಜನೆಯ ಹಿಂದಿನ ಭಾವರ್ಥ ಹಾಗೂ ರೂಪು ರೇಷೆಗಳನ್ನು ವಿವರಿಸಿದರು.

ಸಭೆಯಲ್ಲಿ 2ನೆ ಮೊಕ್ತೇಸರರಾದ ಸುರೇಶ್ ಶೆಣೈ, ಟ್ರಸ್ಟಿಗಳಾದ ಪ್ರಕಾಶ್ ಶೆಣೈ, ದಯಾನಂದ ಭಂಡಾರ್ಕರ್ ಹಾಗೂ ಮಠದ ಗೀತಾ ಪ್ರಚಾರಕರಾದ ಸುರೇಶ್ ಕಾರಂತ್, ರವೀಂದ್ರ ಆಚಾರ್ಯ ಉಪಸ್ಥಿತರಿದ್ದರು.ವೀರ ವಿಠ್ಠಲ ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಲತಾ ಆಚಾರ್ಯ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.
ಕಾರ್ಯಕ್ರಮದಲ್ಲಿ ಸುಮಾರು 50 ಕ್ಕೂ ಹೆಚ್ಚು ಶ್ರೀ ಕೃಷ್ಣ ಭಕ್ತರು ಗೀತಾ ಲೇಖನ ದೀಕ್ಷೆ ಪಡೆದರು

No Comments

Leave A Comment