
ಸಂಸ್ಕಾರಯುಕ್ತ ಶಿಕ್ಷಣದಿಂದ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ಭದ್ರ-ರೆಂಜಾಳ ವೆಂಕಟರಮಣ ಉಪಾಧ್ಯಾಯ.
ಉಡುಪಿ:ಶ್ರೀ ಕೃಷ್ಣ ಮಧ್ವ ಸಂಸ್ಥಾನಮ್ ಉಡುಪಿ ಇದರ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಅಜೆಕಾರಿನ ಸುತ ಮುತ್ತ ಪರಿಸರದ ವಿವಿಧ ಶಾಲೆಗಳಲ್ಲಿ ಅಧ್ಯಾಪಕರಾಗಿ ಅಲ್ಲದೆ ಮುಖ್ಯೋಪಾಧ್ಯಾಯರಾಗಿ ಪ್ರಾಮಾಣಿಕರಾಗಿ ಸೇವೆ ಸಲ್ಲಿಸಿದ, ಶಿಸ್ತಿನ ಮಾಸ್ಟರ್ ಎಂದೇ ಖ್ಯಾತಿ ಪಡೆದಿರುವ ಹಿರಿಯ ಶಿಕ್ಷಕರಾದ,ಕೃಷಿ ತಜ್ಞ ವೆಂಕಟರಮಣ ಉಪಾಧ್ಯಾಯರು ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಶಶಿನಿ ವಿ ಉಪಾಧ್ಯಾಯರನ್ನು ಅಜೆಕಾರಿನ ಅವರ ಮನೆಯಲ್ಲೇ ಅಭಿನಂದನಾ ಪತ್ರ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.
ಅಭಿನಂದನೆಯನ್ನು ಸ್ವೀಕರಿಸಿದ ಆಚಾರ್ಯರು ಶಿಕ್ಷಕರ ದಿನ ಒಂದೇ ದಿನಕ್ಕೆ ಸೀಮಿತವಾಗದೆ , ಮೂಲಗುರುಗಳಿಂದ,ಹಿಡಿದು ತಮಗೆ ವಿದ್ಯೆ ಕಲಿಸಿದ ಎಲ್ಲಾ ಗುರುವರೇಣ್ಯರನ್ನು ನಿತ್ಯವೂ ಸ್ಮರಿಸಿ ಸಂಸ್ಕಾರಯುಕ್ತ ಶಿಸ್ತಿನ ಶಿಕ್ಷಣದಿಂದ ಮಾತ್ರ ವಿದ್ಯಾರ್ಥಿಗಳು ಮುಂದಿನ ಜೀವನವವನ್ನು ಸುಗಮವಾಗಿ ನಿರ್ವಹಿಸಬಲ್ಲರು ಎಂಬುದಾಗಿ ಗುರು ಸಂದೇಶ ನೀಡಿದರು. ಅವರ ಶಿಷ್ಯರಾದ ನಿಟ್ಟೆ ಇಂಜಿನೀಯರಿಂಗ್ ಕಾಲೇಜಿನ ಅಧ್ಯಾಪಕರಾದ ಶ್ರೀನಿವಾಸ ನೆಕ್ಕಾರು ರವರು ಗುರುಗಳ ವ್ಯಕ್ತಿತ್ವದ ಬಗ್ಗೆ ತಿಳಿಸಿದರು.