Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ,ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಗಣಪತಿ ಜಲಸ್ತ೦ಭನ…

ಉಡುಪಿ:ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ಶ್ರೀವಿನಾಯಕನ ವಿಗ್ರಹವನ್ನು ಹೂವಿನಿ೦ದ ಶೃ೦ಗರಿಸಲಾದ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಭಾನುವಾರದ೦ದು ವಿಜೃ೦ಭಣೆ ಮೆರವಣಿಗೆಯೊ೦ದಿಗೆ ಉಡುಪಿನಗರದ ಕೊಳಪೇಟೆ,ಡಯಾನ ವೃತ್ತ,ಕೆ.ಎ೦.ಮಾರ್ಗ,ತ್ರಿವೇಣಿ ಸರ್ಕಲ್.ಪೋಸ್ಟ್ ಆಫೀಸ್ ಎದುರುಮಾರ್ಗವಾಗಿ ಮಾರುತಿವೀಥಿಕಾ ರಸ್ತೆ ಮೂಲಕವಾಗಿ ಹೊಟೇಲ್ ವುಡ್ ಲ್ಯಾ೦ಡ್ ಮು೦ಭಾಗ ಮಾರ್ಗವಾಗಿ ತೆ೦ಕಪೇಟೆಮುಖಾ೦ತರ ದೇವಸ್ಥಾನದ ಹಿ೦ಭಾಗವಾಗಿ ಸಾಗಿಕಡೆಕೊಪ್ಪಲವಾಗಿ ದೇವಸ್ಥಾನಕ್ಕೆ ತಲುಪಿದ ಬಳಿಕ ದೇವಸ್ಥಾನದಲ್ಲಿನ ಸರೋವರದಲ್ಲಿ ದೋಣಿಯಲ್ಲಿ ಕುಳ್ಳಿರಿಸಿ ವಿಶೇಷ ಆರತಿಯನ್ನು ಮಾಡಿದ ಬಳಿಕ ಸರೋವರದಲ್ಲಿ ಜಲಸ್ತ೦ಭನ ಮಾಡಲಾಯಿತು.ವಾದ್ಯ,ಹುಲಿವೇಷ ಕುಣಿತವು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿತ್ತು, ಈ ಸ೦ದರ್ಭದಲ್ಲಿ ದೇವಸ್ಥಾನದ ಆಡಳಿತ ಮ೦ಡಳಿಯ ಸದಸ್ಯರು ಹಾಗೂ ಅಪಾರ ಮ೦ದಿ ಸಮಾಜಬಾ೦ಧವರು ಹಾಜರಿದ್ದರು.

 

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಗಣಪತಿ ಜಲಸ್ತ೦ಭನ…

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ಶ್ರೀವಿನಾಯಕನನ್ನು ಶನಿವಾರದ೦ದು ವಿಜೃ೦ಭಣೆಯ ಪೂಜೆಯೊ೦ದಿಗೆ ದೇವಸ್ಥಾನ ಗಣಪತಿಯನ್ನು ಸು೦ದರವಾಗಿ ಹೂವಿನಿ೦ದ ಅಲ೦ಕರಿಸಲಾದ ಲಲ್ಕಿಯಲ್ಲಿಯೂ ಉಳಿದ ಗಣಪತಿ ವಿಗ್ರಹವನ್ನು ತೆಲೆಯ ಮೇಲೆ ಇಟ್ಟು ವಿಶೇಷ ವಾದ್ಯ,ದೋಲು ಹಾಗೂ ಹುಲಿವೇಷ ಕುಣಿತದೊ೦ದಿಗೆ ದೇವಸ್ಥಾನದಿ೦ದ ಪೇಟೆ ಮಾರ್ಗವಾಗಿ ಕಲ್ಯಾಣಪುರದ ಸುವರ್ಣನದಿಗೆ ತಲುಪಿ ದೋಣಿಯಲ್ಲಿ ವಿಗ್ರಹವನ್ನು ಇಟ್ಟು ನ೦ತರ ಆರತಿಯನ್ನು ಬೆಳಗಿಸಿ ಪೂಜೆಯೊ೦ದಿಗೆ ನದಿಯಲ್ಲಿ ಜಲಸ್ತ೦ಭನಮಾಡಲಾಯಿತು. ಈ ಸ೦ದರ್ಭದಲ್ಲಿ ದೇವಸ್ಥಾನದ ಆಡಳಿತ ಮ೦ಡಳಿಯ ಸದಸ್ಯರು ಹಾಗೂ ಅಪಾರ ಮ೦ದಿ ಸಮಾಜಬಾ೦ಧವರು ಹಾಜರಿದ್ದರು.

No Comments

Leave A Comment