Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಸಿನಿಮಾನ ಅಥವಾ ಜಾಹೀರಾತು ಪ್ರಚಾರನಾ? ರೋಹಿತ್, ಗಂಗೂಲಿ, ರಶ್ಮಿಕಾ ಪೋಸ್ಟರ್ ವೈರಲ್, ಸೆ. 4ರಂದು ಬಹಿರಂಗ!

ಏಷ್ಯಾ ಕಪ್ 2022ರ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಮುಂದಿನ ಪಂದ್ಯ ಸೆಪ್ಟೆಂಬರ್ 4ರಂದು ಆಡಲಿದ್ದು ಅದೇ ದಿನ ಮೆಗಾ ಬ್ಲಾಕ್ ಬಸ್ಟರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ. ಇನ್ನು ವಿಶೇಷವೆಂದರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ನಟಿ ರಶ್ಮಿಕಾ ಮಂದಣ್ಣರ ಇನ್ ಸ್ಟಾಗ್ರಾಂನ ಚಿತ್ರದ ಪೋಸ್ಟರ್ ಸಹ ತೀವ್ರ ಕುತೂಹಲ ಕೆರಳಿಸಿದೆ.

ರೋಹಿತ್ ತಮ್ಮ ಹೊಸ ಚಿತ್ರದ ಬಿಡುಗಡೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ. ಈ ಯೋಜನೆಯನ್ನು ‘ಮೆಗಾ ಬ್ಲಾಕ್‌ಬಸ್ಟರ್’ ಎಂದು ಕರೆಯಲಾಗುತ್ತದೆ. ಅಲ್ಲದೆ ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ.

ಇನ್‌ಸ್ಟಾಗ್ರಾಮ್ ನಲ್ಲಿ ರೋಹಿತ್ ಶರ್ಮಾ ಪೋಸ್ಟ್ ಹಾಕಿದ್ದು, ಇದು ‘ಒಂದು ರೀತಿಯ ಚೊಚ್ಚಲ ಪ್ರವೇಶ’ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಇದರ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಅದೇ ಯೋಜನೆಯ ಪೋಸ್ಟ್ ಅನ್ನು ಹಾಕಿದರು, ಅದಕ್ಕೆ ಶೀರ್ಷಿಕೆ ನೀಡಿ, ಹೊಸ ಮೆಗಾ ಬ್ಲಾಕ್ಬಸ್ಟರ್ ಶೀಘ್ರದಲ್ಲೇ ಬಿಡುಗಡೆಯಾಗುತ್ತಿದೆ ಎಂದಿದ್ದಾರೆ.

ಇನ್ನು ನಟಿ ರಶ್ಮಿಕಾ ಮಂದಣ್ಣ ಸಹ ಇದೇ ಪೋಸ್ಟರ್ ಬಿಡುಗಡೆ ಮಾಡಿರುವುದು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.

No Comments

Leave A Comment