Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ವಾರಕ್ಕೆ 16 ಲಕ್ಷ ರೂಪಾಯಿ ಆಫರ್; ಟಿಎಂಸಿ ಸಂಸದೆ, ನಟಿ ನುಸ್ರತ್ ಜಹಾನ್ ಬಿಗ್‌ಬಾಸ್ 16ರಲ್ಲಿ ಕಾಣಿಸಿಕೊಳ್ಳಲಿದ್ದಾರಾ?

ನಟಿ ಹಾಗೂ ಟಿಎಂಸಿ ಸಂಸದೆ ನುಸ್ರತ್ ಜಹಾನ್ ಶೀಘ್ರದಲ್ಲೇ ಬಿಗ್ ಬಾಸ್ 16 ರಲ್ಲಿ ಕಾಣಿಸಿಕೊಳ್ಳಬಹುದು. ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುವ ಕಲರ್ಸ್ ಟಿವಿ ಶೋ ಅಕ್ಟೋಬರ್ ಮೊದಲ ವಾರದಲ್ಲಿ ಪ್ರೀಮಿಯರ್ ಆಗಲಿದೆ ಎಂದು ವರದಿಯಾಗಿದೆ. ಕಾರ್ಯಕ್ರಮ ತಯಾರಕರು ವಿವಾದಾತ್ಮಕ ಸೆಲೆಬ್ರಿಟಿಗಳನ್ನು ಕರೆತರಲು ಇಷ್ಟಪಡುತ್ತಾರೆ ಮತ್ತು ನುಸ್ರತ್ ಜಹಾನ್ ಅವರಿಗಿಂತ ಯಾರು ಉತ್ತಮರು ಎನ್ನುವ ಮಾತುಗಳು ಹರಿದಾಡುತ್ತಿವೆ.

ನುಸ್ರತ್ ಜಹಾನ್ ಅವರ ಹತ್ತಿರದ ಮೂಲಗಳ ಪ್ರಕಾರ, ಬಿಗ್ ಬಾಸ್ ಸೀಸನ್ 16 ರ ತಯಾರಕರು ನಟಿಯನ್ನು ಸಂಪರ್ಕಿಸಿದ್ದಾರೆ. ವಿವಾದಾತ್ಮಕ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡರೆ ನಟಿಗೆ ವಾರಕ್ಕೆ 16 ಲಕ್ಷ ರೂಪಾಯಿ ನೀಡುವುದಾಗಿ ಕೇಳಲಾಗಿದ್ದು, ಅವರು ಸಹಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಂಸದೆಯಾಗಿ ಆಯ್ಕೆಯಾಗಿದ್ದ ಅವರು ಪ್ರಮಾಣವಚನ ಸ್ವೀಕರಿಸುವ ಮುನ್ನವೇ 2019ರಲ್ಲಿ ಟರ್ಕಿಯಲ್ಲಿ ವಿಜೃಂಭಣೆಯಿಂದ ಹಸೆಮಣೆ ಏರಿದ್ದ ನುಸ್ರತ್ ಜಹಾನ್, ತಮ್ಮ ವಿವಾಹ ವಾರ್ಷಿಕೋತ್ಸವದ ಎರಡನೆಯ ವರ್ಷಾಚರಣೆ ಸಮೀಪವೇ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದರು.

ನಟಿ 2021ರ ಜೂನ್‌ನಲ್ಲಿ ಅಧಿಕೃತ ಹೇಳಿಕೆಯೊಂದನ್ನು ನೀಡಿ, ಉದ್ಯಮಿ ನಿಖಿಲ್ ಜೈನ್ ಅವರೊಂದಿಗಿನ ವಿವಾಹವು ಭಾರತದಲ್ಲಿ ಅಮಾನ್ಯವಾಗಿದೆ ಎಂದು ಹೇಳಿದ್ದರು. ಇದಾದ ಕೆಲವೇ ದಿನಗಳಲ್ಲಿ ನುಸ್ರತ್, ಯಿಶಾನ್ ಎಂಬ ಗಂಡು ಮಗುವಿಗೆ ಜನ್ಮ ನೀಡಿದ ನಂತರ ಯಶ್​ ದಾಸ್​ಗುಪ್ತ ಈ ಮಗುವಿಗೆ ತಂದೆ ಎಂದು ಹೇಳಿದ್ದರು.

ಬಿಗ್ ಬಾಸ್‌ನಲ್ಲಾಗುವ ನಿಯಮಿತ ನವೀಕರಣಗಳನ್ನು ಹಂಚಿಕೊಳ್ಳುವ ಇನ್‌ಸ್ಟಾಗ್ರಾಂ ಹ್ಯಾಂಡಲ್, ಬಿಬಿ 16 ರ ಸೆಟ್‌ಗಳಿಂದ ಸೋರಿಕೆಯಾದ ಫೋಟೋಗಳನ್ನು ಹಂಚಿಕೊಂಡಿದ್ದು, ಇದು ಸಲ್ಮಾನ್ ಖಾನ್ ನಡೆಸಿಕೊಟ್ಟ ಕಾರ್ಯಕ್ರಮದ ಸೆಟ್‌ಗಳ ಮೊದಲ ಲುಕ್ ಎಂದಿದೆ. ಸೆಟ್ ಇನ್ನೂ ನಿರ್ಮಾಣ ಹಂತದಲ್ಲಿದೆ ಮತ್ತು ಪ್ರದರ್ಶನದ ಥೀಮ್ ಆಕರ್ಷಕವಾಗಿದೆ.

ಈ ಹಿಂದೆ, ಝಲಕ್ ದಿಖ್ಲಾ ಜಾ ಕಾರಣದಿಂದ ಬಿಗ್ ಬಾಸ್ 16 ಅನ್ನು ನವೆಂಬರ್‌ಗೆ ಮುಂದೂಡಲಾಗುತ್ತದೆ ಎಂಬ ಊಹಾಪೋಹಗಳು ಇದ್ದವು.

No Comments

Leave A Comment