ದಾವೂದ್ ಇಬ್ರಾಹಿಮ್ ಕುರಿತ ಮಾಹಿತಿಗೆ 25 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ ಎನ್ಐಎ
ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ದಾವೂದ್ ಇಬ್ರಾಹಿಮ್ ಕುರಿತು ಮಾಹಿತಿ ನೀಡಿದವರಿಗೆ 25 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. ದಾವೂದ್ ಇಬ್ರಾಹಿಂ 1993 ರ ಮುಂಬೈ ಸರಣಿ ಸ್ಫೋಟದ ಪ್ರಮುಖ ಆರೋಪಿಯಾಗಿದ್ದು, ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ.
ಇಬ್ರಾಹಿಂ ನ ಆಪ್ತ ಶಕೀಲ್ ಶೇಖ್ ಕುರಿತು ಮಾಹಿತಿ ನೀಡಿದವರಿಗೆ 20 ಲಕ್ಷ ರೂಪಾಯಿ ಬಹುಮಾನವನ್ನು ಹಾಗೂ ಸಹಚರರಾದ ಹಾನಿ ಅನೀಸ್ ಅಲಿಯಾಸ್ ಅನೀಸ್ ಇಬ್ರಾಹಿಂ ಶೇಖ್, ಜಾವೇದ್ ಪಟೇಲ್, ಜಾವೇದ್ ಚಿಕ್ನಾ, ಇಬ್ರಾಹಿಮ್ ಮುಸ್ತಾಕ್, ಅಬ್ದುಲ್ ರಜಾಕ್ ಮೆಮೊನ್ ಅಲಿಯಾಸ್ ಟೈಗರ್ ಮೆಮೊನ್ ಕುರಿತಾದ ಮಾಹಿತಿಗೆ 15 ಲಕ್ಷ ರೂಪಾಯಿ ಬಹುಮಾನವನ್ನು ತನಿಖಾ ಸಂಸ್ಥೆ ಘೋಷಿಸಿದೆ. ಈ ಎಲ್ಲಾ ಆರೋಪಿಗಳೂ 1993 ಮುಂಬೈ ಸರಣಿ ಸ್ಫೋಟದಲ್ಲಿ ಬೇಕಾಗಿದ್ದು, ಇವರನ್ನು ಬಂಧನಕ್ಕೊಳಪಡಿಸಲು ಇವರ ಬಗ್ಗೆ ಪೂರಕವಾಗುವ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ಫೆಬ್ರವರಿಯಲ್ಲಿ ತನಿಖಾ ಸಂಸ್ಥೆ ಡಿ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿತ್ತು.