Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ನೋಯ್ಡಾ: ಸುಪ್ರೀಂ ತೀರ್ಪು ಹಿನ್ನೆಲೆ-ಅವಳಿ ಕಟ್ಟಡಗಳು ಕೆಲವೇ ಸೆಕೆಂಡ್‌ಗಳಲ್ಲಿ ನೆಲಸಮ

ನೋಯ್ಡಾ:ಆ ,28. ಐತಿಹಾಸಿಕ ಕುತುಬ್‌ ಮಿನಾರ್‌ಗಿಂತಲು ಎತ್ತರದ ನೋಯ್ಡಾದ ಸೂಪರ್‌ಟೆಕ್ ಅವಳಿ ಗೋಪುರಗಳನ್ನು ಕೆಲವೇ ಸೆಕೆಂಡ್‌ಗಳಲ್ಲಿ ಇಂದು ನೆಲಸಮಗೊಳಿಸಲಾಗಿದೆ. ನಿಯಮಬಾಹಿರವಾಗಿ ನಿರ್ಮಾಣಗೊಂಡ ಕಟ್ಟಡಗಳನ್ನು ನೆಲಸಮ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ ಒಂದೇ ವರ್ಷದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡ ಈ ಕಟ್ಟಡ ನೆಲಸಮಗೊಂಡಿದೆ.

ದೆಹಲಿಯ ಕುತುಬ್ ಮಿನಾರ್ 73 ಮೀಟರ್ ಎತ್ತರವಿದ್ದರೆ, ಸೂಪರ್‌ಟೆಕ್ ಅವಳಿ ಗೋಪುರವು ಸುಮಾರು 100 ಮೀಟರ್ ಎತ್ತರವಾಗಿತ್ತು. ‘ಜಲಪಾತದ ಸ್ಫೋಟ’ ತಂತ್ರದೊಂದಿಗೆ 3,700 ಕೆಜಿ ಸ್ಪೋಟಕಗಳನ್ನು ಬಳಸಿ ಸೆಕೆಂಡುಗಳಲ್ಲಿ ನೆಲಕ್ಕುರುಳಿಸಲಾಯಿತು.

ಸುಪ್ರೀಂಕೋರ್ಟ್ ಆದೇಶಾನುಸಾರ ಎಮರಾಲ್ಡ್ ಕೋರ್ಟ್ ಸೊಸೈಟಿ ಆವರಣದಲ್ಲಿ ನಿಯಮಬಾಹಿರವಾಗಿ ಕಟ್ಟಲಾಗಿದ್ದ ಈ ಕಟ್ಟಡಗಳನ್ನು ಮಧ್ಯಾಹ್ನ 2.30ಕ್ಕೆ ಕೆಡವಲಾಯಿತು. ಕಟ್ಟಡದ ನೆಲಸಮಕ್ಕೂ ಮುನ್ನ ನಾಗರಿಕರ ಸುರಕ್ಷತೆ ನಿಟ್ಟಿನಲ್ಲಿ ಪ್ರಾಂತೀಯ ಸಶಸ್ತ್ರ ಪಡೆಗಳ (ಪಿಎಸಿ) ಜೊತೆಗೆ 500 ಪೊಲೀಸ್‌ ಹಾಗೂ ಸಂಚಾರ ದಳ ಸಿಬಂದಿಯನ್ನು ಕಟ್ಟಡದ ಸುತ್ತಲೂ ನಿಯೋಜನೆ ಮಾಡಲಾಗಿತ್ತು. ಅಲ್ಲದೆ ಸುತ್ತಮುತ್ತಲಿನ 500 ಚದರ ಮೀಟರ್‌ ಪ್ರದೇಶವನ್ನು ನಿಷೇಧಿತ ವಲಯ ಎಂದು ಘೋಷಣೆ ಮಾಡಲಾಗಿತ್ತು. ನೋಯ್ಡಾ ಪ್ರಾಧಿಕಾರದ ಮಾರ್ಗದರ್ಶನದಲ್ಲಿ ಕಟ್ಟಡ ಕೆಡವಲಾಗಿದ್ದು, ಈ ಕಟ್ಟಡ ನೆಲಸಮಕ್ಕೆ 20 ಕೋಟಿ ರೂ. ಖರ್ಚು ತಗುಲಿದೆ ಎನ್ನಲಾಗಿದೆ.

ನಿಯಮಬಾಹಿರ ಕಟ್ಟಡ
ಕಟ್ಟಡವನ್ನು ಎಮರಾಲ್ಡ್ ಕೋರ್ಟ್ ಸೊಸೈಟಿ ಆವರಣದಲ್ಲಿ ನಿಯಮಬಾಹಿರವಾಗಿ ಕಟ್ಟಲಾಗಿತ್ತು. 14 ಮಹಡಿಗಳ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿದ್ದರೂ, ಕಾನೂನುಬಾಹಿರವಾಗಿ 40 ಮಹಡಿಗಳನ್ನು ನಿರ್ಮಿಸಲಾಗಿತ್ತು. ಅಲ್ಲದೆ ಉದ್ಯಾನವನ ನಿರ್ಮಾಣವಾಗಬೇಕಿದ್ದ ಸ್ಥಳದಲ್ಲಿ ಅಕ್ರಮವಾಗಿ ಅವಳಿ ಕಟ್ಟಡಗಳು ತಲೆ ಎತ್ತಿದ್ದವು. ಅವಳಿ ಕಟ್ಟಡಗಳು ಕಾನೂನುಬಾಹಿರವಾಗಿ ತಲೆ ಎತ್ತುತ್ತಿವೆ ಎಂದು ಆಕ್ಷೇಪವೆತ್ತಿದ ಸ್ಥಳೀಯರು 2012ರಲ್ಲಿ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು. 2014ರಲ್ಲಿ ನಿವಾಸಿಗಳ ಪರ ನ್ಯಾಯಾಲಯ ತೀಪುಉð ನೀಡಿ ನಾಲ್ಕು ತಿಂಗಳೊಳಗಾಗಿ ಕಂಪೆನಿ ಕಟ್ಟಡ ನೆಲಸಮ ಮಾಡಬೇಕೆಂದು ಆದೇಶಿಸಿತ್ತು. ಆದರೆ ಕಂಪೆನಿ ಮತ್ತು ಫ್ಲಾಟ್ ಖರೀದಿದಾರರು ಹೈಕೋರ್ಟ್ ತೀರ್ಪು ವಿರೋಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಸುಪ್ರೀಂಕೋರ್ಟ್ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದು ಕಟ್ಟಡ ನೆಲಸಮಕ್ಕೆ ಆದೇಶ ನೀಡಿತ್ತು. ಸುಪ್ರೀಂ ಕೋರ್ಟ್ ಆದೇಶದ ಒಂದು ವರ್ಷದಲ್ಲಿ ಕಟ್ಟಡ ನೆಲಸಮಗೊಂಡಿದೆ.

No Comments

Leave A Comment