ಬಲೂನ್‌ಗೆ ಗಾಳಿ ತುಂಬುತ್ತಿದ್ದಾಗ ಗ್ಯಾಸ್ ಸಿಲಿಂಡರ್ ಸ್ಫೋಟ – ಮಗು ಮೃತ್ಯು
ನಾಗ್ಪುರ:ಆ 28.ಅಜ್ಜ ಖರೀದಿಸುತ್ತಿದ್ದ ಬಲೂನ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಎರಡು ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಕೃಷಿ ಚಟುವಟಿಕೆ, ಎತ್ತುಗಳ ಮಹತ್ವ ತಿಳಿಸಲು ಆಚರಿಸಲಾದ ತನ್ಹಾ ಪೋಲಾ ಹಬ್ಬಕ್ಕೆ ಮಗು ತನ್ನ ಅಜ್ಜನೊಂದಿಗೆ ಹೋಗಿದ್ದು, ಈ ವೇಳೆ ಬಲೂನ್ ಖರೀದಿಸುತ್ತಿದ್ದಾಗ ಗಾಳಿ ತುಂಬಲು ಬಳಸುವ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ಸಿಲಿಂಡರ್‌ನ ಒಂದು ಭಾಗ ಆಕೆಯ ಕಾಲಿಗೆ ತಗುಲಿದ್ದರಿಂದ ಮಗು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ.
ಇನ್ನು ಈ ಬಗ್ಗೆ ಅಚಲಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.