ತುಳುನಾಡ ಟೈಗರ್ಸ್ ಪಡೆ ಇದರ ಸಹಭಾಗಿತ್ವದಲ್ಲಿ 3 ವಿಕಲ ಚೇತನ ಮಕ್ಕಳಿಗೆ ಧನಸಹಾಯ
ಬನ್ನಂಜೆ: ತುಳುನಾಡ ಟೈಗರ್ಸ್ ಪಡೆ ಇದರ ಸಹಭಾಗಿತ್ವದಲ್ಲಿ 3 ವರ್ಷದ ಹುಲಿ ವೇಷ ಕುಣಿತದಿಂದ ಪ್ರತೀ ವರ್ಷದಂತೆ ಈ ವರ್ಷವು 3 ವಿಕಲ ಚೇತನ ಮಕ್ಕಳಿಗೆ ಬನ್ನಂಜೆ ಶಿವಗಿರಿ ಹಾಲ್‍ನಲ್ಲಿ ಧನಸಹಾಯ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಅಂದರು ದೇವಿ ಪ್ರಸಾದ್ ಶೆಟ್ಟಿ , ಭರತ್ ಸೇವಾದಳ ಅಧ್ಯಕ್ಷರು, ರೂಪೇಶ್ ಕಲ್ಮಾಡಿ ಪ್ರೈಮ್ ಟಿವಿ, ಪ್ರಸನ್ನ ಅಲೆವೂರು, ಮುಕೇಶ್ ಕಟಪಾಡಿ, ಡ್ಯಾನಿ ಡಿ’ಸಿಲ್ವ ಐ ಗ್ಲಾಸಸ್ ಉಡುಪಿ, ರಂಜನ್ ಪೂಜಾರಿ ಕಿದಿಯೂರು, ಶಿವರಾಮ ಪಣಿಯಾಡಿ ಹಾಗೂ ತುಳುನಾಡು ಟೈಗರ್ಸ್ ಪಡೆ ಮುಖ್ಯಸ್ಥ, ರಾಜೇಶ್ ಸುವರ್ಣ, ಜಯಂತ್ ಸುವರ್ಣ, ದಿವಾಕರ್ ಪೂಜಾರಿ ಮತ್ತು ರಾಜೇಶ್ ಬಿ ಶೆಟ್ಟಿ, ಚೆನ್ನ ಕೇಶವ ಭಟ್ ವೇದಿಕೆಯಲ್ಲಿ ಆಸೀನರಾಗಿದ್ದರು. ನಿರೂಪಣೆ ರಾಜ್ ಶೇಖರ್ ನಿರ್ವಹಿಸಿದರು.