Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ಕಾಪು: ಮನೆಯ ಹಾಲ್‌ನಲ್ಲಿ ಮಲಗಿದ್ದ ಯುವತಿ ಬೆಳ್ಳಂಬೆಳಗ್ಗೆ ನಾಪತ್ತೆ

ಕಾಪು:ಆ 25.: ಯುವತಿಯೋರ್ವಳು ಬೆಳ್ಳಂಬೆಳಗ್ಗೆ ಮನೆಯಿಂದ ನಾಪತ್ತೆಯಾದ ಘಟನೆ ಆ. 23ರ ಮಂಗಳವಾರ ಉದ್ಯಾವರ ಸಂಪಿಗೆನಗರದಲ್ಲಿ ನಡೆದಿದೆ.

ನೇತ್ರಾವತಿ (20) ನಾಪತ್ತೆಯಾದ ಯುವತಿ. ಈಕೆ ಉದ್ಯಾವರ ಸಂಪಿಗೆನಗರ ಮಸೀದಿ ಬಳಿಯ ನಿವಾಸಿಯಾಗಿದ್ದು, ಕಳೆದ ಮೂರು ತಿಂಗಳಿನಿಂದ ಉದ್ಯಾವರದ ಸ್ಮಾರ್ಟ್ ಮೊಬೈಲ್ ಶಾಪ್‌ನಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಳು. ಸೋಮವಾರ ರಾತ್ರಿ ಊಟ ಮಾಡಿ ಹಾಲ್‌ನಲ್ಲಿ ಮಲಗಿದ್ದ ನೇತ್ರಾವತಿ ಮಂಗಳವಾರ ಬೆಳಗ್ಗೆ5.30ಕ್ಕೆ ಎದ್ದು ವಾಶ್ ರೂಂ ಗೆ ಹೋಗಿದ್ದಾಕೆ ಅಲ್ಲಿಂದ ಮತ್ತೆ ಮಲಗಿದ್ದ ಕಡೆ ಬಾರದೆ ನಾಪತ್ತೆಯಾಗಿದ್ದಳು.

ಯುವತಿ ನಾಪತ್ತೆಯಾಗಿರುವುದರಿಂದ ಆತಂಕಿತರಾದ ಮನೆಯವರು ಸಂಬಂಧಿಕರು, ಅಕ್ಕಪಕ್ಕದ ಮನೆಯವರಲ್ಲಿ ವಿಚಾರಿಸುದ್ದರಾದರೂ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಸದ್ಯ ಯುವತಿಯ ಸಹೋದರಿ ಜಯಲಕ್ಷ್ಮೀ ಅವರು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಾಪು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

No Comments

Leave A Comment