ಉಡುಪಿ: ಶ್ರೀಕೃಷ್ಣಮಠಕ್ಕೆ,ಕರ್ನಾಟಕ ರಾಜ್ಯಪಾಲರಾದ ತಾವರಚಂದ್ ಗೆಹಲೋಟ್ ರವರು ಇ೦ದು ಗುರುವಾರದ೦ದು ಭೇಟಿ ನೀಡಿದರು.ಈ ಸ೦ದರ್ಭದಲ್ಲಿ ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು.
ಆ ಬಳಿಕ ರಾಜ್ಯಪಾಲರು ಶ್ರೀಕೃಷ್ಣನ ರ್ಶನ ಪಡೆದು, ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರಿಗೆ ಹಾರ,ಫಲವಸ್ತುಗಳನ್ನು ಸಲ್ಲಿಸಿ ಗೌರವಿಸಿದರು.
ಪರ್ಯಾಯ ಶ್ರೀಪಾದರು ರಾಜ್ಯಪಾಲರನ್ನು ಸ್ಮರಣಿಕೆ ಹಾಗೂ ಶ್ರೀಕೃಷ್ಣನ ಪ್ರಸಾದ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವೆ ಶೋಭಾ ಕೇರಂದ್ಲಾಜೆ ಹಾಗೂ ರಾಜ್ಯ ಸಚಿವರುಗಳಾದ ಸುನಿಲ್ ಕುಮಾರ್ , ಅಂಗಾರ, ಉಡುಪಿ ಶಾಸಕರಾದ ಕೆ.ರಘುಪತಿ ಭಟ್,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಬಿ.ಜೆ.ಪಿ.ಜಿಲ್ಲಾಧ್ಯಕ್ಷ ,ಬಿ.ಜೆ.ಪಿ ಯ ಮ೦ಗಳೂರು ಪ್ರಬಾರಿ ಕೆ. ಉದಯಕುಮಾರ ಶೆಟ್ಟಿ , ಜಿಲ್ಲಾಧಿಕಾರಿಗಳು ಮತ್ತು ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ , ಪಾರುಪತ್ಯಗಾರರಾದ ಶ್ರೀನಿವಾಸ ಉಪಾಧ್ಯಾಯ ಹಾಗೂ ಪರ್ಯಾಯ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್,ವಾಸುದೇವ ಮೊದಲಾದವರು ಉಪಸ್ಥಿತರಿದ್ದರು.