ಉಡುಪಿ : ಮಾರುತಿವೀಥಿಕಾ 22ನೇ ಗಣೇಶೋತ್ಸವ ಆಚರಣೆಯ ಅಧ್ಯಕ್ಷರಾಗಿ ಗುರುರಾಜ್ ಎಂ ಶೆಟ್ಟಿ ಆಯ್ಕೆ
ಉಡುಪಿ : ನಗರದ ಸಂಸ್ಕೃತ ಕಾಲೇಜ್ ಬಳಿಯಲ್ಲಿನ ಶ್ಯಾಮ್ ಕಾಂಪ್ಲೆಕ್ಸ್ ನ ಮುಂಭಾಗದಲ್ಲಿ ಈ ಬಾರಿ 22ನೇ ಗಣೇಶೋತ್ಸವ ಆಚರಣೆಯ ಕುರಿತು ಸಮಿತಿಯ ಸಭೆಯಲ್ಲಿ ಎಲ್ಲರ ಒಮ್ಮತದಲ್ಲಿ ಗುರುರಾಜ್ ಎಂ ಶೆಟ್ಟಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಗುರುರಾಜ್ ಎಂ ಶೆಟ್ಟಿ ಅವರು ಗಣೇಶೋತ್ಸವ ಆಚರಿಸುವ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಅಧ್ಯಕ್ಷರಾದ ಗುರುರಾಜ್ ಎಂ ಶೆಟ್ಟಿ. ಪ್ರಧಾನ ಕಾರ್ಯದರ್ಶಿ ಗಣೇಶ್ ರಾಜ್ ಸರಳೇಬೆಟ್ಟು ಕೋಶಾಧಿಕಾರಿ ಸುಧಾಕರ್ ಶೆಟ್ಟಿ,ಹಾಗೂಇತರ ಪದಾಧಿಕಾರಿಗಳಾದ ಪ್ರಸನ್ನ ರಾಜ್ ಮಠದಬೆಟ್ಟು , ರಾಜೇಶ್ ಕಲ್ಮಾಡಿ, ಭಾಸ್ಕರ್ ಮೆಂಡನ್ ಮಂಜುನಾಥ ಶೆಟ್ಟಿ ಚಂದ್ರಗಾಣಿಗ ಎನ್ ಸುನಿಲ್ ಶೇಟ್ ಜಯಶೇಟ್ ಜಗದೀಶ ಗೋಪಾಲಕೃಷ್ಣ ಮೊಹಮ್ಮದ್ ಡೇನಿಸ್ ಡಿಸೋಜಾ ಜೊತೆಗಿದ್ದರು.ಹಾಗೂ ಇನ್ನಿತರ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಗಣೇಶೋತ್ಸವವು ಒಂದು ದಿನದ ವಿಶೇಷ ಕಾರ್ಯಕ್ರಮ ನಡೆಯಲಿದೆ.
ಆ 31ರ ಚೌತಿ ದಿನದಂದು ವಿಜೃಂಭಣೆಯೊಂದಿಗೆ ಬೆಳಿಗ್ಗೆ 10 ಗಂಟೆಗೆ ವಿಗ್ರಹ ಪ್ರತಿಷ್ಠಾಪನೆ. ಮಧ್ಯಾಹ್ನ 12 ಗಂಟೆಗೆ ಗಣ ಹೋಮ ಪೂಜೆ, ಸಂಜೆ 6: 00ಗಗಂಟೆಗೆ ರಂಗ ಪೂಜೆ, ಮಹಾಪೂಜೆ 7:30ಕ್ಕೆಮೆರವಣಿಗೆ ಮೂಲಕ ಸಂಸ್ಕೃತಕಾಲೇಜು. ಸಾಯಿ ರಾಮ್, ಸರ್ವಿಸ್ ಬಸ್ ಸ್ಟಾಂಡ್ ಗಾಂಧಿ ಚೌಕ ತಿರುಗಿ ಕೆ.ಎಮ್, ಮಾರ್ಗ ಕೋರ್ಟ್ ರಸ್ತೆ ಯಲ್ಲಿ ಸಾಗಿ ಉಡುಪಿಯ ಕಿನ್ನಿಮೂಲ್ಕಿ
ಕನ್ನರ್ ಪಾಡಿಯ ಶ್ರೀ ಜಯ ದುರ್ಗಾಪರಮೇಶ್ವರಿ ದೇವಸ್ಥಾನ ಕೆರೆಯಲ್ಲಿ ಗಣೇಶ ವಿಗ್ರಹ ಜನಸ್ತಂಬಗೊಳ್ಳಲಿದೆ ಎಂದು ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಣೇಶ್ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ,