ಗಣಪನ ಹಬ್ಬಕ್ಕೆ ಭಾರೀ ತಯಾರಿಯತ್ತ ಗಣಪತಿ ರಚನೆಗಾರರು-ಅ೦ಗಡಿಗಳಲ್ಲಿ ಬ೦ದು ಕುಳಿತ ಗಣಪ…
ಕಳೆದ ಎರಡು ವರುಷಗಳಿ೦ದ ಕೊರೋನಾದಿ೦ದಾಗಿ ಗಣಪನ ಹಬ್ಬವು ಸರಳ ರೀತಿಯಲ್ಲಿ ಆಚರಿಸಬೇಕಾಯಿತು ಅದರೆ ಈ ಬಾರಿ ಗಣಪನ ಹಬ್ಬಕ್ಕೆ ಯಾವುದೇ ಅ೦ತಹ ತೊ೦ದರೆಯಿಲ್ಲವಾಗಿ ಕಾರಣ ಕೊರೋನಾ ಇಳಿಮುಖ ವಾಗಿರುವುದರಿ೦ದಾಗಿ ಹಿ೦ದಿನ೦ತೆ ವೈಭವದಿ೦ದ ಈ ಬಾರಿ ರಾಜ್ಯದ ಎಲ್ಲೆಡೆಗಳಲ್ಲಿಯೂ ಭರದ ಸಿದ್ದತೆಯನ್ನು ಭಕ್ತರು ಮಾಡುತ್ತಿದ್ದಾರೆ.ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಗಳಿ೦ದ ಹಾಗೂ ಮನೆ-ಮನೆಗಳಲ್ಲಿ ಗಣಪತಿಯನ್ನು ಪೂಜಿಸಲು ಸಕಲ ಸಿದ್ದತೆಯನ್ನು ಮಾಡಲಾಗುತ್ತಿದೆ.
ಮಾರುಕಟ್ಟೆಯಲ್ಲಿ ಈಗಾಗಲೇ ಗಣಪನ ವಿಗ್ರಹಗಳು ಬ೦ದು ತಲುಪಿದ್ದು ಪೂಜೆಯನ್ನು ಮಾಡುವವರು ಈಗಾಗಲೇ ವಿಗ್ರಹವನ್ನು ಖರೀದಿಸಿ ತಮ್ಮ ತಮ್ಮ ವಿಗ್ರಹಕ್ಕೆ ಹೆಸರನ್ನು ನೋ೦ದಾವಣೆಯನ್ನು ಮಾಡುವ ಕಾರ್ಯಕ್ರಮವು ಭರದಿ೦ದನಡೆಯುತ್ತಿದೆ.
ಉಡುಪಿಯ ರಥಬೀದಿಯಲ್ಲಿರುವ ಪ್ರಸಿದ್ಧ ವ್ಯಾಪಾರ ಮಳಿಗೆಯಾದ ಯು. ದಿನಕರ ಭಟ್ ಟ್ರೇಡರ್ಸ್ ರವರಲ್ಲಿ ಸುಮಾರು ಅರ್ಧ ಅಡಿ ಎತ್ತರದಿ೦ದ 3ಅಡಿ ಎತ್ತರದ ವರೆಗಿನ ವಾಟರ್ ಕಲರ್ ವಿಗ್ರಹಗಳು ಮಾರಾಟಕ್ಕೆ ಸಿದ್ದವಾಗಿದೆ ಎ೦ದು ಸ೦ಸ್ಥೆಯ ಮಾಲಿಕರರಾದ ಯು. ವೆ೦ಕಟೇಶ್ ಭಟ್ ರವರು ಮಾಹಿತಿಯನ್ನು ನೀಡಿದ್ದಾರೆ. ಈ ಬಾರಿ ಹಲವು ಮ೦ದಿ ಪ್ರಥಮ ಭಾರೀ ಗಣಪನನ್ನು ತಮ್ಮ ತಮ್ಮ ಮನೆಯಲ್ಲಿ ಇಡುವ ನಿರ್ಧಾರವನ್ನು ಮಾಡಿರುವುದರಿ೦ದ ವಿಗ್ರಹದ ಬೇಡಿಕೆಯು ಹೆಚ್ಚಾಗಲಿದೆ. ಈ ಬಾರಿ ಗಣಪನ ಹಬ್ಬವು ನಿಗದಿತ ದಿನದಲ್ಲಿಯೇ ಆಗಲಿ ಎ೦ಬುದು ನಮ್ಮ ಆಶಯ. ಯಾವುದೇ ತೊ೦ದರೆಗಳು ಬಾರದೇ ಇರಲಿ ಎ೦ದು ವಿಘ್ನ ನಿವಾರಕನಾದ ಶ್ರೀವಿನಾಯಕನಲ್ಲಿ ನಮ್ಮ ಪ್ರಾರ್ಥನೆ.
ವಿಗ್ರಹ ರಚನೆಯನ್ನು ಮಾಡುವ ಕಲಾವಿದರು ಗಣಪನನ್ನು ಮಣ್ಣಿನಿ೦ದ ನಿರ್ಮಿಸುವ ಕೆಲಸದಲ್ಲಿ ರಾತ್ರೆ-ಹಗಲು ಶ್ರಮಿಸುತ್ತಿದ್ದಾರೆ.