ಉಡುಪಿ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘ- ನೂತನ ಸಹಾಯಕ ಔಷಧ ನಿಯಂತ್ರಕರಾಗಿ ನಿಯುಕ್ತಿ ಗೊಂಡಿರುವ ಶಂಕರ್ ನಾಯಕ್
ಉಡುಪಿ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘ (ರಿ)ಇವರ ವತಿಯಿಂದ ಉಡುಪಿ ಜಿಲ್ಲೆಗೆ ನೂತನವಾಗಿ ಸಹಾಯಕ ಔಷಧ ನಿಯಂತ್ರಕರಾಗಿ ನಿಯುಕ್ತಿ ಗೊಂಡಿರುವ ಶಂಕರ್ ನಾಯಕ್ ಇವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಸತಾತ ಆರು ವರ್ಷಗಳ ಕಾಲ ಉಡುಪಿ ಜಿಲ್ಲೆಯಲ್ಲಿ ಸಹಾಯಕ ಔಷಧ ನಿಯಂತ್ರಕರಾಗಿ ಸೇವೆ ಸಲ್ಲಿಸಿದಂತಹ ಕೆವಿ ನಾಗರಾಜ್ ಇವರನ್ನು ಬೀಳ್ಕೊಡಲಾಯಿತು.
ಸಭೆಯಲ್ಲಿ ಸಂಘದ ಅಧ್ಯಕ್ಷರಾದ ಐಡಿಯಲ್ ಮೆಡಿಕಲ್ ಸಪ್ಲೈ ಯರ್ ನ ವಿ ಜಿ ಶೆಟ್ಟಿ ಸಾಯಿ ರಾಧ ಗ್ರೂಪನ ಪ ಅಧ್ಯಕ್ಷರಾದ ಮನೋಹರ್ ಶೆಟ್ಟಿ ಮೆಡಿಕಲ್ ಎಂಪೋರಿಯಂ ನ ರಮೇಶ್ ನಾಯಕ್, ಫಾರ್ಮ ಅಂಕ್ಸ್ ನ ಕುಂದಾಪುರದ ಸದಾಶಿವ ರಾವ್ ಗೌತಮ ಏಜನ್ಸಿಯ ರಮೇಶ್ ನಾಯಕ್ ಮೈಸೂರು ಮೆಡಿಕಲ್ಸ್ ನ ರಿಚರ್ಡ್ ಡೇಸ ಸ್ವಸ್ತಿಕ್ ಫಾರ್ಮ ಬನ್ನಂಜೆಯ ಯು ಸುಬ್ರಹ್ಮಣ್ಯ ರಾವ್ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು