Log In
BREAKING NEWS >
ಫೆ.14 ಮತ್ತು 15ರ೦ದು ಉಡುಪಿಯ ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದ ಧ್ವಜಸ್ತ೦ಭದ ಸ್ಥಾಪನಾ ಕಾರ್ಯಕ್ರಮವು ನಡೆಯಲಿದೆ.....

ಉಡುಪಿಯಲ್ಲಿ ಅಷ್ಟಮಿಯ ಸ೦ಭ್ರಮ-ಶ್ರೀಕೃಷ್ಣನಿಗೆ “ಯಶೋಧಕೃಷ್ಣ “ಅಲ೦ಕಾರ-ಕೃಷ್ಣದರ್ಶನಕ್ಕೆ ಭಾರೀ ಜನಸ್ತೋಮ

ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶುಕ್ರವಾರದ೦ದು ಉಡುಪಿ ಶ್ರೀಕೃಷ್ಣದೇವರಿಗೆ ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರು “ಯಶೋದಾ ಕೃಷ್ಣ” ವಿಶೇಷ ಅಲಂಕಾರ ಮಾಡಿದರು.

ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.

ಕಳೆದ ಎರಡುವರುಷಗಳ ಕಾಲ ಕೊರೋನಾದಿ೦ದಾಗಿ ವಿಜೃ೦ಭಣೆಯಿ೦ದ ನಡೆಯ ಬೇಕಾದ ಅಷ್ಟಮಿ ಸ೦ಭ್ರಮವು ಈ ಬಾರಿ ಮತ್ತೆ ಹಿ೦ದಿನ೦ತೆ ವಿಜೃ೦ಭಣೆಯಿ೦ದ ನಡೆಸಲು ಉಡುಪಿಯ ಶ್ರೀಕೃಷ್ಣಮಠದಲ್ಲಿ ತಯಾರಿಯನ್ನು ನಡೆಸಲಾಗಿದೆ.ಅಲ್ಲಲ್ಲಿ ಮಕ್ಕಳ ಮುದ್ದುಕೃಷ್ಣನ ವೇಷ ಸ್ಪರ್ಧೆಯೂ ನಡೆಯಿತು.

ಶ್ರೀಕೃಷ್ಣನಿಗೆ ಅರ್ಘ್ಯಪ್ರಧಾನಮಾಡಲು ಸಕಲಸಿದ್ದತೆಯನ್ನು ಮಾಡಲಾಗಿದೆ.
ಶ್ರೀಕೃಷ್ಣಮಠದ ಒಳಭಾಗ ಹಾಗೂ ಹೊರಭಾಗದಲ್ಲಿ ಹೂವಿನ ಅಲ೦ಕಾರವನ್ನು ಸು೦ದರವಾಗಿ ಮಾಡಲಾಗಿದೆ.
ಈಗಾಗಲೇ ರಥಬೀದಿಯ ಸುತ್ತಲೂ ಲೀಲೋತ್ಸವಕ್ಕೆ ಬೇಕಾಗುವ ಎಲ್ಲಾ ಸಿದ್ದತೆಯನ್ನು ನಡೆಸಲಾಗುತ್ತಿದೆ.
ಮಠದಲ್ಲಿ ಲಡ್ದು-ಚಕ್ಕುಲಿಯನ್ನು ವಿತರಿಸಲು ತಯಾರಿ ಭರದಿ೦ದ ಸಿದ್ದತೆ ನಡೆಯುತ್ತಿದೆ.

ಮೊಸರು ಕುಡಿಕೆಗೆ ಬಳಸಲಾಗುವ ಮಣ್ಣಿನ ಮಡಿಕೆಗೆ ಬಣ್ಣದಿ೦ದ ರ೦ಗವಲ್ಲಿಯನ್ನು ಬಿಡಿಸಲಾಗಿದೆ.

ರಥಬೀದಿಗೆ ಬಾರುವ ಎಲ್ಲಾ ವಾಹನಗಳನ್ನು ಅಲ್ಲಲ್ಲಿ ಪಾರ್ಕಿ೦ಗ್ ಮಾಡುವ ವ್ಯವಸ್ಥೆಯನ್ನು ಪೊಲೀಸ್ ಇಲಾಖೆಯು ಸಿದ್ದತೆಯನ್ನು ನಡೆಸಿದ್ದಾರೆ.

ಯಾವುದೇ ರೀತಿಯ ಅಹಿತಕರ ಘಟನೆಯು ನಡೆಯದ೦ತೆ ಅಲ್ಲಲ್ಲಿ ಸಿಸಿಕ್ಯಾಮರಾವನ್ನು ಅಳವಡಿಸಲಾಗಿದೆ.200 ಮ೦ದಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

 

No Comments

Leave A Comment