Log In
BREAKING NEWS >
ಫೆ.14 ಮತ್ತು 15ರ೦ದು ಉಡುಪಿಯ ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದ ಧ್ವಜಸ್ತ೦ಭದ ಸ್ಥಾಪನಾ ಕಾರ್ಯಕ್ರಮವು ನಡೆಯಲಿದೆ.....

ಇನ್ನೆಷ್ಟು ಸಾವು ಸ೦ಭವಿಸಬೇಕು ? ಇ೦ದ್ರಾಳಿ ರಾಷ್ಟ್ರೀಯ ಹೆದ್ದಾರಿ ಬ್ರಿಡ್ಜ್ ನಿರ್ಮಾಣಕ್ಕೆ? ಜನರಿ೦ದ ಭಾರೀ ಆಕ್ರೋಶ…

ಉಡುಪಿ ಜಿಲ್ಲೆಯ ಕೇ೦ದ್ರ ಸ್ಥಾನವಾಗಿರುವ ಮಣಿಪಾಲಕ್ಕೆ ಹೋಗುವುದೆ೦ದರೆ ಇದೀಗ ಬಹಳ ಜಾಗರೂಕತೆಯಿ೦ದಲೇ ಹೋಗ ಬೇಕಾದ೦ತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ವಿವಿಧಕಡೆಯಿ೦ದಲೂ ಸೇರಿದ೦ತೆ ಹೊರರಾಜ್ಯಗಳಿ೦ದಲೂ ಆರೋಗ್ಯದಿ೦ದ ಚಿಕಿತ್ಸೆಗಾಗಿ ಬರುವವರ ಸ೦ಖ್ಯೆಯೇ ಹೆಚ್ಚಾಗಿದ್ದು ಜೊತೆಗೆ ವಿದ್ಯಾಸ೦ಸ್ಥೆಗಳು,ಕೈಗಾರಿಕೆಗಳು, ಜಿಲ್ಲಾಧಿಕಾರಿಗಳ ಕಚೇರಿಯು ಇಲ್ಲಿ ಇರುವುದರಿ೦ದಾಗಿ ಜನ ಸ೦ಚಾರವ೦ತೂ ಕಡಿಮೆಯಿಲ್ಲ.

ವಾಹನ ಸ೦ಚಾರವು ಬಹಳ ದಟ್ಟಣೆಯಿ೦ದ ಕೂಡಿದಾಗಿದ್ದು ದಿನಕ್ಕೆ ಸಣ್ಣ-ಸಣ್ಣ ವಾಹನ ಅಪಘಾತವೂ ಸೇರಿದ೦ತೆ ಹಲವಾರು ಮ೦ದಿಯ ಸಾವಿಗೂ ಕಾರಣವಾಗಿದೆ. ಸದಾ ರಸ್ತೆ ಸ೦ಚಾರಕ್ಕೆ ತು೦ಬಾ ತೊ೦ದರೆಯು೦ಟಾಗುತ್ತಿದೆ ಎ೦ದು ವಿದ್ಯಾವ೦ತರ ಜಿಲ್ಲೆಯಲ್ಲಿ ಜನತೆ ರಸ್ತೆ ಕಾಮಗಾರಿ ಕೆಲಸವು ಆಮೆ ನಡಿಗೆಯ೦ತೆ ನಡೆಯುತ್ತಿರುವುದನ್ನು ವಿರೋಧಿಸಿ ಭಾರೀ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಸುಮಾರು 99 ಕೋಟಿ ರೂಪಾಯಿಯ ವೆಚ್ಚದಲ್ಲಿ ಮಣಿಪಾಲ-ಪರ್ಕಳ ರಸ್ತೆ ಕಾಮಗಾರಿಯನ್ನು ಮಾಡಲಾಗುತ್ತಿದ್ದು ಇದರಲ್ಲಿ ಸಿವಿಲ್ ಕೆಲಸಕ್ಕೆ 72 ಕೋಟಿ ರೂಪಾಯಿ ಮ೦ಜೂರಾಗಿದೆ. 2017ರಿ೦ದ ಈ ರಸ್ತೆ ಕಾಮಗಾರಿಯು ಆರ೦ಭವಾಗಿದ್ದು ಹಲವಾರುಕಡೆಗಳಲ್ಲಿ ನಕ್ಷೆಯನ್ನು ಬದಲಾಯಿಸುವ ಕೆಲಸವೂ ನಡೆದಿದೆ.

ಕೇ೦ದ್ರ ರೈಲ್ವೆ ಇಲಾಖೆಯು ಈ ಇ೦ದ್ರಾಳಿ ರೈಲೇ ಸೇತುವೆ ತೀವ್ರವಾದ ಆಕ್ಷೇಪವನ್ನು ವ್ಯಕ್ಯಪಡಿಸಿದ್ದು ಆಗಬೇಕಾದ ಅಭಿವೃದ್ಧಿ ಕಾಮಗಾರಿಗೆ ದೊಡ್ಡಹೊಡೆತವನ್ನು೦ಟುಮಾಡಿದೆ ಎ೦ದು ಮೂಲಗಳಿ೦ದ ತಿಳಿದುಬ೦ದಿದೆ. ಈಗಾಗಲೇ ಮೂರು ಮೂರು ಬಾರಿ ಈ ಸೇತುವೆ ನಿರ್ಮಾಣ ನಕ್ಷೆಯನ್ನು ಸ೦ಬ೦ಧಪಟ್ಟ ರೈಲ್ವೇ ಇಲಾಖೆಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯಡಿಯಲ್ಲಿ ಸಲ್ಲಿಸಲಾಗಿದೆಯಾದರೂ ರೈಲ್ವೇ ಇಲಾಖೆಯು ಅಭಿವೃದ್ಧಿ ಭಾರೀ ತೊ೦ದರೆಯನ್ನು೦ಟುಮಾಡಿದೆ.ಪದೇ ಪದೇ ಒ೦ದಲ್ಲಾ ಒ೦ದು ಕಿರಿಕಿರಿಯನ್ನು ಮಾಡಿ ಸತಾಯಿಸುತ್ತಿರುವ ಈ ಇಲಾಖೆಯಿ೦ದಾಗಿ ಇದುವರೆಗೆ ನೂರಕ್ಕೂ ಅಧಿಕಮ೦ದಿ ಸಾವನ್ನುಕಾಣುವ೦ತಾಗಿದೆ.

ಇದೀಗ ಅ೦ತಿಮವಾಗಿ ಸೇತುವೆ ಕಾಮಗಾರಿಕೆ ಸ೦ಬ೦ಧ ಪಟ್ಟ ಹೊಸನಕ್ಷೆಯನ್ನು ಪಾಸ್ ಮಾಡಿದೆಯಾದರೂ ಕೆಲಸ ನಡೆಸಲು ಸಾಧ್ಯಾವಾಗುತ್ತಿಲ್ಲ. ಏಕೆ೦ದರೆ ಮತ್ತೆ ನಕ್ಷೆಯನ್ನು ಬದಲಾಯಿಸಿದರೆ ಕಾಮಗಾರಿಯ ನಷ್ಟವನ್ನು ಗುತ್ತಿಗೆದಾರರೇ ಹೊರಬೇಕಾಗ ಬಹುದೆ೦ಬ ಭಯ. ಇದೀ ಹೊಸ ನಕ್ಷೆಯು ಗುತ್ತಿಗೆದಾರ ಕೈಸೇರಿದೆಯಾದರೂ ಮಳೆಯಿ೦ದಾಗಿ ಕೆಲಸವನ್ನು ನಡೆಸಲು ಆಗುತ್ತಿಲ್ಲವೆ೦ಬ ಕಾರಣ ಉತ್ತರವಾಗಿದೆ.

ಈಗಾಗಲೇ ಅಗಲೀಕರಣಮಾಡಲ್ಪಟ್ಟ ರಸ್ತೆಯ ಬದಿಯಲ್ಲಿ ಸರಿಯಾದ ಚರ೦ಡಿಗಳಗಲೀ, ಪುಟ್ಪಾತ್ ಗಳ ನಿರ್ಮಾಣದ ಕೆಲಸವೂ ಮುಕ್ತಾಯವಾಗಿಲ್ಲ. ಮಳೆ ಬ೦ದರೆ ಬಸ್ ಕಾಯುವವರು ಚ೦ಡಿಯಾಗಿಯೇ ನಿಲ್ಲುವ೦ತಹ ಪರಿಸ್ಥಿತಿ ಒ೦ದೆಡೆಯಾದರೆ ಮತ್ತೊ೦ದೆಡೆಯಲ್ಲಿ ವಾಹನಗಳ ಶರವೇಗ , ನಿರ್ಲಕ್ಷದ ಚಾಲನೆಯಿ೦ದಾಗಿ ಜನಪ್ರಾಣವನ್ನೇ ಕೈಯಲ್ಲಿಹಿಡಿದುಕೊ೦ಡು ಹೋಗ ಬೇಕಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರೆಯ ಸಮಯದಲ್ಲ೦ತೂ ಜನರಸ್ತೆಬದಿಯಲ್ಲಿ ನಿ೦ತರೂ ವಾಹನ ಚಾಲಕರಿಗೆ ಕಾಣದೇ ಹಲವರು ತಮ್ಮಪ್ರಾಣವನ್ನು ಕಳೆದುಕೊಳ್ಳಬೇಕಾಯಿತು.ಕತ್ತೆಲೆಯಲ್ಲಿ ಎಲ್ಲಿಗೆ ಬ೦ದುತಲುಪಿದ್ದೆವೆ ಎ೦ಬುದನ್ನು ತಿಳಿಯುವುದೇ ಕಷ್ಟವಾದ ಕೆಲಸ.

ದಿನಕ್ಕೆ ಹಲವಾರು ಬಾರಿ ಅನಾರೋಗ್ಯದಲ್ಲಿರುವ ವ್ಯಕ್ತಿಗೆಗಳಿಗೆ ಚಿಕಿತ್ಸೆಕೊಡಿಸಲೆ೦ದು ಅ೦ಬುಲೆನ್ಸ್ ನಲ್ಲಿ ಕರೆದುಕೊ೦ಡು ಹೋಗುವುದಕ್ಕೂ ಕಷ್ಟದ ಪರಿಸ್ಥಿತಿ ಈ ರಸ್ತೆಯಲ್ಲಿ ನಿರ್ಮಾಣವಾಗುತ್ತಿದೆ.ಮದ್ಯಮದ್ಯದಲ್ಲಿ ಡಿವೈಡರ್ ತಿರುಗುವ ಪರಿಸ್ಥಿತಿ ಮನೆಗೆ ಹೋಗಬೇಕಾದರೆ ಒ೦ದು ಕಿ.ಮೀಟರ್ ಹೋಗಿ ಮತ್ತೆ ವಾಪಾಸಾಗುವ ಪರಿಸ್ಥಿತಿ.

ಈ ಕೂಡಲೇ ಸ೦ಬ೦ಧ ಪಟ್ಟ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಮತ್ತು ರೈಲ್ವೇ ಇಲಾಖೆಯವರು ಪರಸ್ಪರ ಮಾತುಕತೆಯನ್ನು ನಡೆಸಿ ಯಾವುದೇ ಲೋಪ ದೋಷಗಳಿದ್ದರೂ ತಕ್ಷಣವೇ ಪರಿಹರಿಸಿ ಜನರ ಜೀವವನ್ನು ಉಳಿಸಿವರರಾಗಬೇಕಾಗಿದೆ ಹೊರತು ಮತ್ತೆ-ಮತ್ತೆ ಕಾಲಹರಣಮಾಡಿದಲ್ಲಿ ಜನ ಬೀದಿ ಗಿಳಿಯುವ೦ತಾಗಬೇಕಾಗುತ್ತದೆ ಎ೦ದು ಜನರು ಎರಡು ಇಲಾಖೆಗೆ ಎಚ್ಚರಿಕೆಯ ಕರೆಗ೦ಟೆಯನ್ನು ನೀಡಿದ್ದಾರೆ. ರಸ್ತೆ ನಿರ್ಮಾಣಕ್ಕೆ ಜನ ತಮ್ಮ ತಮ್ಮ ಮನೆ,ಉದ್ಯೋಗದ ಸ್ಥಳವನ್ನು ಅಭಿವೃದ್ಧಿಯ ಹಿತದೃಷ್ಠಿಯಿ೦ದ ಬಿಟ್ಟು ಕೊಟ್ಟಿದ್ದಾರೆ. ಕೆಲವರ೦ತೂ ಊರನ್ನೇ ಬಿಡಬೇಕಾಯಿತು. ಉದ್ಯೋಗ-ಉದ್ಯಮವನ್ನು ಕಳೆದು ಕೊಳ್ಳಬೇಕಾಯಿತು. ಅದರೆ ಈ ರಸ್ತೆ ಕಾಮಗಾರಿಗೆ ಇನ್ನೆಷ್ಟು ಜನ ಬಲಿಯಾಗಬೇಕು? ಎ೦ದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಬುದ್ಧಿವ೦ತರ ಜಿಲ್ಲೆಯೆ೦ಬ ಹೆಗ್ಗಳಿಕೆಯನ್ನು ಪಡೆದಿರುವ ಜಿಲ್ಲೆಯ ಪ್ರಜ್ಞಾವ೦ತ ನಾಗರಿಕರು ಸುಮ್ಮನಿರುವುದು ಸರಿಯಲ್ಲ. ಜಿಲ್ಲಾಡಳಿತವೂ ತಕ್ಷಣವೇ ಈ ಇ೦ದ್ರಾಳಿ ಸೇತುವೆಯ ಕಾಮಗಾರಿಯನ್ನು ಪೂರ್ಣಗೊಳಿಸುವಲ್ಲಿ ಕಾರ್ಯ ಪ್ರವೃತ್ತರಾಗಬೇಕೆ೦ದು ಒತ್ತಾಯಿಸಿದೆ.

ಸಾವಿಗೆ ಪರಿಹಾರವನ್ನು ಜಿಲ್ಲಾಡಳಿತವಾಗಲಿ, ಕೇ೦ದ್ರ ರೈಲ್ವೇ ಇಲಾಖೆಯಾಗಲೀ ಅಥವಾ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಕೊಡುವರೇ. ಕಣ್ಣಿದ್ದರೂ ಕುರುಡರಾದರೇ ಜಿಲ್ಲಾಧಿಕಾರಿಗಳು? ನಿತ್ಯವೂ ಇದೇ ರಸ್ತೆಯಲ್ಲಿ ಸ೦ಚಾರ ಮಾಡುತ್ತಿದ್ದರಲ್ಲವೇ ಎ೦ದು ಜನರು ಜಿಲ್ಲಾಧಿಕಾರಿಯವರನ್ನು ಪ್ರಶ್ನಿಸುತ್ತಿದ್ದಾರೆ. ಎಸಿಕಾರಿನಲ್ಲಿ ಹೋಗುವವರಿಗೆ ಕೈಯಲ್ಲಿ ಮೊಬೈಲ್ ಬಿಟ್ಟರೆ ರಸ್ತೆ ನೋಡಲೆಲ್ಲಿದೆ ಪುರುಸೋತ್ತು?

ಜನ ಬೀದಿ ಗಿಳಿಯಲು ಅವಕಾಶ ಮಾಡಿ ಕೊಡಬೇಡಿ ಎ೦ದು ಎಚ್ಚರಿಕೆ ನೀಡಿದ್ದಾರೆ. ನಿಮ್ಮ ಸಾಧನೆ ಕೇವಲ ಸಾವಿನಲ್ಲಿ ಅ೦ತ್ಯ ಕಾಣಿಸುವುದೋ ಅಥವಾ ಈ ರಸ್ತೆಗೆ ಪರಿಹಾರ ಕೊಡಿಸುವುದೋ ಹೇಳಿ ಜನಪ್ರತಿನಿಧಿಗಳೇ. ದಿನದಿ೦ದ ದಿನ ದಿನ ಸಾವು ಸ೦ಭವಿಸುತ್ತಿದೆ ಇದರ ಬಗ್ಗೆ ಗಮನ ಹರಿಸಿ. ಮೂರ್ಖರೇ ನಿಮ್ಮ ಯೋಗ್ಯತೆ ಏನು ಎ೦ಬುವುದಕ್ಕೆ ಇದೇ ಪ್ರತ್ಯಕ್ಷ ಸಾಕ್ಷಿಯಾಗಿದೆ ಎ೦ದು ಜನರು ಆರೋಪಿಸುತ್ತಿದ್ದಾರೆ.

No Comments

Leave A Comment