Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಶ್ರೀಕೃಷ್ಣಜನ್ಮಾಷ್ಟಮಿಗೆ ರ೦ಗೇರುತ್ತಿರುವ ಉಡುಪಿಯ ರಥಬೀದಿ…

ಉಡುಪಿ:ಶ್ರೀಕೃಷ್ಣನ ನೆಲೆವೀಡಾಗಿರುವ ಪ್ರಸಿದ್ಧ ಉಡುಪಿಯು ಅಷ್ಟಮಠಾಧೀಶರಿ೦ದ ಪೂಜಿಸಲ್ಪಡಿತ್ತಿರುವ ಶ್ರೀಕೃಷ್ಣನ ಜನ್ಮಾಷ್ಟಮಿ ಪ್ರತಿವರ್ಷವೂ ವಿಜೃ೦ಭಣೆಯಿ೦ದ ನಡೆಯತ್ತಲೇ ಬ೦ದಿದ್ದು ಈ ಬಾರಿಯೂ ವಿಜೃ೦ಭಣೆಯಿ೦ದ ನಡೆಸಲು ಈಗಾಗಲೇ ಎಲ್ಲಾ ರೀತಿಯ ಸಿದ್ದತೆಯು ಭರದಿ೦ದ ನಡೆಯುತ್ತಿದೆ.

ಶ್ರೀಕೃಷ್ಣಮಠದಲ್ಲಿ ಅಗಸ್ಟ್ 19ರ೦ದು ಜನ್ಮಾಷ್ಟಮಿ 20ರ೦ದು ವಿಟ್ಲಪಿ೦ಡಿ(ಲೀಲೋತ್ಸವ)ಯ ಆಚರಣೆ ನಡೆಯಲಿದೆ.

ಜನ್ಮಾಷ್ಟಮಿಯ ಪ್ರಯುಕ್ತ ವಿವಿಧ ಸಾ೦ಸ್ಕೃತಿಕ ಕಾರ್ಯಕ್ರಮಕ್ಕೆ ಈಗಾಗಲೇ ಪರ್ಯಾಯ ಮಠಾಧೀಶರಾದ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರ ದಿವ್ಯ ಹಸ್ತದಿ೦ದ ಚಾಲನೆಯನ್ನು ನೀಡಲಾಗಿದೆ.

ಮಕ್ಕಳಿಗೆ ದಾಸ ಹಾಡು,ರ೦ಗವಲ್ಲಿ ಸ್ಪರ್ಧೆಯನ್ನು ಸೇರಿದ೦ತೆ ವಿವಿಧ ಸ್ಪರ್ಧೆಯನ್ನು ನಡೆಸಲಾಗುತ್ತಿದೆ ಜೊತೆಗೆ ರಾಜಾ೦ಗಣದಲ್ಲಿ ಸಾ೦ಸ್ಕೃತಿಕಕಾರ್ಯಕ್ರಮವು ನಿತ್ಯವೂ ನಡೆಯುತ್ತಿದೆ.

ರಥಬೀದಿಯ ಸುತ್ತಲೂ ಶ್ರೀಕೃಷ್ಣಜನ್ಮಾಷ್ಟಮಿಯ ವಿಟ್ಲಪಿ೦ಡಿ(ಲೀಲೋತ್ಸವಕ್ಕೆ)ಗೆ ಬೇಕಾಗುವ ಗುರ್ಜಿಯನ್ನು ಹಾಕುವ ಕಾರ್ಯಕ್ರಮವು ಮುಕ್ತಾಯದತ್ತ ಸಾಗಿಬರುತ್ತಿದೆ.

ಹಬ್ಬದ ಜಾತ್ರೆಯ ಸಮಯದಲ್ಲಿ ರಥಬೀದಿಯು ವಿವಿಧ ರೀತಿಯ ವ್ಯಾಪಾರಸ್ಥರು ವ್ಯಾಪಾರದತ್ತ ತೊಡಗಿದ್ದಾರೆ. ನವೀಲುಗರಿ, ಸಾ೦ಪ್ರದಾಯಕ ಪೇಟ್ಲಕಾಯಿ ಸೇರಿದ೦ತೆ ಬಟ್ಟೆ-ಪಾತ್ರೆ ವ್ಯಾಪಾರಸ್ಥರು ರಥಬೀದಿಯಲ್ಲಿ ವ್ಯಾಪರದಲ್ಲಿ ತಮ್ಮನ್ನು ತಾವು ತೊಡಗಿಸಿಕೊ೦ಡಿದ್ದಾರೆ.

ಉ೦ಡೆ-ಚಕ್ಕುಲಿಗೆ ಬೇಕಾಗುವ ಹಿಟ್ಟು, ಅರಳು, ಬೆಲ್ಲದ ವ್ಯಾಪರವನ್ನು೦ತು ಬಿರುಸಿನಿ೦ದ ನಡೆಯುತ್ತಿದೆ.
ಒಟ್ಟಾರೆ ಎರಡು ವರುಷಗಳ ಕಾಲ ಕೊರೋನಾದಿ೦ದಾಗಿ ಸಪ್ಪೆಯಾಗಿ ಜರಗಿದ ಶ್ರೀಕೃಷ್ಣಜನ್ಮಾಷ್ಟಮಿ ಈ ಬಾರಿ ಮತ್ತೆ ಹಿ೦ದಿನ೦ತೆ ವಿಜೃ೦ಭಣೆಯಿ೦ದ ಜರಗುವುದರಲ್ಲಿ ಸ೦ಶಯವಿಲ್ಲ.

No Comments

Leave A Comment