ದೇವ-ದೇಶ-ದೇಹ ಭಕ್ತಿ ಮೂಲಕ ಜೀವನ ಸಾರ್ಥಕಗೊಳಿಸಿ- ಪುತ್ತಿಗೆ ಶ್ರೀ
ಉಡುಪಿ: ಸ್ವಾತಂತ್ರ್ಯ ದಿನದಂದು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು ಬಾಲ್ಯದಲ್ಲಿ ಕಲಿತ ಹಾಗೂ ದತ್ತು ಕೊಂಡಿರುವ ಕೆಂಮುಂಡೇಲ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಲ್ಲಿನ ಎಲ್ಲಾ. 106 ವಿಧ್ಯಾರ್ಥಿಗಳಿಗೆ ಪುತ್ತಿಗೆ ವಿದ್ಯಾಪೀಠದ ಹಳೇ ವಿದ್ಯಾರ್ಥಿಯಾದ ಶ್ರೀ ಜ್ಞಾನ ಮೂರ್ತಿ ಯವರಿಂದ ಕೊಡಲ್ಪಟ್ಟ ಕೋಟಿ ಗೀತಾ ಲೇಖನದ ಪುಸ್ತಕಗಳನ್ನು ನೀಡಿ ಮಕ್ಕಳಿಗೆ ಗೀತಾ ಧೀಕ್ಷಯನ್ನು ನೀಡಲಾಯಿತು.
ಅಮೆರಿಕದ ಸ್ಯಾಂಜೋಯ್ನ ಪುತ್ತಿಗೆಮಠದಲ್ಲಿ ಚಾತುರ್ಮಾಸ್ಯ ದೀಕ್ಷೆಯಲ್ಲಿರುವ ಶ್ರೀಗಳವರು ವಿಡಿಯೋ ಮೂಲಕ ಸ್ವಾತಂತ್ರ್ಯ ಹಾಗೂ ತಮ್ಮ ಚತುರ್ಥ ಪರ್ಯಾಯ ಯೋಜನೆಯಾದ ಕೋಟಿ ಗೀತಾಲೇಖನ ಯಜ್ಞದ ಮಹತ್ವವನ್ನು ತಿಳಿಸಿ , ಉತ್ತಮ ಆರೋಗ್ಯಯುಕ್ತ ದೇಹವನ್ನು ರಕ್ಷಿಸಿಕೊಂಡು ರಾಷ್ಟ್ರವನ್ನು ಗೌರವಿಸಿ, ಅಲ್ಲದೇ ಭಗವಂತನನ್ನು ನಿತ್ಯ ಸ್ಮರಿಸಿಕೊಂಡು ನಿಮ್ಮ ಆತ್ಮೋದ್ಧಾರವನ್ನು ಮಾಡಿಕೊಳ್ಳಿ ಎಂದು ಶುಭ ಹಾರೈಸಿದರು.
ಸ್ವಾತಂತ್ರ್ಯ ಪರವಾಗಿ ರಾಷ್ಟ್ರ ಧ್ವಜಾರೋಹಣ ಮಾಡಿದ, ಪುತ್ತಿಗೆ ಶ್ರೀಗಳಿಂದ ನಿಯೋಜಿತ ಪ್ರದ್ಯುಮ್ನ ತಂಡದ ಗೀತಾ ಪ್ರಚಾರಕರಾದ ರಮೇಶ್ ಭಟ್ ಕೆ. ದೇಶಭಕ್ತಿ ಮತ್ತು ಗೀತೆಯಲ್ಲಿ ಭಗವಂತನ ದರ್ಶನ ಸಾಧ್ಯ . ಹಾಗೂ ಲೇಖನ ಕ್ರಮ ಇತ್ಯಾದಿಗಳನ್ನು ವಿವರಿಸಿದರು.
ಮಠದ ಮ್ಯಾನೇಜರ್ ವಿಷ್ಣುಮೂರ್ತಿ ಉಪಾಧ್ಯಾಯ. ಗೀತಾ ಪ್ರಚಾರಕರಾದ ಸುರೇಶ್ ಕಾರಂತ್. ಮುಖ್ಯೋಪಾಧ್ಯಯರಾದ ಜಗನ್ನಾಥ ಶೆಟ್ಟಿ. ಶಾಲಾ ಅಭಿವೃದ್ಧಿ ಮಂಡಳಿಯ ಶ್ರೀಮತಿ ಶಾಂತಿ ಎಸ್ ಹಾಗೂ ಹಳೆ ವಿದ್ಯಾರ್ಥಿ ಸಂಘದ ಕೃಷ್ಣಾನಂದ ಉಪಸ್ಥಿತರಿದ್ದರು.