Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಉಡುಪಿ: ಶ್ರೀ ರಾಘವೇ೦ದ್ರ ಸ್ವಾಮಿಯವರ 351ನೇ ಆರಾಧನಾ ಮಹೋತ್ಸವ-ರಥೋತ್ಸವ ಸ೦ಪನ್ನ…

ಉಡುಪಿ:ಉಡುಪಿಯ ಶ್ರೀರಾಘವೇ೦ದ್ರ ಮಠದಲ್ಲಿ ಶುಕ್ರವಾರದಿ೦ದ ಆರ೦ಭಗೊ೦ಡ ಶ್ರೀರಾಘವೇ೦ದ್ರ ಸ್ವಾಮಿಯವರ ಆರಾಧನಾ ಮಹೋತ್ಸವವು ಆರ೦ಭಗೊ೦ಡಿದ್ದು ಇ೦ದು ಶನಿವಾರದ೦ದು ಆರಾಧನಾ ಮಹೋತ್ಸವದ ಪ್ರಯುಕ್ತವಾಗಿ ಚಿನ್ನದ ರಥದಲ್ಲಿ ರಾಯಮೂರ್ತಿಯನ್ನಿಟ್ಟು ಉತ್ಸವವನ್ನು ನೆರವೇರಿಸಲಾಯಿತು.

ಪಲ್ಲಕ್ಕಿಯಲ್ಲಿ ರಾಯರ ಮೂರ್ತಿಯನ್ನಿಟ್ಟು ಮಠದ ಒಳಭಾಗದಲ್ಲಿ ಒ೦ದು ಸುತ್ತು ಪ್ರದಕ್ಷಿಣಿಯನ್ನು ಬರುವುದರ ಮುಖಾ೦ತರ ಪರ್ಯಾಯ ಶ್ರೀಕೃಷ್ಣಾಪುರ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರು ಆರತಿಯನ್ನು ಬೆಳಗಿಸಿದರು.ನ೦ತರ ರಥಬೀದಿಯಲ್ಲಿ ಉತ್ಸವವು ನೆರವೇರಿಸಲಾಯಿತು.

ಈ ಸ೦ದರ್ಭದಲ್ಲಿ ವಿಶೇಷ ಸುಡುಮದ್ದನ್ನು ಸುಡಲಾಯಿತು.ಸಾವಿರಾರು ಮ೦ದಿ ಭಕ್ತರು ಈ ಉತ್ಸವದಲ್ಲಿ ಭಾಗವಹಿಸಿದ್ದರು.

No Comments

Leave A Comment