
ಮ೦ಗಳೂರು:ಶ್ರೀ ಕ್ಷೇತ್ರಕದ್ರಿಯಲ್ಲಿ ಕಲ್ಕೂರ ಪ್ರತಿಷ್ಠಾನದಿಂದ ಅಗಸ್ಟ್ 18ರ೦ದು ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀಕೃಷ್ಣ ವೇಷ ಸ್ಪರ್ಧೆ
ಮಂಗಳೂರು: ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ಪ್ರಯತ್ನವಾಗಿ ಮತ್ತು ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಸದುದ್ದೇಶದಿಂದ ಕಳೆದ ನಾಲ್ಕು ದಶಕಗಳಿಂದ (40ವರ್ಷ) ಕಲ್ಕೂರ ಪ್ರತಿಷ್ಠಾನವು ನಡೆಸಿಕೊಂಡು ಬಂದಿರುವ ರಾಷ್ಟ್ರ ಮಟ್ಟದ ಮಕ್ಕಳ ಉತ್ಸವ-“ಶ್ರೀ ಕೃಷ್ಣ ವೇಷ ಸ್ಪರ್ಧೆ’’ಯನ್ನು ಕದ್ರಿ ಶ್ರೀ ಮಂಜುನಾಥದೇವಸ್ಥಾನದಲ್ಲಿ ಏರ್ಪಡಿಸಲಾಗಿದೆ. ಅಗಸ್ಟ್ 18, ಗುರುವಾರ ಕೃಷ್ಣಾಷ್ಟಮಿಯಂದು ಬೆಳಿಗ್ಗೆ 9.00ರಿಂದ ಶ್ರೀ ಕೃಷ್ಣ ವರ್ಣ ವೈಭವ , ಶ್ರೀ ಕೃಷ್ಣ ಗಾನ ವೈಭವ, ಶ್ರೀ ಕೃಷ್ಣ ರಂಗೋಲಿ ನಡೆಯಲಿರುವುದು ಮಧ್ಯಾಹ್ನ 12 ರಿಂದ ಸಾಂಸ್ಕೃತಿಕ ಕಾರ್ಯಕ್ರಮ, 1 ಗಂಟೆಗೆ ಸರಿಯಾಗಿ ಶ್ರೀ ಕೃಷ್ಣ ಜನ್ಮ ಮಹೋತ್ಸವನಂದ ಗೋಕುಲ ವೇದಿಕೆಯಲ್ಲಿ ಗಣ್ಯಾತಿಗಣ್ಯರು ಮತ್ತು ಪುಟಾಣಿಕೃಷ್ಣರು ಮತ್ತು ಮಾತೆಯರ ಸಂಮುಖದಲ್ಲಿ ದೀಪ ಪ್ರಜ್ವಲನದೊಂದಿಗೆ ಶ್ರೀ ಕೃಷ್ಣ ವೇಷ ಸ್ಪರ್ಧೆ ಉದ್ಘಾಟನೆಗೊಳ್ಳಲಿದೆ. ರಾತ್ರಿ 12.00ರ ತನಕ ವಿವಿಧ ಸ್ಪರ್ಧೆಗಳನ್ನು ಒಟ್ಟು 33 ವಿಭಾಗಗಳಲ್ಲಿ, 9 ವೇದಿಕೆಗಳಲ್ಲಿ ಏಕ ಕಾಲದಲ್ಲಿ ಆಯೋಜಿಸಲಾಗಿದೆ ಮತ್ತು ಮಧ್ಯಾಹ್ನ 12 ರಿಂದರಾತ್ರಿ 12ರವರೆಗೆ ವಿವಿಧ ಸಾಹಿತ್ಯಿಕ-ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಈ ರಾಷ್ಟ್ರೀಯ ಮಕ್ಕಳ ಉತ್ಸವದಲ್ಲಿಜೋಡಿಸಲಾಗಿದೆ.
ರಾತ್ರಿ 12 ಗಂಟೆಗೆಅಘ್ರ್ಯ ಪ್ರದಾನ – ಪ್ರಸಾದ ವಿತರಣೆಯೊಂದಿಗೆ ಸಂಪನ್ನ.
ರಾಷ್ಟ್ರವ್ಯಾಪಿ ಮಾನ್ಯತೆಗೊಂಡ ಶ್ರೀ ಕೃಷ್ಣವೇಷ ಸ್ಪರ್ಧೆಗಳಲ್ಲಿ ಈ ಬಾರಿ ವಿಶೇಷವಾಗಿ ಪಂಡರಾಪುರ ವಿಠಲ” ಎಂಬ ಹೊಸ ವಿಭಾಗವನ್ನೂ ಒಳಗೊಂಡಂತೆ ಒಟ್ಟು 33 ವಿಭಾಗಗಳಲ್ಲಿ ಕದ್ರಿ ದೇವಳದ ಒಟ್ಟು ಆವರಣದಲ್ಲಿ, * ಶ್ರೀ ಮಹಾಗಣಪತಿ ದೇವಸ್ಥಾನ * ಅಭಿಷೇಕ ಮಂದಿರ * ಕದ್ರಿಕೆರೆಅಶ್ವತಕಟ್ಟೆ ಬಳಿ * ಶ್ರೀ ಕೃಷ್ಣ ಜನ್ಮ ಮಹೋತ್ಸವ ಸಮಿತಿ ವೇದಿಕೆ * ಅಭಿಷೇಕ ಮಂದಿರ 1ನೇ ಮಹಡಿ * ಕಲ್ಯಾಣ ಮಂಟಪ * ಮಂಜುಶ್ರೀ * ಅಭಿಷೇಕ ಮಂದಿರ * ಪ್ರಧಾನ ವೇದಿಕೆ ಸಹಿತ ಏಕಕಾಲದಲ್ಲಿ ನಡೆಯಲಿದೆ.
ಕಂದ ಕೃಷ್ಣ
: ವಿಭಾಗದಲ್ಲಿ 1 ವರ್ಷದ ಕೆಳಗಿನ ಪುಟಾಣಿ ಕಂದಮ್ಮಗಳು ಭಾಗವಹಿಸಬಹುದಾಗಿದ್ದು ಮುದ್ದು
ಕಂದಮ್ಮಗಳ ಜೊತೆ ತಾಯಂದಿರು ಕೂಡಾ ವೇದಿಕೆಗೆ ಬರಬಹುದು.
ಸ್ಥಳ : ಶ್ರೀ ಕ್ಷೇತ್ರಕದ್ರಿ ದೇವಳದ ಶ್ರೀ ಮಂಜುಶ್ರೀ ಸಭಾಂಗಣದ ಬಳಿ (ಎಲ್ಲೂರು ಮನೆ) ಸಮಯ: 2 ರಿಂದ
ಮುದ್ದು ಕೃಷ್ಣ : ವಿಭಾಗದಲ್ಲಿ 1 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 2 ವರ್ಷಕ್ಕಿಂತ ಕೆಳಗಿನ ಕಂದಮ್ಮಗಳು
ಪಾಲ್ಗೊಳ್ಳಬಹುದಾಗಿದ್ದು, ಮುದ್ದು ಕಂದಮ್ಮಗಳ ಜೊತೆ ತಾಯಂದಿರು ಕೂಡಾ ವೇದಿಕೆಗೆ
ಬರಬಹುದು. ಸ್ಥಳ: ಅಭಿಷೇಕ ಮಂದಿರದ ನೆಲ ಅಂತಸ್ತು. ಸಮಯ: 2 ರಿಂದ
ತುಂಟ ಕೃಷ್ಣ : ವಿಭಾಗದಲ್ಲಿ 2 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 3 ವರ್ಷಕ್ಕಿಂತ ಕೆಳಗಿನ ಪುಟಾಣಿಗಳು
ಭಾಗವಹಿಸಬಹುದು. ಸ್ಥಳ: ಶ್ರೀ ಮಂಜುಶ್ರೀ ಸಭಾಂಗಣದ ಪಡುವೇದಿಕೆ. ಸಮಯ: 2 ರಿಂದ
ಬಾಲಕೃಷ್ಣ : ವಿಭಾಗದಲ್ಲಿ ಬಾಲವಾಡಿ, ಅಂಗನವಾಡಿ, ಎಲ್.ಕೆ.ಜಿ. ಪುಟಾಣಿಗಳು ಭಾಗವಹಿಸಬಹುದಾಗಿದೆ.
ಸ್ಥಳ:ಅಭಿಷೇಕ ಮಂದಿರದ ಪ್ರಥಮ ಅಂತಸ್ತು ಸಮಯ: 2 ರಿಂದ
ಕಿಶೋರ ಕೃಷ್ಣ : ವಿಭಾಗದಲ್ಲ್ಲಿ ಯು.ಕೆ.ಜಿ. ಮತ್ತು 1ನೇ ತರಗತಿ ಪುಟಾಣಿಗಳು ಪಾಲ್ಗೊಳ್ಳಬಹುದು .
ಸ್ಥಳ : ಗೋಮುಖ ವೇದಿಕೆ (ಕದ್ರಿ ದೇವಳದ ಉತ್ತರ ಭಾಗ) ಸಮಯ: 2 ರಿಂದ
ಶ್ರೀ ಕೃಷ್ಣ : ವಿಭಾಗದಲ್ಲಿ2, 3, 4ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ.
ಸ್ಥಳ:“ಮಂಜಶ್ರೀ” (ಮೂಡು ವೇದಿಕೆ), ಸಮಯ: 2 ರಿಂದ
ಗೀತಾ ಕೃಷ್ಣ : ವಿಭಾಗದಲ್ಲಿ (ವೇಷಭೂಷಣದೊಂದಿಗೆ ಗೀತೋಪದೇಶದ ಚಿತ್ರಣಗೀತೆಯ ಯಾವುದಾದರೂ ಶ್ಲೋಕದ ಪಠನದೊಂದಿಗೆ) 7ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. (3+2 ನಿಮಿಷ).
ಸ್ಥಳ:ಶ್ರೀ ಕ್ಷೇತ್ರಕದ್ರಿದೇವಿ ದೇವಸ್ಥಾನದ ಬಳಿಯ ಸಂಭಾಗಣ ಸಮಯ: 2 ರಿಂದ
ಯಕ್ಷ ಕೃಷ್ಣ
:
ವಿಭಾಗದಲ್ಲಿ ಜಿಲ್ಲೆಯ ವಿಶೇಷ ಸಾಂಪ್ರದಾಯಿಕ ಶೈಲಿಯಾದ ಯಕ್ಷಗಾನದ ಬಗ್ಗೆ ಮಕ್ಕಳಲ್ಲಿ ಆಸಕ್ತಿಯನ್ನು ಮೂಡಿಸುವ ದೃಷ್ಟಿಯಿಂದ “ಯಕ್ಷ ಕೃಷ್ಣ” (ತೆಂಕು ಯಾ ಬಡಗು) 10ನೇ ತರಗತಿವರೆಗಿನ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಭಾಗವಹಿಸಬಹುದಾಗಿದೆ. ಈ ವಿಭಾಗದಲ್ಲಿ ಭಾಗವಹಿಸುವ ಮಕ್ಕಳು ಸಾಂಪ್ರದಾಯಿಕ ಯಕ್ಷಗಾನ ವೇಷಭೂಷಣ ಧರಿಸಬೇಕಾಗುವುದು (ಗರಿಷ್ಠ 5 ನಿ.)
ಸ್ಥಳ: ಗೋಮುಖ ವೇದಿಕೆ (ಕದ್ರಿ ದೇವಳದ ಉತ್ತರ ಭಾಗ)ಸಮಯ: 2 ರಿಂದ
ರಾಧಾಕೃಷ್ಣ : ವಿಭಾಗದಲ್ಲಿ 7ನೇ ತರಗತಿಯ ವರೆಗಿನ ಮಕ್ಕಳು ಭಾಗವಹಿಸಬಹುದಾಗಿದೆ.(ಜೋಡಿ)
ಸ್ಥಳ :ಶ್ರೀ ಕೃಷ್ಣ ಜನ್ಮ ಮಹೋತ್ಸವ ನಂದಗೋಕುಲ ವೇದಿಕೆ. ಸಮಯ: 2 ರಿಂದ
ಯಶೋದ ಕೃಷ್ಣ : ವಿಭಾಗದಲ್ಲಿ ಯಾವುದೇ ವಯೋಮಾನದ ನಿರ್ಬಂಧವಿಲ್ಲದೆ ಮಹಿಳೆ ಯಶೋದೆಯಾಗಿ
ಯಾವುದೇ ಮಗುಕೃಷ್ಣನಾಗಿ ಅಭಿನಯಪೂರ್ವಕವಾಗಿ ಭಾಗವಹಿಸಬಹುದು. ಮಹಿಳೆಗೆ ವಯೋಮಿತಿ ನಿರ್ಬಂಧವಿಲ್ಲ. ಮಗು (ಕೃಷ್ಣ) 12 ವರ್ಷದೊಳಗಿನವರಾಗಿರಬೇಕು.
ಸ್ಥಳ : ಶ್ರೀ ಕೃಷ್ಣ ಜನ್ಮ ಮಹೋತ್ಸವ ನಂದಗೋಕುಲ ವೇದಿಕೆ. ಸಮಯ: 3.00ರಿಂದ
ಶಂಖನಾದ : (ಸಾಂಪ್ರದಾಯಿಕ ಉಡುಗೆಯೊಂದಿಗೆ) :- 7ನೇ ತರಗತಿವರೆಗಿನ ಮಕ್ಕಳಿಗಾಗಿ (ಕೃಷ್ಣವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು ಭಾಗವಹಿಸಬಹುದು)
ಸ್ಥಳ : ಕದ್ರಿಕೆರೆ ಅಶ್ವಥಕಟ್ಟೆ ಬಳಿ. ಸಮಯ: 2 ರಿಂದ
ಶಂಖಉದ್ಘೋಷ
ಶಂಖನಿನಾದ : (ಸಾಂಪ್ರದಾಯಿಕ ಉಡುಗೆಯೊಂದಿಗೆ) :-7ನೇ ತರಗತಿ ಮೇಲ್ಪಟ್ಟು ಪಿ.ಯು.ಸಿ ವರೆಗೆ (ಕೃಷ್ಣವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು ಭಾಗವಹಿಸಬಹುದು.)
ಸ್ಥಳ :ಕದ್ರಿಕೆರೆ ಅಶ್ವಥಕಟ್ಟೆ ಬಳಿ. ಸಮಯ: 2 ರಿಂದ
(ಸಾಂಪ್ರದಾಯಿಕ ಉಡುಗೆಯೊಂದಿಗೆ) :-ಪಿ.ಯು.ಸಿ ಮೇಲ್ಪಟ್ಟು ಮುಕ್ತ ವಿಭಾಗ(ಕೃಷ್ಣವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು ಭಾಗವಹಿಸಬಹುದು.)
ಸ್ಥಳ :ಕದ್ರಿಕೆರೆ ಅಶ್ವಥಕಟ್ಟೆ ಬಳಿ. ಸಮಯ: 2 ರಿಂದ
ದೇವಕಿ ಕೃಷ್ಣ : ಈ ಹಿಂದೆ ಕದ್ರಿ ಶ್ರೀ ಕ್ಷೇತ್ರದಲ್ಲಿ ಶ್ರೀ ಕೃಷ್ಣ ವೇಷ ಸ್ಪರ್ಧೆಯಲ್ಲಿ ಕೃಷ್ಣ ವೇಷ ಧರಿಸಿ ಸ್ಪರ್ಧಾಳುಗಳಾಗಿ
ಭಾಗವಹಿಸಿದ ತಾಯಂದಿರು ದೇವಕಿಯಾಗಿ ಅಥವಾ ಯಶೋಧೆಯಾಗಿ ಭಾಗವಹಿಸಬಹುದಾಗಿದೆ. ಈಸ್ಪರ್ಧಾಳು ತಮ್ಮ ಮಗು ಅಥವಾ ಯಾವುದೇ ಕೃಷ್ಣವೇಷಧಾರಿ ಮಗುವಿನೊಂದಿಗೆ ಬರಬಹುದು.
ಸ್ಥಳ : ಶ್ರೀ ಕೃಷ್ಣ ಜನ್ಮ ಮಹೋತ್ಸವ ನಂದಗೋಕುಲ ವೇದಿಕೆ. ಸಮಯ: 2.30ರಿಂದ
ವಸುದೇವಕೃಷ್ಣ (ಮುಕ್ತ ವಿಭಾಗ) : ಪುರುಷ ವಸುದೇವನಾಗಿ ಮಗುವನ್ನು ಫ್ಲಾಸ್ಟಿಕ್ರಹಿತವಾದ ಯಾವುದೇ ಬೆತ್ತ ಅಥವಾ ಬೀಳು ಇನ್ನಿತರ ಬುಟ್ಟಿಗಳಲ್ಲಿ ತಲೆಯ ಮೇಲೆ ಹೊತ್ತು ಸಾಂಪ್ರಾದಾಯಿಕ ಉಡುಗೆಯೊಂದಿಗೆ ಭಾಗವಹಿಸಬಹುದು. ವಯೋಮಿತಿ ನಿರ್ಬಂಧವಿಲ್ಲ. (ಮಹಿಳೆಯರೂ ಪುರುಷವೇಷದೊಂದಿಗೆ ವಸುದೇವನಾಗಿ ಭಾಗವಹಿಸಬಹುದು.)
ಸ್ಥಳ: ಶ್ರೀ ಕೃಷ್ಣ ಜನ್ಮ ಮಹೋತ್ಸವ ನಂದಗೋಕುಲ ವೇದಿಕೆ. ಸಮಯ : 4ರಿಂದ
ನಂದಗೋಕುಲ
(ಸಮೂಹ ವಿಭಾಗ) : ಸಾಮೂಹಿಕವಾಗಿ ಶ್ರೀ ಕೃಷ್ಣನ ಕಥಾನಕದ ಯಾವುದೇ ಸನ್ನಿವೇಶದ ಪ್ರದರ್ಶನವನ್ನು (ಕನಿಷ್ಠ 5 ಜನ) ಗುಂಪಿನಲ್ಲಿ ಸ್ತಬ್ಧ ಚಿತ್ರದೃಶ್ಯ ಸ್ವರೂಪದೊಂದಿಗೆ ಪ್ರದರ್ಶಿಸಲು ಅವಕಾಶ ವಯೋಮಿತಿ ನಿರ್ಬಂಧವಿಲ್ಲ.
ಸ್ಥಳ :ಶ್ರೀ ಕೃಷ್ಣ ಜನ್ಮ ಮಹೋತ್ಸವ ನಂದಗೋಕುಲ ವೇದಿಕೆ. ಸಮಯ: 5.00ರಿಂದ
ಬಾಲಕೃಷ್ಣ ರಸಪ್ರಶ್ನೆ : 7ನೇ ತರಗತಿವರೆಗಿನ (ಕೃಷ್ಣವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು ಭಾಗವಹಿಸಬಹುದು.)
ಸ್ಥಳ : ಶ್ರೀ ಕೃಷ್ಣ ಜನ್ಮ ಮಹೋತ್ಸವ ನಂದಗೋಕುಲ ಸಮಯ: 6.30ರಿಂದ
ಶ್ರೀಕೃಷ್ಣ ರಸ
ಪ್ರಶ್ನೆ ಸ್ಪರ್ಧೆ : 7ನೇ ತರಗತಿ ಮೇಲ್ಪಟ್ಟ (ಕೃಷ್ಣವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು ಭಾಗವಹಿಸಬಹುದು.)
ಸ್ಥಳ : ಶ್ರೀ ಕೃಷ್ಣ ಜನ್ಮ ಮಹೋತ್ಸವ ನಂದಗೋಕುಲ ಸಮಯ: 6.30ರಿಂದ
ಛಾಯಾಕೃಷ್ಣ : ದೇವಳದ ಪ್ರಾಂಗಣದ ನಿಗದಿತ ವೇದಿಕೆಯಲ್ಲಿ ಶ್ರೀ ಕೃಷ್ಣ ವೇಷಧಾರಿಯಾಗಿ ಛಾಯಾಚಿತ್ರಕ್ಕೆ ಅನುಕೂಲಕರವಾಗಿ ಆಕರ್ಷಕ ಭಂಗಿಯಲ್ಲಿಎಲ್ಲಾ ಸ್ಪರ್ಧಾಳುಗಳು ಪಾಲ್ಗೊಳ್ಳಬಹುದು. (ವಯೋಮಿತಿ ನಿರ್ಬಂಧವಿಲ್ಲ.)
ಶ್ರೀಕೃಷ್ಣ ವರ್ಣ ವೈಭವ
ಚಿತ್ರಕಲಾ ಸ್ಪರ್ಧೆ : ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ, 5 ವಿಭಾಗಗಳಲ್ಲಿ ನಡೆಯುವುದು. (ಶಿಶು, ಬಾಲ, ಕಿಶೋರ, ತರುಣ, ಮುಕ್ತವಿಭಾಗ) ಪರಿಕರಗಳೊಂದಿಗೆ ಹಾಜರಿರಬೇಕು.
ಸ್ಥಳ ಶ್ರೀ ಮಂಜುಶ್ರೀ ಸಭಾಂಗಣ .ಸಮಯ : ಬೆಳಿಗ್ಗೆ 9.00 ರಿಂದ
ಶ್ರೀಕೃಷ್ಣ ಗಾನ ವೈಭವ : ಮಕ್ಕಳಿಗಾಗಿ ಶ್ರೀಕೃಷ್ಣನಿಗೆ ಸಂಬಂಧಪಟ್ಟಜಾನಪದ, ಭಕ್ತಿಗೀತೆ, ಭಾವಗೀತೆಗಳ ಸಂಗೀತ ಸ್ಪರ್ಧೆ4 ವಿಭಾಗಗಳಲ್ಲಿ ನಡೆಯುವುದು(ಶಿಶು, ಬಾಲ, ಕಿಶೋರ, ಮುಕ್ತ ವಿಭಾಗ-(ಪದವಿ ಪೂರ್ವಕಾಲೇಜು ಮೇಲ್ಪಟ್ಟು))
ಸ್ಥಳ : ಶ್ರೀ ಕೃಷ್ಣ ಜನ್ಮ ಮಹೋತ್ಸವ ನಂದಗೋಕುಲ ಸ್ಥಳ : ಬೆಳಿಗ್ಗೆ ಗಂಟೆ 9.30ರಿಂದ