Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ಉಡುಪಿ:ಶ್ರೀಕೃಷ್ಣ ಮಠದಲ್ಲಿ ಶ್ರೀ ಕೃಷ್ಣಾಷ್ಟಮಿ ಆಚರಣೆ ಭರದಸಿದ್ದತೆ -ವಿವಿಧ ಸ್ಪರ್ಧೆಗಳು,ನಿಯಮ

ಉಡುಪಿ:ಉಡುಪಿಯ ಶ್ರೀಕೃಷ್ಣಮಠದಲ್ಲಿ ವರ್ಷ೦ಪ್ರತಿಯ ವಾಡಿಕೆಯ೦ತೆ ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿಯು ಈ ಬಾರಿ ಅಗಸ್ಟ್ 19ಮತ್ತು 20ರ೦ದು ಜರಗಲಿದ್ದು ಈ ಪ್ರಯುಕ್ತ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು ಇದರ ನಿಯಮಗಳು ಈ ರೀತಿಯಾಗಿರುತ್ತದೆ ಎ೦ದು ಪರ್ಯಾಯ ಶ್ರೀಕೃಷ್ಣಮಠದ ಪ್ರಕಟಣೆ ತಿಳಿಸಿದೆ.

ಆಷ್ಟಮಿಯ ಪ್ರಯುಕ್ತವಾಗಿ ರಥಬೀದಿಯ ಕನಕಗೋಪುರ, ಹಾಗೂ ಸುತ್ತಲೂ ಗುರ್ಜಿಯನ್ನು ಉರುವ ಕೆಲಸವು ಭರದಿ೦ದ ಸಾಗುತ್ತಿದೆ.

1. ಸ್ಪರ್ಧಾಳುಗಳು ಆಯಾ ವಿಭಾಗಕ್ಕೆ ತಮ್ಮ ಹೆಸರನ್ನು ಬಡಗುಮಾಳಿಗೆ ಕಛೇರಿಯಲ್ಲಿ ಅಥವಾ ಸೂಚಿತ ಮೊಬೈಲ್ ನಂಬರ್ ಗೆ ಸ್ಪರ್ಧಾ ದಿನದ ಹಿಂದಿನ ದಿನ ಸಂಜೆ 06 ರೊಳಗೆ ನೊಂದಾಯಿಸಬೇಕು.
2. ತಮ್ಮ ವಯಸ್ಸಿನ ದೃಡೀಕರಣ ಪತ್ರವನ್ನು ಸಂಬಂದಿತರು ಕೇಳಿದಾಗ ನೀಡಬೇಕು.
3. ಪ್ರತಿಯೊಂದು ವಿಭಾಗದಲ್ಲೂ ಮೂರು ಬಹುಮಾನಗಳಿವೆ.
4. ಯಾವುದೇ ವಿಭಾಗದಲ್ಲಿ ನಿಗತಿತ ಸ್ಪರ್ಧಾಳುಗಳು ಇಲ್ಲದಿದ್ದರೆ ಸ್ಪರ್ಧೆಯನ್ನು ರದ್ದುಪಡಿಸುವ ಅದಿಕಾರ ಸಂಘಟಕರಿಗಿದೆ.
5. ತೀರ್ಪುಗಾರರ ನಿರ್ಣಯ ಅಂತಿಮ.
6. ನಿಗತಿತ ಸಮಯದಲ್ಲಿ ಸ್ಪರ್ಧಾಳುಗಳು ಸ್ಪರ್ಧೆ ನಡೆಯುವ ಇರಬೇಕು.
7. ಸ್ಪರ್ಧಾ ಫಲಿತಾಂಶವನ್ನು ಮಠದ ಸೂಚನಾ ಫಲಕ ಹಾಗೂ ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು.
8. ಗುಂಪು ಸ್ಪರ್ಧೆಯಲ್ಲಿ ಭಾಗವಹಿಸುವವರು ಅದೇ ಸ್ಪರ್ಧೆಯಲ್ಲಿ ಇನ್ನೊಂದು ತಂಡದೊಡನೆ ಸೇರಬಾರದು.

ತಾರೀಕು 19.08.2022 ಶುಕ್ರವಾರ ಕೃಷ್ಣವೇಷ ಸ್ಪರ್ಧೆ ಬೆಳಿಗ್ಗೆ 09.30 ರಿಂದ 01 ರಿಂದ 03ವರ್ಷ : ಮುದ್ದುಕೃಷ್ಣ ವಿಭಾಗ : ಸ್ಥಳ : ರಾಜಾಂಗಣ. ಅವಧಿ 02ನಿಮಿಷ

04 ರಿಂದ 06ವರ್ಷ : ಬಾಲಕೃಷ್ಣ ವಿಭಾಗ : ಸ್ಥಳ : ಮಧ್ವಾಂಗಣ. ಅವಧಿ 02ನಿಮಿಷ
07 ರಿಂದ 10ವರ್ಷ : ಕಿಶೋರಕೃಷ್ಣ : ಸ್ಥಳ : ಅನ್ನಬ್ರಹ್ಮ
ತಾರೀಕು 20.08.2022 ಶನಿವಾರ. ಸ್ಥಳ : ರಾಜಾಂಗಣ ಸಂಜೆ 05 ರಿಂದ 07.30
ಹುಲಿವೇಷ / ಜಾನಪದ ಕುಣಿತ ಸ್ಪರ್ಧೆ ( ಅವಧಿ 08 + 02 ನಿಮಿಷ)
ಪ್ರದರ್ಶನದ ಬಳಿಕ ಪ್ರತಿ ತಂಡಕ್ಕೂ ಪುರಸ್ಕಾರ ನೀಡಲಾಗುವುದು.

ಜಾನಪದ ವೇಷದಲ್ಲಿ ಕನಿಷ್ಠ 06 ಜನ ಇರಬೇಕು. ಒಂದು ತಂಡದಲ್ಲಿ ಭಾಗವಹಿಸಿದವರು ಇನ್ನೊಂದು ತಂಡದಲ್ಲಿ ಭಾಗವಹಿಸುವ ಹಾಗಿಲ್ಲ.

9. ಸಂಪರ್ಕ ಸಂಖ್ಯೆ : ಶ್ರೀಕೃಷ್ಣ ಮಠ ಕಾರ್ಯಾಲಯ – 0820 -2520598, ವಿಷ್ಣುಪ್ರಸಾದ್ ಪಾಡಿಗಾರ್ – 9880645342
ತಾರೀಕು 14.08.2022 ರವಿವಾರ ಚಿತ್ರಕಲಾ ಸ್ಪರ್ಧೆ
3 ರಿಂದ 05 ತರಗತಿ ಸ್ಥಳ : ರಾಜಾಂಗಣ ಸಮಯ ಬೆಳಿಗ್ಗೆ 09.30ರಿಂದ ಅವಧಿ 02ಘಂಟೆ
06 ರಿಂದ 08 ತರಗತಿ ಸ್ಥಳ : ರಾಜಾಂಗಣ ಸಮಯ ಬೆಳಿಗ್ಗೆ 09.30ರಿಂದ ಅವಧಿ 02ಘಂಟೆ
09 ರಿಂದ 12 ತರಗತಿ ಸ್ಥಳ : ಮಧ್ವಾಂಗಣ ಸಮಯ ಬೆಳಿಗ್ಗೆ 09.30ರಿಂದ ಅವಧಿ 02ಘಂಟೆ
ಡ್ರಾಯಿಂಗ್ ಪೇಪರ್ ನೀಡಲಾಗುವುದು. ಬಣ್ಣ ಪರಿಕರಗಳನ್ನು ತರಬೇಕು. ವಿಷಯ : ಶ್ರೀಕೃಷ್ಣನಿಗೆ ಸಂಬಂಧಿಸಿದ ಕಥಾ ಸನ್ನಿವೇಷ.
ತಾರೀಕು 14.08.2022 ರವಿವಾರ ರಸಪ್ರಶ್ನೆಗಳು
ಸಾರ್ವಜನಿಕ ವಿಭಾಗ ಸ್ಥಳ : ಕನಕ ಮಂಟಪ ಸಮಯ ಬೆಳಿಗ್ಗೆ 10.30ಕ್ಕೆ ವಿಷಯ : ಕೃಷ್ಣಾವತಾರದ ಬಗ್ಗೆ 50 ಪ್ರಶ್ನೆಗಳು. ಅವಧಿ 1ಗಂಟೆ
ತಾರೀಕು 14.08.2022 ರವಿವಾರ ಆಶುಭಾಷಣ ಸ್ಪರ್ಧೆ
08 ತರಗತಿಯಿಂದ 12 ತರಗತಿ : ಸ್ಥಳ ಮಧ್ವಮಂಟಪ ಸಮಯ ಬೆಳಿಗ್ಗೆ 11 ಘಂಟೆ

ತಾರೀಕು 14.08.2022 ರವಿವಾರ ಸಾಂಪ್ರದಾಯಿಕ ಚುಕ್ಕಿ ರಂಗವಲ್ಲಿ ಸ್ಪರ್ಧೆ, ಸ್ಥಳ : ಅನ್ನಧರ್ಮ, ಸಮಯ ಬೆಳಿಗ್ಗೆ 09.30ಕ್ಕೆ
08 ತರಗತಿಯಿಂದ 12 ತರಗತಿ
ಸಾರ್ವಜನಿಕ ವಿಭಾಗ
(ಪರಿಕರಗಳನ್ನು ಸ್ಪರ್ಧಾಳುಗಳು ತರತಕ್ಕದ್ದು)
ತಾರೀಕು 15.08.2022 ಸೋಮವಾರ ಸಂಗೀತ ಸ್ಪರ್ಧೆ (ಅಪರೋಕ್ಷಜ್ಞಾನೀಕೃತ ದಾಸರಪದಗಳು)
01 ರಿಂದ 04ನೇ ತರಗತಿ ಸ್ಥಳ : ಅನ್ನಬ್ರಹ್ಮ ಸಮಯ 02.30
05 ರಿಂದ 07ನೇ ತರಗತಿ ಸ್ಥಳ : ಮಧ್ವಮಂಟಪ ಸಮಯ 02.30
08 ರಿಂದ 12ನೇ ತರಗತಿ ಸ್ಥಳ : ರಾಜಾಂಗಣ ಸಮಯ 02.30
(ಅವಧಿ 03ನಿ. ರಾಗ,ತಾಳ,ಲಯದೊಂದಿಗೆ ಹಾಡಬಹುದು, ಶೃತಿ ಪೆಟ್ಟಿಗೆ ಬಳಸಬಹುದು.
ತಾರೀಕು 18.08.2022 ಗುರುವಾರ ಶಂಖ ಊದುವ ಸ್ಪರ್ಧೆ
ಸಾರ್ವಜನಿಕರಿಗೆ ಸ್ಥಳ : ಮಧ್ವಮಂಟಪ ಸಮಯ : ಮಧ್ಯಾಹ್ನ 02.30
ನಾವು ಒದಗಿಸಿದ ಶಂಖವನ್ನೇ ಊದಬೇಕು.

No Comments

Leave A Comment