ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ ಅದ್ದೂರಿಯಿ೦ದ ಆರ೦ಭಗೊ೦ಡ 122ನೇ ಭಜನಾ ಸಪ್ತಾಹವು ಅದ್ದೂರಿಯಿ೦ದಲೇ ಸ೦ಪನ್ನ…(ಚಿತ್ರ-ವರದಿ) ಉಡುಪಿ:ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಅ.2ರಿ೦ದ ಆರ೦ಭಗೊ೦ಡ 122ನೇ ಭಜನಾ ಸಪ್ತಾಹ ಮಹೋತ್ಸವವು ಮ೦ಗಳವಾರ(ಇ೦ದು)ಸ೦ಪನ್ನದತ್ತಸಾಗಿದ್ದು ಬೆಳಿಗ್ಗೆ ನೂರಾರು ಮ೦ದಿ ಭಜಕರು ಶ್ರೀವಿಠೋಬರಖುಮಾಯಿ ದೇವರ ಮು೦ಭಾಗದಲ್ಲಿರುವ ದೀಪದ ಸುತ್ತಲೂ ಆರ೦ಭದ ಹರಕೆಯ ಉರುಳು ಸೇವೆಯನ್ನು ನಡೆಸುವುದರೊ೦ದಿಗೆ ಭಜನಾ ಸಪ್ತಾಹ ಮಹೋತ್ಸವ ಸ೦ಪನ್ನ ಗೊ೦ಡಿತು. ಬೆಳ್ಳಿಗಿನ ಗೌಳಿಣ್ಯಾ ಹಾಡನ್ನು ಹಾಡುವುದರೊ೦ದಿಗೆ ಶ್ರೀದೇವರಿಗೆ ಬೆಳ್ಳಿಗಿನ ಸುಪ್ರಭಾತದೊ೦ದಿಗೆ ಈ ಸಪ್ತಾಹ ಮಹೋತ್ಸವ ಕೊನೆಯ ಕಾಕಡಾರತಿಯನ್ನು ನಡೆಸಲಾಯಿತು. ಸಾಯ೦ಕಾಲ ಮಹಾಪೂಜೆ ಹಾಗೂ ಮಹಾಸಮಾರಾಧನೆಯು ನಡೆಯಿತು. Share this:TweetWhatsAppEmailPrintTelegram