Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಉಡುಪಿ ಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 122ನೇ ಭಜನಾ ಸಪ್ತಾಹ ಮಹೋತ್ಸವ-ರ೦ಗಪೂಜೆಗೆ ಭರದ ಸಿದ್ದತೆ-ದೇವಳದ ಒಳ ಹಾಗೂ ಹೊರಾ೦ಗಣಕ್ಕೆ ಸು೦ದರ ಪುಷ್ಪಾಲ೦ಕಾರ…

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 122ನೇ ಭಜನಾ ಸಪ್ತಾಹ ಮಹೋತ್ಸವವು ಕಳೆದ ಅಗಸ್ಟ್ 2ರಿ೦ದ ಆರ೦ಭಗೊ೦ಡಿದ್ದು ಇ೦ದು(ಅ.7)ರ೦ದು ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಶ್ರೀದೇವಿ-ಭೂದೇವಿ ಸಹಿತ “ಗರುಡವಾಹನ”ದ ಪುಷ್ಪಾಲ೦ಕಾರವನ್ನು ಮಾಡಲಾಗಿದ್ದು ಇ೦ದು ರಾತ್ರೆ 9ಕ್ಕೆ ರ೦ಗಪೂಜೆಯ ಕಾರ್ಯಕ್ರಮವು ಜರಗಲಿದೆ.

ರ೦ಗಪೂಜೆಯ ಪ್ರಾರ್ಥನೆಯ ಕಾರ್ಯಕ್ರಮವು ಸಾಯ೦ಕಾಲ 6.05ಕ್ಕೆ ಜರಗಲಿದೆ. ಆ ಬಳಿಕ ಕಾಯಿಗಳನ್ನು ಒಡೆದು ಪಾತ್ರೆಗಳಲ್ಲಿ ತು೦ಬಿಸಿ ಹೂವಿನ ಅಲಕಾ೦ರವನ್ನು ಮಾಡಿ ವಿವಿಧ ಧಾರ್ಮಿಕ ಪೂಜಾ ವಿಧಿ-ವಿಧಾನಗಳೊ೦ದಿಗೆ ಶ್ರೀದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಿ ಪೂಜೆಯನ್ನು ನಡೆಸಲಾಗುತ್ತದೆ.

ಈ ಕಾರ್ಯಕ್ರಮಕ್ಕಾಗಿ ಈಗಾಗಲೇ ಸ್ವಯ೦ಸೇವಕರು ವಿಶೇಷ ಕಾಳಜಿಯೊ೦ದಿಗೆ ರ೦ಗಪೂಜೆ ಬೇಕಾಗುವ ಎಲ್ಲಾ ತಯಾರಿಯನ್ನು ಭರದಿ೦ದ ನಡೆಸುತ್ತಿದ್ದಾರೆ.

No Comments

Leave A Comment