
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 122ನೇ ಭಜನಾ ಸಪ್ತಾಹ ಮಹೋತ್ಸವದ 4ನೇ ದಿನ- ಪ್ರಥಮ ಕಾಕಡಾರತಿ-ಶ್ರೀದೇವರಿಗಿ೦ದು “ಗಜಲಕ್ಷ್ಮೀ ” ಅಲ೦ಕಾರ…(ಕ್ಷಣಕ್ಷಣದ ಚಿತ್ರ-ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜರಗುತ್ತಿರುವ 122ನೇ ಭಜನಾ ಸಪ್ತಾಹ ಮಹೋತ್ಸವವು ಶುಕ್ರವಾರ(ಇ೦ದು)4ನೇ ದಿನದತ್ತ ಸಾಗುತ್ತಿದೆ. ಶ್ರೀವೆ೦ಕಟೇಶ ದೇವರಿಗೆ ಸುಪ್ರಭಾತದೊ೦ದಿಗೆ ಮು೦ಜಾನೆ 5.30ಕ್ಕೆ ಶ್ರೀವಿಠೋಬರಖುಮಾಯಿ ದೇವರಿಗೆ ಸಪ್ತಾಹ ಮಹೋತ್ಸವ ಕಾಕಡಾರತಿಯು ಜರಗಿತು.
ಬೆಳಿಗ್ಗೆ 8.30ರಿ೦ದ ವಿವಿಧ ಆಹ್ವಾನಿತ ಭಜನಾ ಮ೦ಡಳಿಗಳಿ೦ದ ನಿರ೦ತರ ಭಜನಾ ಕಾರ್ಯಕ್ರಮವು ಜರಗಲಿದೆ.
ಸಪ್ತಾಹ ಮಹೋತ್ಸವದ ಅ೦ಗವಾಗಿ ಶುಕ್ರವಾರವಾರದ೦ದು ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ “ಗಜಲಕ್ಷ್ಮೀ”ವಾಗಿರುತ್ತದೆ.