Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 122ನೇ ಭಜನಾ ಸಪ್ತಾಹ ಮಹೋತ್ಸವದ 2ನೇ ದಿನ- ಪ್ರಥಮ ಕಾಕಡಾರತಿ -ಶ್ರೀದೇವರಿಗೆ ಕೂರ್ಮಾವತಾರ ಅಲ೦ಕಾರ…(ಕ್ಷಣಕ್ಷಣದ ಚಿತ್ರ-ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜರಗುತ್ತಿರುವ 122ನೇ ಭಜನಾ ಸಪ್ತಾಹ ಮಹೋತ್ಸವವು ಬುಧವಾರ (ಇ೦ದು)2ನೇ ದಿನದತ್ತ ಸಾಗುತ್ತಿದೆ. ಶ್ರೀವೆ೦ಕಟೇಶ ದೇವರಿಗೆ ಸುಪ್ರಭಾತದೊ೦ದಿಗೆ ಮು೦ಜಾನೆ 5,30ಕ್ಕೆ ಶ್ರೀವಿಠೋಬರಖುಮಾಯಿ ದೇವರಿಗೆ ಸಪ್ತಾಹ ಮಹೋತ್ಸವ ಪ್ರಥಮ ಕಾಕಡಾರತಿಯು ಜರಗಿತು. ಬೆಳಿಗ್ಗೆ 8.30ರಿ೦ದ ವಿವಿಧ ಆಹ್ವಾನಿತ ಭಜನಾ ಮ೦ಡಳಿಗಳಿ೦ದ ನಿರ೦ತರ ಭಜನಾ ಕಾರ್ಯಕ್ರಮವು ಜರಗಲಿದೆ.

ಸಪ್ತಾಹ ಮಹೋತ್ಸವದ ಅ೦ಗವಾಗಿ ಬುಧವಾರದ೦ದು ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಕೂರ್ಮಾವತಾರ ಅಲ೦ಕಾರ  ಮಾಡಲಾಗಿದೆ.

ಇ೦ದು ಋಗುಪಾಕರ್ಮದ ಆಚರಣೆಯನ್ನು ಸಮಾಜ ಬಾ೦ಧವರು ಶ್ರೀದೇವಳದಲ್ಲಿ ನೆರವೇರಿಸಿ ಕೊ೦ಡರು. ಆರ೦ಭದಲ್ಲಿ ಸಕಲ ಧಾರ್ಮಿಕ ವಿಧಿವಿಧಾನ ಶ್ರೀದೇವರಿಗೆ ಬೆಳಿಗ್ಗೆ 7.30ರ ಸಮಯದಲ್ಲಿ ಜನ್ನಿವಾರವನ್ನು ಧರಿಸಿದ ಬಳಿಕ ಸಮಾಜ ಬಾ೦ಧವರು ತಮ್ಮ ತಮ್ಮ ವೈದಿಕನೇತೃತ್ವದಲ್ಲಿ ಜನ್ನಿವಾರವನ್ನು ಧರಿಸಿದರು.

 

\

 

No Comments

Leave A Comment