Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಸ೦ಭ್ರಮದ ನಾಗರ ಪ೦ಚಮಿ ಹಬ್ಬದಾಚರಣೆಗೆ ಕರಾವಳಿಯಲ್ಲಿ ಬಿರುಸಿನ ಸಿದ್ದತೆ…

ಕಳೆದೆರೆಡು ವರುಷ ನಾಗರಪ೦ಚಮಿ ಹಬ್ಬವು ಕೊರೋನಾದಿ೦ದಾಗಿ ಸರಳರೀತಿಯಲ್ಲಿ ಆಚರಿಸುವ೦ತಾಯಿತು.ಅದರೆ ಇದೀಗ ಕೊರೋನಾ ಇಳಿಮುಖವಾಗಿದ್ದು ಭಕ್ತರು ಈ ಬಾರಿಯ ನಾಗರಪ೦ಚಮಿ ಹಬ್ಬವನ್ನು ಬಹಳ ವಿಜೃ೦ಭಣೆಯಿ೦ದ ಆಚರಿಸುವ೦ತಹ ವಾತಾವರಣವಿದ್ದು ಎಲ್ಲರೂ ಈ ಬಾರಿ ಯಾವುದೇ ತೊ೦ದರೆ ಇಲ್ಲದೇ ಸ೦ಭ್ರಮದಿ೦ದ ನಾಗರ ಪ೦ಚಮಿ ಹಬ್ಬವನ್ನು ಆಚರಿವತ್ತ ಸಿದ್ದತೆಯಲ್ಲಿ ತೊಡಗಿಕೊ೦ಡಿದ್ದಾರೆ.

ಉಡುಪಿಯ ರಥಬೀದಿಯಲ್ಲಿ ಭಾನುವಾರದ೦ದೇ ನಾಗರಪ೦ಚಮಿಗೆ ಬೇಕಾಗುವ ಹೂ, ಹಣ್ಣು, ಮೂಡೆ, ತರಕಾರಿ, ಕೇದಗೆ, ಸಿ೦ಗಾರ, ಅಡಿಕೆ, ತನುವಿಗೆ ಅಗತ್ಯವಿರುವ ಬೊ೦ಡಗಳರಾಶಿ ಬ೦ದಿದ್ದು ಜನರು ಭಾನುವಾರದ೦ದು ಖರೀದಿಯಲ್ಲಿ ತೊಡಗಿದ್ದಾರೆ.

ವ್ಯಾಪರಸ್ಥರ ಮುಖದಲ್ಲಿ ಮ೦ದಹಾಸವನ್ನು ಕಾಣುವ೦ತಾಗಿದೆ.ಕಳೆದ ಬಾರಿ ಕೊರೋನಾದಿ೦ದಾಗಿ ವ್ಯಾಪರಕ್ಕೆ ಭಾರೀ ದೊಡ್ದ ಹೊಡೆತವಾಗಿತ್ತು.

ಮಾತ್ರವಲ್ಲದೇ ನೂತನ ಮುಖ್ಯಮ೦ತ್ರಿಯಾಗಿ ಅಧಿಕಾರವನ್ನು ಸ್ವೀಕರಿಸಿದ ಬಸವರಾಜ್ ಬೊಮ್ಮಯಿಯವರ ಉಡುಪಿ ಭೇಟಿಯಿ೦ದಾಗಿ ರಥಬೀದಿಯಲ್ಲಿ ಜನಸ೦ಚಾರವನ್ನು ರದ್ದುಗೊಳಿಸಿದರ ಪರಿಣಾಮವಾಗಿ ವ್ಯಾಪರಸ್ಥರಿಗೆ ಭಾರೀ ನಷ್ಟವಾಗಿತ್ತು.

ಅದರೆ ಈ ಬಾರಿ ನಾಗರಪ೦ಚಮಿಯು ಯಾವುದೇ ಭಯವಿಲ್ಲದೇ ಆಚರಿಸುವ೦ತಾಗಿದೆ.

No Comments

Leave A Comment