ಬರ್ಮಿಂಗ್‌ಹ್ಯಾಮ್: ಜು 30. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಮೊದಲ ಪದಕಕ್ಕೆ ಮುತ್ತಿಕ್ಕಿದೆ. ಒಂದು ಚಿನ್ನ, ಒಂದು ಬೆಳ್ಳಿ ಪದಕ ಭಾರತದ ಪಾಲಾಗಿದೆ.
400 ಮೀಟರ್ ಓಟದ ಸ್ಪರ್ಧೆಯಲ್ಲಿ ಹಿಮಾದಾಸ್ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಸಂಕೇತ್ ಮಹಾದೇವ್ ಸರ್ಗಾರ್ (21) ಅವರು 55 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ತನ್ನದಾಗಿಸಿಕೊಂಡಿದ್ದಾರೆ.
ಸಂಕೇತ್ ಒಟ್ಟು 248 ಕೆಜಿ (113+135) ಭಾರ ಎತ್ತಿಸಾಧನೆ ಮಾಡಿದ್ದಾರೆ. ಚಿನ್ನ ಗೆಲ್ಲುವ ಕಡೆಗೆ ತೀವ್ರ ಸೆಣಸಾಡಿದ ಸಂಕೇತ್ ಕೊನೆ ಕ್ಷಣದಲ್ಲಿ ಗಾಯಗೊಂಡರು. ಇದರಿಂದ ಅವರ ಚಿನ್ನದ ಆಸೆ ಕೈಗೂಡಲಿಲ್ಲ. ಬೆಳ್ಳಿ ಪದಕಕ್ಕೆ ಅವರು ತೃಪ್ತಿಪಟ್ಟುಕೊಳ್ಳಬೇಕಾಯಿತು.