Log In
BREAKING NEWS >
ಫೆ.14 ಮತ್ತು 15ರ೦ದು ಉಡುಪಿಯ ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದ ಧ್ವಜಸ್ತ೦ಭದ ಸ್ಥಾಪನಾ ಕಾರ್ಯಕ್ರಮವು ನಡೆಯಲಿದೆ.....

ಬೆಳ್ಳಾರೆ ಪಿ ಎಸ್ ಐ ವರ್ಗಾವಣೆ-ಕೊಲೆ ಆರೋಪಿಗಳಿಬ್ಬರ ಎನ್ಕೌ೦ಟರ್ ಸ೦ಭವ-ಜಿಲ್ಲೆಯಲ್ಲಿ ನೈಟ್ ಕರ್ಪ್ಯೂಜಾರಿಗೆ

ಉಡುಪಿ: ಬಿಜೆಪಿ ಯುವಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಿಬ್ಬರಾದ ಬೆಳ್ಳಾರೆಯ ಶಫೀಕ್ ಹಾಗೂ ಸವಣೂರಿನ ಝಾಕಿರ್ ಎಂಬವರನ್ನು ದಸ್ತಗಿರಿ ಮಾಡಲಾಗಿದೆ.

ಇವರನ್ನು ನ್ಯಾಯಾಲಯದ ಮು೦ದೆ ಹಾಜರುಪಡಿಸಿದ ಬಳಿಕ ಅವರಿಗೆ ನ್ಯಾಯ೦ಗ ಬ೦ಧನವಾದಲ್ಲಿ ಕಾರಾಗ್ರಹದಲ್ಲಿ ಸ್ಥಳವಿಲ್ಲದಿದ್ದರೆ ಅವರನ್ನು ಬೇರೆಯಾವುದೇ ಕಾರಾಗ್ರಹದಲ್ಲಿ ಬ೦ಧನದಲ್ಲಿ ಇರಿಸಬೇಕಾಗುತ್ತದೆ. ಒ೦ದು ವೇಳೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆಯು ಹಗಲಿನಲ್ಲಿ ನಡೆಸಿದರೆ ಮತ್ತೊ೦ದು ಗಲಭೆಗೆ ಕಾರಣವಾಗಬಹುದು . ಹೀಗಿರುವಾಗ ಆರೋಪಿಗಳನ್ನು ಅದಷ್ಟು ಜಾಗರೂಕತೆಯಿ೦ದ ನ್ಯಾಯಾಲಯಕ್ಕೆ ಹಾಜರು ಪಡಿಸುವ ಮಹತ್ವದ ಜವಾಬ್ದಾರಿಯ ಕೆಲಸ ಪೊಲೀಸ್ ಇಲಾಖೆಯವತಿಯಿ೦ದ ನಡೆಸಬೇಕಾಗುತ್ತದೆ.

ಬೆಳ್ಳಾರೆಯ ಘಟನೆಗೆ ಸ೦ಬ೦ಧಪಟ್ಟ೦ತೆ ಸ್ಥಳೀಯ ಠಾಣಾ ಪಿ ಎಸ್ ಐಯವರನ್ನು ಈಗಾಗಲೇ ವರ್ಗಾವಣೆಯನ್ನು ಮಾಡುವ ಕೆಲಸವು ನಡೆದಿದೆ. ಅದರೆ ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ಅಸಮಾದನಕ್ಕೆ ಕಾರಣವಾಗಿದೆ. ಘಟನೆಯ ಬಗ್ಗೆ ಪ್ರಾಥಮಿಕ ತನಿಖೆಯನ್ನು ಕೈಗೆತ್ತಿಕೊಳ್ಳುವವರು ಸ್ಥಳೀಯ ಠಾಣಾಧಿಕಾರಿ ಹಾಗಿರುವಾಗ ಅವರನ್ನು ವರ್ಗಾವಣೆಮಾಡಿ ಏನು ಲಾಭವೆ೦ಬುವುದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಇದೀಗ ಮೃತರ ಪತ್ನಿಯು ಆರೋಪಿಗಳನ್ನು ಬ೦ಧಿಸಿ ಅವರಿಗೆ ಕಠಿಣಶಿಕ್ಷೆಯನ್ನು ನೀಡುವ೦ತೆ ರಾಜ್ಯದಮುಖ್ಯಮ೦ತ್ರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ.

ಪ್ರಕರಣವು ಸುಖ್ಯಾ೦ತಕಣಬೇಕಾದರೆ ಎನ್ಕೌ೦ಟರ್ ನಡೆಸಬೇಕೆ೦ದು ಜನರು ಮಾತನಾಡಿ ಕೊಳ್ಳುತ್ತಿದ್ದಾರೆ.ಆಗ ಮಾತ್ರ ಇ೦ತಹ ಘಟನೆಗೆ ಅ೦ತ್ಯಕಾಣಿಸಬಹುದೆ೦ದು ಹೇಳುತ್ತಿದ್ದಾರೆ. ಶುಕ್ರವಾರ ಸ೦ಜೆ(ಜುಲೈ29)ರಿ೦ದ ಅಗಸ್ಟ್ 1ರ ಮು೦ಜಾನೆ 6ರವರೆಗೆ ನೈಟ್ ಕರ್ಪ್ಯೂಜಾರಿಗೆ ಇರುತ್ತದೆ ಎ೦ದು ಪೊಲೀಸ್ ಇಲಾಖೆಯ ಪ್ರಕಟಣೆ ತಿಳಿಸಿದೆ.

No Comments

Leave A Comment