Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಉಡುಪಿ : ನಿಲ್ಲದ ಬಿಜೆಪಿ ಕಾರ್ಯಕರ್ತರ ಆಕ್ರೋಶ – ಸಾಮೂಹಿಕ ರಾಜೀನಾಮೆ ಘೋಷಣೆ

ಉಡುಪಿ:ಜು 27.ಪ್ರವೀಣ್ ನೆಟ್ಟಾರು ಹತ್ಯೆಯ ಬೆನ್ನಲ್ಲೇ ಬಿಜೆಪಿ ಸರಕಾರದ ಮೇಲೆ ಅಸಮಾಧಾನಗೊಂಡು ಸಾಮೂಹಿಕವಾಗಿ ಉಡುಪಿಯ ಯುವ ಮೋರ್ಚಾ ಸೇರಿದಂತೆ ಕಾರ್ಯಕರ್ತರು ಸಾಮೂಹಿಕವಾಗಿ ರಾಜೀನಾಮೆ ನೀಡುತ್ತಿದ್ದಾರೆ. ಕೇವಲ ಬೈಲ ಕೆರೆ ವಾರ್ಡ್ ಒಂದರಲ್ಲಿ 50 ಕ್ಕೂ ಹೆಚ್ಚು ಮಂದಿ ಬಿಜೆಪಿ ಕಾರ್ಯಕರ್ತರು ರಾಜೀನಾಮೆ ನೀಡಿದ್ದಾರೆ.ಉಡುಪಿ ತಾ

ಲೂಕಿನ ಮಲ್ಪೆಯ ಬೈಲಕೆರೆ ಬಿಜೆಪಿ ಕಾರ್ಯಕರ್ತರು, ಬಿಜೆಪಿಯಲ್ಲಿ ಹಲವಾರು ಜವಾಬ್ದಾರಿ ಹಾಗೂ ಕಾರ್ಯಕರ್ತರಾಗಿ ದುಡಿಯುತ್ತಿದ್ದೇವೆ. ನಾವು ಹಿಂದು ಕಾರ್ಯಕರ್ತರ ನಿರಂತರ ಹತ್ಯಾಕಾಂಡದಿಂದ ಬೇಸತ್ತು, ನೋವು ತಡೆಯಲಾಗದೆ ತಮ್ಮಲ್ಲಿ ನೀಡುತ್ತಿರುವ ಸಾಮೂಹಿಕ ರಾಜಿನಾಮೆ ಪತ್ರ, ಹಿಂದು ಕಾರ್ಯಕರ್ತರ ಸುರಕ್ಷತೆಯ ಬಗ್ಗೆ ಯೋಚಿಸದ ತಮ್ಮ ಸರಕಾರದಿಂದ ವಿಶ್ವಾಸ ಕಳೆದುಕೊಂಡಿರುವುದರಿಂದ ಅತ್ಯಂತ ನೋವಿನಿಂದ ಈ ಕಠಿಣ ನಿರ್ದಾರ ತೆಗೆದುಕೊಂಡಿರುತ್ತೇವೆ. ಇದು ನಮ್ಮ ವಯಕ್ತಿಕ ನಿರ್ಧಾರವಾಗಿದ್ದು ನಮ್ಮ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಿಮುಕ್ತಿಗೊಳಿಸಿ ಎಂದು ವಿನಂತಿಸಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯ್ಲಾಡಿ ಸುರೇಶ್ ನಾಯಕ್ ರಿಗೆ ಪತ್ರವನ್ನು ಬರೆದಿದ್ದಾರೆ.

ತೆಂಕನಿಡಿಯೂರು-ಬಡಾನಿಡಿಯೂರು ಮಹಾಶಕ್ತಿಕೇಂದ್ರದ ಅಧ್ಯಕ್ಷರಾದ ವಿಜಯಪ್ರಕಾಶ್‌ ಬೈಲಕೆರೆ, ಶಕ್ತಿಕೇಂದ್ರದ ಅಧ್ಯಕ್ಷ ಶರತ್‌ ಕುಮಾರ್‌ ಬೈಲಕೆರೆ -ತೆಂಕನಿಡಿಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅರುಣ್ ಜತ್ತನ್ನ, ತೆಂಕನಿಡಿಯೂರು ವಾರ್ಡ್ ಸಮಿತಿಯ ಅಧ್ಯಕ್ಷರಾದ ಸತೀಶ್ ಆರ್ ಪೂಜಾರಿ, ಪಂಚಾಯತ್‌ ಸದಸ್ಯೆ ವಿಕಿತಾ ಸುರೇಶ್‌, ಕೋಟ ಕ್ಷೇತ್ರದಲ್ಲಿ ಸುಶಾಂತ್ ಶೆಟ್ಟಿ, ಉಪ್ಪುರು ಸುನಿಲ್ ಶೆಟ್ಟಿ, ಫಲಾನುಭವಿಗಳ ಪ್ರಕೋಷ್ಠದ ಸಂಚಾಲಕರಾದ ಸಂತೋಷ್ ಸುವರ್ಣ ಬೊಳ್ಜೆ , ಗ್ರಾಮಾಂತರ, ನಗರ, ಮೋರ್ಚಾದ ಅಧ್ಯಕ್ಷರುಗಳು, ಪ್ರದಾನ ಕಾರ್ಯದರ್ಶಿಗಳು, ಯುವ ಮೊರ್ಚಾ ಸದಸ್ಯತ್ವದಿಂದ ಹೊರಬರಲು ನಿರ್ಧರಿಸಿದ್ದಾರೆ.

ಇಷ್ಟಾಗ್ಯೂ ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರುಗಳು ಮಾತ್ರ ರಾಜೀನಾಮೆ ನೀಡುತ್ತಿಲ್ಲ ಏಕೆ ಎಂಬ ಪ್ರಶ್ನೆ ಕಾರ್ಯಕರ್ತರೊಳಗೆ ಕೇಳಿ ಬರುತ್ತಿದೆ. ಈಗಾಗಲೇ ನೂರಾರು ಮೋರ್ಚಾದ ಕಾರ್ಯಕರ್ತರು, ಬಿಜೆಪಿ ಸದಸ್ಯರು ಬಿಜೆಪಿಯ ಸರಕಾರದ ಅಸಹಾಯಕತೆಯನ್ನು ವಿರೋಧಿಸಿ ರಾಜೀನಾಮೆ ನೀಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

No Comments

Leave A Comment