Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಕಳ್ಳತನ ಪ್ರಕರಣ : ಮಲ್ಪೆ ಪೊಲೀಸರಿಂದ ನಾಲ್ವರು ಆರೋಪಿಗಳ ಬಂಧನ

ಮಲ್ಪೆ: ಉಡುಪಿ ಜಿಲ್ಲೆಯ ತೆಂಕನಿಡಿಯೂರಿನಲ್ಲಿ ನಡೆದ 1.80 ಲಕ್ಷ ರೂ. ಮೌಲ್ಯದ 80 ಸೆಂಟ್ರಿಂಗ್ ಶೀಟ್ ಮತ್ತು 4 ಪಿಲ್ಲರ್ ಬಾಕ್ಸ್ ಸೆಟ್ ಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಮಲ್ಪೆ ಪೊಲೀಸರು ಇಂದು ಬಂಧಿಸಿದ್ದಾರೆ.

ಬಂಧಿತರನ್ನು ಪುತ್ತೂರು ಸುಬ್ರಹ್ಮಣ್ಯ ನಗರ ನಿವಾಸಿಗಳಾದ ದೀಪಕ್ (19), ಕಲ್ಯಾಣಪುರ ಮೂಡು ತೋನ್ಸೆ ನಿವಾಸಿ ಸಾಗರ್ (36), ಬಂಟ್ವಾಳ ಫರಂಗೀಪೇಟೆ ನಿವಾಸಿ ಇಮ್ತಿಯಾಜ್ ಎ (39) ಮತ್ತು ಬಜಾಲ್ ನಿವಾಸಿ ಮೊಹಮ್ಮದ್ ಇಕ್ಬಾಲ್ (35) ಎಂದು ತಿಳಿದು ಬಂದಿದೆ.

ಬಂಧಿತರಿಂದ ಕಳ್ಳತನ ಮಾಡಿದ್ದ ಕಟ್ಟಡ ನಿರ್ಮಾಣಕ್ಕೆ ಬಳಸುವ ಕಬ್ಬಿಣದ ಸೆಂಟ್ರಿಂಗ್ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದೇ ವೇಳೆ ಆರೋಪಿಗಳು ಕೃತ್ಯಕ್ಕೆ ಒಳಸಿದ ಗೂಡ್ಸ್ ವಾಹನ ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದು ಅವುಗಳ ಅಂದಾಜು ಮೌಲ್ಯ ರೂಪಾಯಿ 1,80,000 ಆಗಿರುತ್ತದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

 ಎನ್. ವಿಷ್ಣುವರ್ಧನ್ ಐ.ಪಿ.ಎಸ್.,ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ, ಹಾಗೂ  ಎಸ್.ಟಿ. ಸಿದ್ದಲಿಂಗಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮತ್ತು  ಸುಧಾಕರ ನಾಯ್ಕ, ಪೊಲೀಸ್ ಉಪಾಧೀಕ್ಷಕರು ಉಡುಪಿ ಉಪವಿಭಾಗರವರ ನಿರ್ದೇಶನದಂತೆ  ಹಾಗೂ  ಶರಣ ಗೌಡ, ವೃತ್ತ ನಿರೀಕ್ಷಕರು ಮಲ್ಪೆ ವೃತ್ತರವರ ಮಾರ್ಗದರ್ಶನದಲ್ಲಿ ಮಲ್ಪೆ ಠಾಣೆಯ ಪಿ.ಎಸ್.ಐ. ಸಕ್ತಿವೇಲುರವರ ನೇತೃತ್ವದಲ್ಲಿ  1) ದೀಪಕ್ ಪ್ರಾಯ: 19 ವರ್ಷ ತಂದೆ: ಉಮೇಶ್ ವಾಸ: ಅಮ್ಮ ನಿಲಯ ಶಾಂತಿ ನಗರ ಕೊಳಂಬೆ ರಸ್ತೆ ಸುಬ್ರಹ್ಮಣ್ಯನಗರ ವಾರ್ಡ ಪುತ್ತೂರು ಗ್ರಾಮ ಉಡುಪಿ, 2) ಸಾಗರ್ ಪ್ರಾಯ:36 ವರ್ಷ ತಂದೆ: ದಿ! ಕೃಷ್ಣಪ್ಪ ತಿಂಗಳಾಯ ವಾಸ: ಕಡವಿನ ಬಾಗಿಲು ಸಸಿ ತೋಟ ಕಲ್ಯಾಣಪುರ ಮೂಡುತೋನ್ಸೆ ಗ್ರಾಮ, 3) ಇಮ್ತಿಯಾಜ್ ಎ  ಪ್ರಾಯ: 39 ವರ್ಷ ತಂದೆ: ಅಹಮ್ಮದ್ ಬಾವಾ ವಾಸ: ಹಳೆಂಗಡಿ ಇಂದಿರಾ ನಗರ, ಹಾಲಿ ವಾಸ: ಶ್ರೀ ರಾಮ ಶಾಲೆಯ ಹಿಂಬದಿ ಪರಂಗಿಪೇಟೆ ಬಂಟ್ವಾಳ, ಮಂಗಳೂರು ಮತ್ತು 4) ಮೊಹಮ್ಮದ್ ಇಕ್ಬಾಲ್ ಪ್ರಾಯ: 35 ವರ್ಷ ತಂದೆ:ಇಸ್ಮಾಯಿಲ್ ವಾಸ: ಪಕ್ಕಲಡ್ಕ, ಬಜಾಲ್ ಮಂಗಳೂರು,  ಎಂಬವರನ್ನು ದಸ್ತಗಿರಿ ಮಾಡಿ ಅವರು ಕಳ್ಳತನ ಮಾಡಿದ್ದ ಕಟ್ಟಡ ನಿರ್ಮಾಣಕ್ಕೆ ಬಳಸುವ  ಕಬ್ಬಿಣದ ಸೆಂಟ್ರಿಗ್  ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೇ  ವೇಳೆ  ಆರೋಪಿಗಳು  ಕೃತ್ಯಕ್ಕೆ  ಒಳಸಿದ ಗೂಡ್ಸ್  ವಾಹನ ಹಾಗೂ  ದ್ವಿಚಕ್ರ  ವಾಹನ  ವಶಪಡಿಸಿಕೊಂಡಿದ್ದು ಅವುಗಳ ಅಂದಾಜು ಮೌಲ್ಯ ರೂಪಾಯಿ 1,80,000 ಆಗಿರುತ್ತದೆ. ಆರೋಪಿಗಳನ್ನು  ನ್ಯಾಯಾಲಯಕ್ಕೆ  ಹಾಜರುಪಡಿಸಿದ್ದು ,ಮಾನ್ಯ  ನ್ಯಾಯಾಲಯವು ಆರೋಪಿತರಿಗೆ  ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ಈ ಕಾರ್ಯಾಚರಣೆಯಲ್ಲಿ ಮಲ್ಪೆ ಠಾಣೆಯ  ಪಿ.ಎಸ್.ಐ ಸಕ್ತಿವೇಲು, ಎಎಸ್ಐರವರಾದ ಜನಾರ್ಧನ ದೇವಾಡಿಗ,  ರತ್ನಾಕರ, ರವಿಚಂದ್ರ, ಸಿಬ್ಬಂದಿಯವರಾದ ಲೋಕೆಶ್, ಸಂತೋಷ, ಜಯರಾಮ, ರವಿರಾಜ್, ಗುರುನಿಂಗಪ್ಪ ,ಜೀಪು ಚಾಲಕರಾದ ಮಹಾಬಲೇಶ್ವರ ರವರು  ಭಾಗವಹಿಸಿರುತ್ತಾರೆ.

No Comments

Leave A Comment