Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಉಡುಪಿ: ‘ಐಪಿಸಿ ಸೆಕ್ಷನ್ 306ರಲ್ಲಿ ಈಶ್ವರಪ್ಪನ್ನ ಯಾಕೆ ಬಂಧಿಸಿಲ್ಲ’? -ಭಾಸ್ಕರ್ ರಾವ್

ಉಡುಪಿ:ಜು 26. ಮೊದಲು ಕಾಂಗ್ರೆಸ್ ಸರಕಾರಕ್ಕೆ 10% ಕಮಿಷನ್ ಸರಕಾರ ಅಂತಿದ್ರು. ಈಗ ಕಂಟ್ರಾಕ್ಟರ್ಸ್‌‌ಗಳೇ 40% ಕಮಿಷನ್ ಸರಕಾರ ಅಂತಿದ್ದಾರೆ. ಈಗ ಈಶ್ವರಪ್ಪನವರಿಗೆ ಸಂತೋಷ್ ಪಾಟೀಲ್ ಆತ್ಮಹತ್ಯೆಯ ಆರೋಪದಿಂದ ಕ್ಲೀನ್ ಚಿಟ್ ಸಿಕ್ಕಿದೆ. ಹಾಗಾದರೆ ಸಾವೇ ಆಗಿಲ್ವ? ಆ ಕಂಟ್ರಾಕ್ಟರ್‌‌ಗೆ ಕಿರುಕುಳನೇ ಕೊಟ್ಟಿಲ್ವಾ? ಐಪಿಸಿ ಸೆಕ್ಷನ್ 306ರಲ್ಲಿ ಈಶ್ವರಪ್ಪನ್ನ ಯಾಕೆ ಅರೆಸ್ಟ್ ಮಾಡಿಲ್ಲ? ಅವರ ಪತ್ನಿ ನ್ಯಾಯ ಕೇಳಲು ಮುಖ್ಯಮಂತ್ರಿವರೆಗೂ ಹೋಗಿದ್ದಾರೆ. ಆದರೂ ಏನು ಕ್ರಮ ತೆಗೆದುಕೊಂಡಿಲ್ಲ, ಎಂದು ಬಿಜೆಪಿ ಸರಕಾರದ ವಿರುದ್ದ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಆಕ್ರೋಶ ವ್ಯಕ್ತ ಪಡಿಸಿದರು.

ಇಂದು ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “ಬಿಜೆಪಿ ಸರಕಾರಕ್ಕೆ ದುರಹಂಕಾರ ತುಂಬಿ ಹೋಗಿದೆ. ನಿಮಗೆ ಅಧಿಕಾರದ ಮದ ಬಂದಿದೆ. ನಿವೇಲ್ಲ ರಾಮನ ಭಕ್ತರಲ್ವಾ? ನಿಮ್ಮನ್ನು ರಾಮನೂ ಕ್ಷಮಿಸಲ್ಲ. ಏನೂ ನಡೆದಿಲ್ಲ ಅಂದ್ರೆ ತನಿಖೆಯನ್ನು ಯಾಕೆ ಮುಚ್ಚಿಟ್ಟರು? ಈಶ್ವರಪ್ಪ ಮತ್ತೊಮ್ಮೆ ಮಂತ್ರಿಯೆಯಾದರೆ ಬೀದಿ ಬೀದಿಯಲ್ಲಿ ಪ್ರತಿಭಟನೆ ಮಾಡ್ತೇವೆ. ಅವರ ಪಕ್ಷದ ಕಂಟ್ರಾಕ್ಟರ್ ಗಳಿಗೆ ರಕ್ಷಣೆ ಇಲ್ಲ. ಇನ್ನು ಬೇರೆಯವರಿಗೆ ಹೇಗೆ ರಕ್ಷಣೆ ಸಿಗುತ್ತೆ ಎಂದು ಪ್ರಶ್ನಿಸಿದ್ದಾರೆ.

ಇನ್ನು ಬಿಜೆಪಿ ರಾಜಕೀಯವಾಗಿ ತುಂಬಾ ಚತುರತೆ ಇದೆ. ಯಾವ ಪಕ್ಷದಲ್ಲಿ ಇದ್ರು ಅವರಿಗೆ ಭಯ ಹುಟ್ಟಿಸಿ ಅಥವಾ ಆಮಿಷ ಒಡ್ಡಿ ತನ್ನ ಪಕ್ಷಕ್ಕೆ ಸೆಳೆದುಕೊಳ್ಳುತ್ತದೆ. ಇಲ್ಲಾಂದ್ರೆ ರಾಜಕೀಯವಾಗಿ ಮುಗಿಸಿ ಬಿಡ್ತೀರಿ, ಎಂದು ಟೀಕೆ ಮಾಡಿದರು

ಬಿಜೆಪಿ ಸರಕಾರ ಇತ್ತೀಚಿಗೆ ಸಿಡಿ ಸರಕಾರ ಆಗಿದೆ. ನ್ಯಾಯ ಸಮ್ಮತವಾಗಿಲ್ಲ . ಅಶ್ಲೀಲ ವಿಡಿಯೋ ಸಿಡಿ ಪ್ರಕರಣದಲ್ಲಿ ಸಿಲುಕಿದ್ದ ಶಾಸಕ ಈಗ ಮತ್ತೆ ತನ್ನನು ಶಾಸಕ ಮಾಡಿ ಎಂದು ದಿಲ್ಲಿಗೆ ಹೋಗಿ ಕೂತಿದ್ದಾರೆ. ಇನ್ನು ಕೆಲವರು ಸಿಡಿ ಹೊರಬಾರದಂತೆ ನೋಡಿಕೊಳ್ಳುತ್ತಿದ್ದಾರೆ. ಇಂದೆಂಥಹ ಸರಕಾರ ಎಂದು ಜನಪ್ರತಿನಿಧಿಗಳ ವಿರುದ್ದ ವ್ಯಂಗ್ಯವಾಡಿದರು.

No Comments

Leave A Comment