Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರೊ.ಎಮ್.ಸುಧಾಕರ ರಾವ್ ನಿಧನ

ಉಡಪಿ : ಉಡುಪಿ ಪೂರ್ಣಪ್ರಜ್ಞಕಾಲೇಜಿನ ನಿವೃತ್ತ ಪ್ರೊ. ಎಮ್. ಸುಧಾಕರರಾವ್(84 ವರ್ಷ)ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲದ ಕೆ.ಎಂ. ಸಿ. ಆಸ್ಪತ್ರೆಯಲ್ಲಿಇಂದು(25-07-2022) ಪೂರ್ವಾಹ್ನ 8.30ಕ್ಕೆ ನಿಧನರಾದರು. ಬೀಡಿನಗುಡ್ಡೆಯಲ್ಲಿ ಇಂದು ಮಧ್ಯಾಹ್ನಅವರ ಅಂತ್ಯಕ್ರಿಯೆ ನೆರವೇರಿತು.

ಉಡುಪಿ ಪೂರ್ಣಪ್ರಜ್ಞಕಾಲೇಜಿನಲ್ಲಿ ಮೂವತ್ತೇಳು ವರ್ಷಗಳ ಕಾಲ ಉಪನ್ಯಾಸಕರಾಗಿ, ಒಂದುವರ್ಷ ಪ್ರಾಂಶುಪಾಲರಾಗಿ ಸೇವೆಸಲ್ಲಿಸಿದ್ದರು. ಜೀವಶಾಸ್ತ್ರದ ಬಗ್ಗೆ ಅಪಾರ ಪಾಂಡಿತ್ಯವನ್ನು ಹೊಂದಿದ ಸುಧಾಕರ್‍ರಾಯರು ಬರೆದ ಪುಸ್ತಕ ಪದವಿಪೂರ್ವ ವಿದ್ಯಾರ್ಥಿಗಳಿಗೆ ಪಠ್ಯವಾಗಿ, ಶಿಕ್ಷಣ ಕ್ಷೇತ್ರದಲ್ಲಿತುಂಬಾ ಪ್ರಸಿದ್ಧವಾಗಿದೆ. ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಮತ್ತುಅಪಾರಶಿಷ್ಯವೃಂದವನ್ನು ಅಗಲಿದ್ದಾರೆ.

ಇವರ ನಿಧನಕ್ಕೆಕಾಲೇಜಿನ ಪ್ರಾಂಶುಪಾಲ ಡಾ.ಎ. ರಾಘವೇಂದ್ರ, ಹಳೆ ವಿದ್ಯಾರ್ಥಿ ಸಂಘದಅಧ್ಯಕ್ಷ ಡಾ.ಬಿ.ಎಂ.ಸೋಮಯಾಜಿ, ಕಾರ್ಯದರ್ಶಿ ತೇಜಸ್ವಿ ಶಂಕರ್ ಹಾಗೂ ಅಪಾರ ಸಂಖ್ಯೆಯ ಶಿಷ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.

No Comments

Leave A Comment