Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 122ನೇ ಭಜನಾ ಸಪ್ತಾಹ ಮಹೋತ್ಸವದ ೬ನೇ ದಿನ-ಇ೦ದು "ರ೦ಗಪೂಜೆ" ಶ್ರೀದೇವರಿಗೆ ಗರುಡವಾಹನ ಅಲ೦ಕಾರ...

ದಿಶಾ ಪಟಾನಿ ಹಾಟ್ ಅವತಾರಕ್ಕೆ ಬಿತ್ತು ಕತ್ತರಿ : ಸಿನಿಮಾ ತಂಡಕ್ಕೆ ಬಿಗ್ ಶಾಕ್

ಮುಂಬಯಿ :  ಚಿತ್ರದ ಯಶಸ್ಸಿನ ನಂತರದಲ್ಲಿ’ಏಕ್ ವಿಲನ್ ರಿಟರ್ನ್ಸ್​’ಸಿನಿಮಾ ತೆರೆಗೆ ಬರೋಕೆ ರೆಡಿ ಆಗಿದೆ.

ಆದರೆ ಇದೀಗ ಸಿನಿಮಾಗೆ ಬಿಗ್ ಶಾಕ್ ಎದುರಾಗಿದ್ದು ಸಿನಿಮಾದ ಹಲವು ಭಾಗಗಳಿಗೆ ಕತ್ತರಿ ಬಿದ್ದಿದೆ. ಹೌದು, ಈ ಚಿತ್ರ ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಳಿಸಿದೆ. ಈ ಚಿತ್ರದಲ್ಲಿ ದಿಶಾ ಪಟಾನಿ  ಹಾಟ್ ಅವತಾರ ತಾಳಿದ್ದಾರೆ. ಆದರೆ, ಇದಕ್ಕೆ ಕತ್ತರಿ ಹಾಕುವಂತೆ ‘ಏಕ್ ವಿಲನ್ ರಿಟರ್ನ್ಸ್’ ತಂಡಕ್ಕೆ ಸೂಚನೆ ನೀಡಿತ್ತು. ಇದನ್ನು ತಂಡದವರು ಒಪ್ಪಿದ್ದು, 9 ಸೆಕೆಂಡ್​ನ ದೃಶ್ಯಕ್ಕೆ ಕತ್ತರಿ ಹಾಕಿದ್ದಾರೆ.

ಇದಲ್ಲದೆ, ಇನ್ನೂ ಕೆಲ ಬದಲಾವಣೆಗಳನ್ನು ಮಾಡಿಕೊಂಡಿದೆ. ಈ ಚಿತ್ರದ ಟ್ರೇಲರ್ ಈಗಾಗಲೇ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆದುಕೊಂಡಿದೆ, ಸಿನಿಮಾದಲ್ಲಿ ಅನೇಕ ಕಡೆಗಳಲ್ಲಿ ರಕ್ತವನ್ನು ತೋರಿಸಲಾಗಿದೆ, ಕೆಲ ಇಂಟಿಮೇಟ್ ದೃಶ್ಯಗಳಿವೆ. ಇದಕ್ಕೆ ಕತ್ತರಿ ಹಾಕುವಂತೆ ಅಥವಾ ಈ ರೀತಿಯ ದೃಶ್ಯಗಳನ್ನು ಕಡಿಮೆ ಮಾಡುವಂತೆ ತಂಡಕ್ಕೆ ಸೆನ್ಸಾರ್ ಮಂಡಳಿ ಸೂಚನೆ ನೀಡಲಾಗಿತ್ತು.

No Comments

Leave A Comment